ಸಮಂತಾ ಮತ್ತು ರಾಮ್ ಚರಣ್ ಲಿಪ್ ಲಾಕ್ ದೃಶ್ಯ ಮತ್ತೆ ವೈರಲ್ ಆಗಿದ್ದೇಕೆ?

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕೇಳದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಲ್ಲಿದ್ದಾರೆ. ಸಿನಿಮಾ ವಿಚಾರಗಳ ಜೊತೆಗೆ ಸಮಂತಾ ವೈಯಕ್ತಿಕ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರ ಇದೀಗ ವೈರಲ್ ಆಗಿದೆ. ಇಬ್ಬರ ನಡುವೆ ಯಾವುದು ಸರಿ ಇಲ್ಲ ಎನ್ನುವ ಮಾಹಿತಿ ತಿಳಿದುಬರಿತ್ತಿದೆ.

ಈಗಾಗಲೇ ಸಮಂತಾ ಅಕ್ಕಿನೇನಿ ಕುಟುಂಬದಿಂದ ಹೊರಬಂದಿದ್ದು, ತನ್ನ ತಾಯಿ ಮನೆಯಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಆಗಲಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಇಬ್ಬರು ಮೌನವಾಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಸಮಂತಾ ಸಾಮಾಜಿಕಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತನ್ನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಂತಸ ಪಡುತ್ತಿದ್ದಾರೆ. ಈ ನಡುವೆ ಸಮಂತಾ ಮತ್ತು ರಾಮ್ ಚರಣ್ ನಡುವಿನ ಹಳೆಯ ಮುತ್ತಿನ ಕಥೆ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಮುಂದೆ ಓದಿ..

ರಾಮ್ ಚರಣ್ - ಸಮಂತಾ ಲಿಪ್ ಲಾಕ್ ಕಥೆ ಬಹಿರಂಗ

ರಾಮ್ ಚರಣ್ - ಸಮಂತಾ ಲಿಪ್ ಲಾಕ್ ಕಥೆ ಬಹಿರಂಗ

ನಟಿ ಸಮಂತಾ ಮತ್ತು ರಾಮ್ ಚರಣ್ ಇಬ್ಬರು ಸೂಪರ್ ಹಿಟ್ ರಂಗಸ್ಥಲಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಸಮಂತಾ ಇಬ್ಬರು ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಕಿಸ್ಸಿಂಗ್ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಿನಿಮಾ ಬಿಡುಗಡೆಯಾಗಿ ಮೂರ್ನಾಲ್ಕು ವರ್ಷಗಳಾದ ಮೇಲೆ ಇದೀಗ ಮತ್ತೆ ಈ ಘಟನೆಗೆ ಮರುಜೀವ ಬಂದಿದೆ. ರಾಮ್ ಚರಣ್ ಅವರಿಗೆ ಇಷ್ಟವಿಲ್ಲದಿದ್ದರೂ ಸಮಂತಾ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ.

ಹಳ್ಳಿ ಹುಡುಗಿ ಪಾತ್ರದಲ್ಲಿ ಸಮಂತಾ ನಟನೆ

ಹಳ್ಳಿ ಹುಡುಗಿ ಪಾತ್ರದಲ್ಲಿ ಸಮಂತಾ ನಟನೆ

ರಂಗಸ್ಥಲಂ ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಬಂದ ಸಿನಿಮಾ. ಈ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದ ಈ ಸಿನಿಮಾ ಸಮಂತಾ ಮತ್ತು ರಾಮ್ ಚರಣ್‌ಗೆ ದೊಡ್ಡ ಮೈಲೇಜ್ ತಂದುಕೊಟ್ಟಿತ್ತು. ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ ರಂಗಸ್ಥಲಂನಲ್ಲಿ ಹಳ್ಳಿ ಹುಡುಗಿಯಾಗಿ ಅಭಿಮಾನಿಗಳ ಮನಗೆದ್ದಿದ್ದರು. ರಾಮ್ ಚರಣ್ ಕೂಡ ಹಳ್ಳಿ ಹೈದನಾಗಿ ಮಿಂಚಿದ್ದರು.

ಲಿಪ್ ಲಾಕ್ ದೃಶ್ಯ ಮಾಡಲು ನಿರಾಕರಿಸಿದ್ದ ರಾಮ್

ಲಿಪ್ ಲಾಕ್ ದೃಶ್ಯ ಮಾಡಲು ನಿರಾಕರಿಸಿದ್ದ ರಾಮ್

ಈ ಸಿನಿಮಾದಲ್ಲಿನ ರಾಮ್ ಚರಣ್ ಮತ್ತು ಸಮಂತಾ ಲಿಪ್ ಲಾಕ್ ದೃಶ್ಯ ಚರ್ಚೆಗೆ ಕಾರಣವಾಗಿತ್ತು. ಆ ದೃಶ್ಯದ ಬಗ್ಗೆ ಚಿತ್ರತಂಡ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆದರೂ ಇಬ್ಬರ ಕಿಸ್ಸಿಂಗ್ ದೃಶ್ಯದ ಬಗ್ಗೆ ಸಾಕಷ್ಟು ಕಥೆಗಳು ಹರಿದಾಡುತ್ತಿದೆ. ಅಷ್ಟಕ್ಕೂ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ನಟ ರಾಮ್ ಚರಣ್ ಅವರಿಗೆ ಇಷ್ಟವಿರಲಿಲ್ಲವಂತೆ. ಆದರೆ ಆ ದೃಶ್ಯಕ್ಕೆ ಕಿಸ್ಸಿಂಗ್ ದೃಶ್ಯ ಅವಶ್ಯಕವಾಗಿ ಬೇಕು ಎನ್ನುವುದು ನಿರ್ದೇಶಕ ಸುಕುಮಾರ್ ವಾದ. ಆದರೆ ನಟ ರಾಮ್ ಚರಣ್ ತನಗೆ ಲಿಪ್ ಲಾಕ್ ದೃಶ್ಯಗಳು ಸರಿಹೊಂದುವುದಿಲ್ಲ ಎಂದು ರಾಮ್ ಚರಣ್ ತಿರಸ್ಕರಿಸಿದ್ದರಂತೆ. ಈ ದೃಶ್ಯದ ಬಗ್ಗೆ ಚರ್ಚೆ ನಡೆೆಸಿ ಕೊನೆಗೆ ಸಿನಿಮಾದಿಂದ ಲಿಪ್ ಲಾಕ್ ದೃಶ್ಯವನ್ನು ತೆಗೆದು ಹಾಕಲಾಯಿತು.

