twitter
    For Quick Alerts
    ALLOW NOTIFICATIONS  
    For Daily Alerts

    RRR Box Office Collection: RRR ಕಲೆಕ್ಷನ್ ಟಾರ್ಗೆಟ್ 800 ಕೋಟಿ, ಇದು ಸಾವಿರ ಕೋಟಿ ಆಗುತ್ತಾ?

    |

    ಎಸ್‌ಎಸ್ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'ಆರ್‌ಆರ್‌ಆರ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಇಂದು (ಮಾರ್ಚ್25)ಕ್ಕೆ ಸಿನಿಮಾ ಅದ್ದೂರಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದೆ. ವಿಶ್ವಾದ್ಯಂತ 'RRR' ಚಿತ್ರದ ಘರ್ಜನೆ ಶುರುವಾಗಿದೆ.

    ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ 'RRR' ಚಿತ್ರ ಬಿಡುಗಡೆಯಾಗಿದೆ. ಚಿತ್ರ ರಿಲೀಸ್‌ಗೂ ವಾರದ ಮುನ್ನವೇ ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾಗಿತ್ತು. ಸಿನಿಮಾ ರಿಲೀಸ್‌ಗೂ ಮೊದಲೇ ಮುಂಗಡ ಬುಕ್ಕಿಂಗ್ ಆರಂಭ ಆಗಿತ್ತು. ಇನ್ನು 'RRR' ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಎದುರಾಗಿಲ್ಲ. ಬೇಕಾದಷ್ಟು ಥಿಯೇಟರ್‌ಗಳು ಕೂಡ ಸಿಕ್ಕಿವೆ.

    RRR movie revew: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವRRR movie revew: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

    Recommended Video

    RRR ಸಿನಿಮಾ ರಿಲೀಸ್ ದಿನವೇ ನಡೆದು ಹೋಯ್ತ ಕಹಿ ಘಟನೆ

    ಸಿನಿಮಾ ರಿಲೀಸ್ ಬಳಿಕ ಈಗ ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ. 'ಆರ್‌ಆರ್‌ಆರ್' ಚಿತ್ರ ಒಟ್ಟಾರೆ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಆರ್‌ಆರ್‌ಆರ್' ಚಿತ್ರದ ಕಲೆಕ್ಷನ್ ಟಾರ್ಗೆಟ್ ಕಡಿಮೆ ಏನು ಇಲ್ಲ. 800 ಕೋಟಿಗೂ ಅಧಿಕ ಗಳಿಕೆಯ ಲೆಕ್ಕಾಚಾರವನ್ನು ಹಾಕಿಕೊಂಡಿದೆ 'ಆರ್‌ಆರ್‌ಆರ್' ತಂಡ.

    800 ಕೋಟಿಗೂ ಅಧಿಕ ಕಲೆಕ್ಷನ್ ಟಾರ್ಗೆಟ್!

    800 ಕೋಟಿಗೂ ಅಧಿಕ ಕಲೆಕ್ಷನ್ ಟಾರ್ಗೆಟ್!

    'ಆರ್‌ಆರ್‌ಆರ್' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಈ ಚಿತ್ರಕ್ಕೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಸಿನಿಮಾ ಪ್ರೇಮಿಗಳು 'ಆರ್‌ಆರ್‌ಆರ್' ಚಿತ್ರವನ್ನು ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ನೋಡಲು ಕಾತರರಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಿರುವ 'ಆರ್‌ಆರ್‌ಆರ್' ತಂಡಕ್ಕೆ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಪುಡಿ ಮಾಡುವ ಇಂಗಿತ ಇದೆ. ಚಿತ್ರತಂಡಕ್ಕೆ ಒಟ್ಟಾರೆಯಾಗಿ 800 ಕೋಟಿಗೂ ಅಧಿಕ ಮೊತ್ತ ಕಲೆಹಾಕುವ ಟಾರ್ಗೆಟ್ ಇದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

    ಟಿಕೆಟ್ ದರ ಹೆಚ್ಚಳ, 1000 ಕೋಟಿ ಅನುಮಾನವಿಲ್ಲ!

    ಟಿಕೆಟ್ ದರ ಹೆಚ್ಚಳ, 1000 ಕೋಟಿ ಅನುಮಾನವಿಲ್ಲ!

