For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್-ಸಲ್ಮಾನ್ ಸಿನಿಮಾಗೆ ನಿರ್ದೇಶಕರೇ ಸಿಗುತ್ತಿಲ್ಲ: ಹುಡುಕಿ ಹುಡುಕಿ ಇಬ್ಬರೂ ಸುಸ್ತು!

  |

  RRR ಸಿನಿಮಾ ಬಳಿಕ ರಾಮ್ ಚರಣ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇತ್ತ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡ ದಕ್ಷಿಣದ ಕಡೆಗೆ ಮುಖ ಮಾಡುತ್ತಿದ್ದಾರೆ. ಈಗಾಗಲೇ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೆ ರಾಮ್ ಚರಣ್ ಜೊತೆನೂ ಸಿನಿಮಾ ಮಾಡುತ್ತಿದ್ದಾರಂತೆ.

  ಸಲ್ಮಾನ್ ಖಾನ್ ಹಾಗೂ ಮೆಗಾ ಫ್ಯಾಮಿಲಿ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಈ ಮಧ್ಯೆನೇ ಹೊಸ ಹೊಸ ಪ್ರಾಜೆಕ್ಟ್‌ಗಳು ಸೆಟ್ಟೇರುತ್ತಿವೆ. ಟಾಲಿವುಡ್‌ನಲ್ಲಿ ಮೆಗಾ ಪವರ್‌ಸ್ಟಾರ್ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ಸಿನಿಮಾ ಬಗ್ಗೆ ಸಿಕ್ಕಾ ಪಟ್ಟೆ ದೊಡ್ಡ ಚರ್ಚೆಯಾಗುತ್ತಿದೆ. ಹೀಗಾಗಿ ಇಬ್ಬರ ಫ್ಯಾನ್ಸ್ ಭಲೇ ಖುಷಿಯಾಗಿದ್ದರೂ, ಸಿನಿಮಾ ಸೆಟ್ಟೇರುವುದಕ್ಕೆ ಒಂದು ಸಮಸ್ಯೆ ಕಾಡುತ್ತಿದ್ಯಂತೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ..

  ಇನ್‌ಸ್ಟಾಗ್ರಾಂನಲ್ಲಿ ರಾಮ್ ಚರಣ್ ಫಾಲೋ ಮಾಡುತ್ತಿರೋ ನಾಲ್ವರು ಬಾಲಿವುಡ್ ನಟಿಯರು ಇವರೇ!ಇನ್‌ಸ್ಟಾಗ್ರಾಂನಲ್ಲಿ ರಾಮ್ ಚರಣ್ ಫಾಲೋ ಮಾಡುತ್ತಿರೋ ನಾಲ್ವರು ಬಾಲಿವುಡ್ ನಟಿಯರು ಇವರೇ!

  ರಾಮ್ ಚರಣ್-ಸಲ್ಮಾನ್ ಸಿನಿಮಾ

  ರಾಮ್ ಚರಣ್-ಸಲ್ಮಾನ್ ಸಿನಿಮಾ

  ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಾಗೂ ರಾಮ್‌ ಚರಣ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಅಂದರೆ ನಿರೀಕ್ಷೆಗಳೇನು ಕಮ್ಮಿಯಿರಲ್ಲ. ಇಬ್ಬರಿಗೂ ಹಿಂದೆ-ಮುಂದೆ ಯೋಚನೆ ಮಾಡಿನೇ ಈ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಗುಸು ಗುಸು. ಮೂಲಗಳ ಪ್ರಕಾರ, ರಾಮ್ ಚರಣ್ ಹಾಗೂ ಸಲ್ಮಾನ್ ಖಾನ್ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರೋದು ಬಹುತೇಕ ಖಚಿತ ಅಂತಲೇ ಹೇಳಲಾಗುತ್ತಿದೆ. ಆದರೆ, ಇಬ್ಬರಿಗೂ ಒಂದು ಸಮಸ್ಯೆ ಎದುರಾಗಿದ್ಯಂತೆ.

  ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!