ಪತ್ನಿಗಾಗಿ ಕಿಸ್ಸಿಂಗ್ ದೃಶ್ಯ ನಿರಾಕರಿಸಿದ್ದ ರಾಮ್

ಪತ್ನಿಗಾಗಿ ಕಿಸ್ಸಿಂಗ್ ದೃಶ್ಯ ನಿರಾಕರಿಸಿದ್ದ ರಾಮ್

ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗ ನಿರ್ದೇಶಕ ಸುಕುಮಾರ್ ಮತ್ತೆ ರಾಮ್ ಚರಣ್ ಬಳಿ ಕೇಳಿದರು. ಆದರೂ ರಾಮ್ ಚರಣ್ ಒಪ್ಪಿಕೊಳ್ಳುವುದಿಲ್ಲ. ಪತ್ನಿ ಉಪಾಸನ ಕಾರಣಕ್ಕಾಗಿ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳಲು ನಿರಾಕರಿಸುತ್ತಾರೆ. ಕೊನೆಯದಾಗಿ ನಿರ್ದೇಶಕ ಸುಕುಮಾರ್ ಈ ದೃಶ್ಯಕ್ಕೆ ಕತ್ತರಿ ಹಾಕಿದರು. ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ಬಳಿಕ ನಿರ್ದೇಶಕ ಸುಕುಮಾರ್ ಮತ್ತೆ ಲಿಪ್ ಲಾಕ್ ದೃಶ್ಯದ ಬಗ್ಗೆ ರಾಮ್ ಚರಣ್ ಬಳಿ ಪ್ರಸ್ತಾಪ ಎತ್ತಿದರು.

ರಾಮ್ ಚರಣ್ ನನ್ನು ಒಪ್ಪಿಸಿದ ನಿರ್ದೇಶಕ

ರಾಮ್ ಚರಣ್ ನನ್ನು ಒಪ್ಪಿಸಿದ ನಿರ್ದೇಶಕ

ಹೊಸ ಆಲೋಚನೆಯೊಂದಿಗೆ ರಾಮ್ ಚರಣ್ ಜೊತೆ ಸುಕುಮಾರ್ ಚರ್ಚೆಗೆ ಇಳಿದರು. ನಿರ್ದೇಶಕರ ಹೊಸ ಆಲೋಚನೆ ರಾಮ್ ಚರಣ್‌ಗೆ ಸರಿ ಎನಿಸಿ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದರು. ಅಷ್ಟಕ್ಕೂ ಹೊಸ ಯೋಚನೆ ಎಂದರೆ ಗ್ರಾಫಿಕ್ಸ ಮೂಲಕ ಕಿಸ್ಸಿಂಗ್ ದೃಶ್ಯವನ್ನು ತೆರೆಮೇಲೆ ತರುವುದು. ಇದರಲ್ಲಿ ನಾಯಕಿಗೆ ಚುಂಬಿಸುವ ಅವಶ್ಯಕತೆ ಇಲ್ಲ.

ರಾಮ್ ಜೊತೆ ನಿಜವಾಗಿಯೂ ಲಿಪ್ ಲಾಕ್ ಮಾಡಿದ್ದ ಸಮಂತಾ

ರಾಮ್ ಜೊತೆ ನಿಜವಾಗಿಯೂ ಲಿಪ್ ಲಾಕ್ ಮಾಡಿದ್ದ ಸಮಂತಾ

ಸಮಂತಾ ಮತ್ತು ರಾಮ್ ಚರಣ್ ಇಬ್ಬರು ದೂರ ದಿಂದನೇ ಕಿಸ್ ಮಾಡಿದಂತೆ ನಟಿಸಿದರೆ ಸಾಕು ಎಂದು ಸುಕುಮಾರ್ ಹೇಳಿದ ಬಳಿಕ ರಾಮ್ ಚರಣ್ ಲಿಪ್ ಲಾಕ್ ದೃಶ್ಯಕ್ಕೆ ಒಪ್ಪಿಕೊಂಡರು. ಆದರೆ ಚಿತ್ರೀಕರಣ ನಡೆಯುವಾಗ ಸಮಂತಾ ನಿಜವಾಗಿಯೂ ಲಿಪ್ ಲಾಕ್ ಮಾಡಿಬಿಟ್ಟರು ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಆಗಲಿ ಅಥವಾ ರಾಮ್ ಚರಣ್, ಸಮಂತಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮಂತಾ ವಿಚ್ಛೇದನ ವಿಚಾರ ಜೊತೆಗೆ ಲಿಪ್ ಲಾಕ್ ದೃಶ್ಯ ವೈರಲ್ ಆಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

More from Filmibeat

English summary
Real story Behind Ram Charan and Samantha lip lock scene in Rangasthalam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X