    RRR ಚಿತ್ರತಂಡ ಅಂದು ಕೊಂಡ ಹಾಗೆ 800 ಕೋಟಿ ಟಾರ್ಗೆಟ್ ಸುಲಭವಾಗಿ ತಲುಪಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇನ್ನು ಸದ್ಯಕ್ಕೆ 'ಆರ್‌ಆರ್‌ಆರ್' ಚಿತ್ರದ ಟಿಕೆಟ್ ದರವನ್ನು ನೋಡಿದರೆ, ಸಿನಿಮಾ ತಪ್ಪದೇ ಸಾವಿರ ಕೋಟಿ ಕಲೆ ಹಾಕುತ್ತದೆ ಎನ್ನುವ ಸೂಚನೆ ಕೊಟ್ಟಿದೆ. ಕೇವಲ ಆಂಧ್ರ ಮತ್ತು ತೆಲಂಗಾಣದಲ್ಲೇ 'ಆರ್‌ಆರ್‌ಆರ್' ಚಿತ್ರ 250 ಕೋಟಿ ಮೊತ್ತ ಕಲೆ ಹಾಕಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಚಿತ್ರದ ಟಿಕೆಟ್ ದರ ಒಂದೊಂದು ಕಡೆ ಒಂದೊಂದು ರೀತಿ ಇದೆ. ಕರ್ನಾಟಕದಲ್ಲೇ ಕೆಲವು ಕಡೆಗಳಲ್ಲಿ 800 ರೂ. ಟಿಕೆಟ್ ದರ ಇದೆ. ಇನ್ನು ಮುಂಬೈನಲ್ಲಿ 2 ಸಾವಿರ ರೂಪಾಯಿಯ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಹಾಗಾಗಿ ಈ ಚಿತ್ರ ಸಾವಿರ ಕೋಟಿ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

    RRR ಪ್ರೀ ರಿಲಿಸ್ ಬ್ಯುಸಿನೆಸ್ 500 ಕೋಟಿ!

    RRR ಪ್ರೀ ರಿಲಿಸ್ ಬ್ಯುಸಿನೆಸ್ 500 ಕೋಟಿ!

    ಇನ್ನು RRR ಚಿತ್ರ ದೊಡ್ಡ ಮಟ್ಟದಲ್ಲಿ ಹೈಪ್ ಹುಟ್ಟುಹಾಕಿದ್ದು ರಿಲೀಸ್‌ಗೂ ಮುನ್ನವೇ ದೊಡ್ಡ ಮೊತ್ತವನ್ನ ಕಲೆಹಾಕಿದೆ. ಈಗಾಗಲೇ ಸಿನಿಮಾದ ಬಜೆಟ್ ಕಲೆಕ್ಟ್ ಮಾಡುವಲ್ಲಿ ಚಿತ್ರತಂಡ ಯಶಸ್ಸು ಕಂಡಿದೆ. ಚಿತ್ರದ ಬಜೆಟ್‌ಗಿಂತಲು ಹೆಚ್ಚಿನ ಮೊತ್ತವನ್ನು RRR ರಿಲೀಸ್‌ಗೂ ಮುನ್ನವೇ ಕಲೆಹಾಕಿದೆ. ವರದಿಗಳ ಪ್ರಕಾರ RRR ಚಿತ್ರದ ಪ್ರೀ ರಿಲೀಸ್ ಕಲೆಕ್ಷನ್ 500 ಕೋಟಿ ಆಗಿದೆ.

    RRR first half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿRRR first half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ

    400 ಕೋಟಿ ಬಜೆಟ್‌ನಲ್ಲಿ ಅದ್ದೂರಿಯಾಗಿ ತಯಾರಾದ 'RRR'!

    400 ಕೋಟಿ ಬಜೆಟ್‌ನಲ್ಲಿ ಅದ್ದೂರಿಯಾಗಿ ತಯಾರಾದ 'RRR'!

    'RRR' ಚಿತ್ರದ ಒಟ್ಟು ಬಜೆಟ್ 400 ಕೋಟಿ ಎಂದು ಹೇಳಲಾಗುತ್ತಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ರೆಟ್ರೋ ಕಹಾನಿ ಇರುವ ಕಾರಣ ಹೆಚ್ಚಿನ ಹಣ ಖರ್ಚು ಮಾಡಿದೆ ಚಿತ್ರ ತಂಡ. ಇನ್ನು ಮೊದಲ ದಿನವೇ ಸಿನಿಮಾ 200 ಕೋಟಿ ಹಣಗಳಿದರೆ ಮೊದಲ ದಿನವೇ ಚಿತ್ರದ ಬಜೆಟ್‌ನಲ್ಲಿ ಅರ್ಧ ಹಣ ಬಂದ ಹಾಗೆ. ಇನ್ನು ಮೊದಲ ವಾರಾಂತ್ಯ ಮುಗಿದ ಬಳಿಕ ಚಿತ್ರತಂಡ ಲಾಭದಲ್ಲಿ ಇರಲಿದೆ ಎನ್ನುವ ಲೆಕ್ಕಾಚಾರಗಳು ಹುಟ್ಟಿ ಕೊಂಡಿವೆ.

    English summary
    Ram Charan, Jr NTR, Alia Bhatt Starrer RRR Movie Box Office Collection Target Is 830 Crore, Know More.
    Friday, March 25, 2022, 11:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X