  ನಿರ್ದೇಶಕರೇ ಸಿಗುತ್ತಿಲ್ಲ

  ನಿರ್ದೇಶಕರೇ ಸಿಗುತ್ತಿಲ್ಲ

  ಸಲ್ಮಾನ್ ಖಾನ್ ಹಾಗೂ ರಾಮ್ ಚರಣ್ ಸಿನಿಮಾವನ್ನು ನಿರ್ದೇಶನ ಮಾಡೋದು ಯಾರು? ಅನ್ನೋ ಪ್ರಶ್ನೆ ಸಹಜವಾಗಿಯೇ ಎದ್ದೇಳುತ್ತೆ. ಅದಕ್ಕೆ ಟಾಲಿವುಡ್‌ನಲ್ಲೂ ಉತ್ತರವಿಲ್ಲ. ಯಾಕಂದ್ರೆ, ಸಲ್ಮಾನ್ ಖಾನ್ ಸ್ವತ: ಈ ಚಿತ್ರಕ್ಕೆ ಉತ್ತಮ ನಿರ್ದೇಶಕರನ್ನು ಹುಡುಕಾಟಕ್ಕೆ ಮುಂದಾಗಿದ್ದರಂತೆ. ಆದರೆ, ಅವರಿಗೆ ಒಳ್ಳೆ ನಿರ್ದೇಶಕ ಸಿಗದೆ ಕೈ ಚಲ್ಲಿ ಕೂತಿದ್ದಾರೆ. ನಿರ್ದೇಶಕರನ್ನು ಹುಡುಕಿ ಸುಸ್ತಾದ ಅಲ್ಲು ಭಾಯ್ ಆ ಕೆಲಸವನ್ನು ರಾಮ್‌ ಚರಣ್ ವಹಿಸಿದ್ರಂತೆ. ಆದರೆ, ರಾಮ್ ಚರಣ್‌ಗೂ ಇಬ್ಬರನ್ನೂ ಸರಿಯಾಗಿ ಹ್ಯಾಂಡಲ್‌ ಮಾಡಬಲ್ಲ ನಿರ್ದೇಶಕ ಇನ್ನೂ ಸಿಕ್ಕಿಲ್ವಂತೆ. ಇದು ಟಾಲಿವುಡ್‌ನಲ್ಲಿ ಸದ್ಯ ಓಡಾಡುತ್ತಿರೋ ಸುದ್ದಿ.

  ಸ್ಕ್ರಿಪ್ಟ್ ರೆಡಿ.. ಡೈರೆಕ್ಟರ್ ಇಲ್ಲ

  ಸ್ಕ್ರಿಪ್ಟ್ ರೆಡಿ.. ಡೈರೆಕ್ಟರ್ ಇಲ್ಲ

  ಟಾಲಿವುಡ್‌ನಲ್ಲಿಸ ವರದಿಯಾಗಿರೋ ಪ್ರಕಾರ, ಸಲ್ಮಾನ್ ಖಾನ್ ಸ್ನೇಹಿತರೊಬ್ಬರು ಈ ಸಿನಿಮಾಗೆ ಹಣ ಹೂಡುತ್ತಿದ್ದಾರಂತೆ. ಈಗಾಗ್ಲೇ ಕಥೆಯನ್ನೂ ಹುಡುಕಿಟ್ಟದ್ದು, ಡೈರೆಕ್ಟರ್ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ನಿರ್ಮಾಪಕರಿಗೂ ಸರಿಯಾದ ನಿರ್ದೇಶಕರು ಸಿಗದೇ ಇರೋದ್ರಿಂದ ರಾಮ್‌ ಚರಣ್‌ಗೆ ಹುಡುಕುವಂತೆ ಸಲ್ಮಾನ್ ಖಾನ್ ಹೇಳಿದ್ದಾರೆ ಎನ್ನಲಾಗಿದೆ. ಆದ್ರೀಗ ಮೆಗಾ ಪವರ್‌ಸ್ಟಾರ್ ಅದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ಯಂತೆ.

  ಹೊಸ ಒಪ್ಪಿಕೊಂಡಿಲ್ಲ ರಾಮ್ ಚರಣ್

  ಹೊಸ ಒಪ್ಪಿಕೊಂಡಿಲ್ಲ ರಾಮ್ ಚರಣ್

  RRR ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ರಾಮ್ ಚರಣ್‌ ಸೋಲು ಕಾಣಬೇಕಾಯಿತು. 'ಆಚಾರ್ಯ' ಸಿನಿಮಾ ಇನ್ನಿಲ್ಲಂತೆ ನೆಲಕ್ಕಚ್ಚಿತ್ತು. ಹೀಗಾಗಿ ಶಂಕರ್ ನಿರ್ದೇಶಿಸುತ್ತಿರುವ 15ನೇ ಸಿನಿಮಾ ಮೇಲೆ ನಂಬಿಕೆ ಕೂತಿದ್ದಾರೆ. ಇತ್ತ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಬೇಕಿರುವುದರಿಂದ ಬೇರೆ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಅಂತಿದೆ ಟಾಲಿವುಡ್. ಆದರೆ, ಸಲ್ಮಾನ್ ಜೊತೆ ನಟಿಸುತ್ತಿರುವ ಸಿನಿಮಾ ಬಗ್ಗೆನೂ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  English summary
  Ram Charan And Salman Khan Not Searching Directors For Next Film, Know More.
  Saturday, September 10, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X