For Quick Alerts
  ALLOW NOTIFICATIONS  
  For Daily Alerts

  ರಾಮ್‌ ಚರಣ್‌, ಶಂಕರ್ ಸಿನಿಮಾದ ದುಬೈ ಈವೆಂಟ್‌ಗೆ ಯಶ್ ಗೆಸ್ಟ್: 19ನೇ ಸಿನಿಮಾಗೆ ಸಿಕ್ಕಿತಾ ಸುಳಿವು?

  |

  ಶಂಕರ್ ಯಾರಿಗೆ ಗೊತ್ತಿಲ್ಲ ಹೇಳಿ? ಶಂಕರ್ ಸಿನಿಮಾಗಳನ್ನು ಫಾಲೋ ಮಾಡಿಕೊಂಡು ಬಂದವರಿಗೆ ಅವರ ಮೇಕಿಂಗ್ ಹೇಗಿರುತ್ತೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಂಕರ್ ಕಥೆ ಹೆಣೆಯುತ್ತಿದ್ದಾರೆ ಅಂತ ಗೊತ್ತಾದರೆ ಸಾಕು ಸೂಪರ್‌ಸ್ಟಾರ್‌ಗಳು ಕರ್ಚೀಫ್ ಹಾಕೋಕೆ ರೆಡಿಯಾಗುತ್ತಾರೆ. ಇಂತಹ ಬಹುಬೇಡಿಕೆಯ ನಿರ್ದೇಶಕನ ಹೊಸ ಸಿನಿಮಾ ಫುಲ್ ಸ್ವಿಂಗ್‌ನಲ್ಲಿ ನಡೆಯುತ್ತಿದೆ.

  ಶಂಕರ್ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ತೆಲುಗು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್ ತೇಜಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ರಾಮ್‌ ಚರಣ್ 15ನೇ ಸಿನಿಮಾ ಕೂಡ ಹೌದು. ಹೀಗಾಗಿ ಟಾಲಿವುಡ್‌ನಲ್ಲಿ ಕುತೂಹಲ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಹಾಗಂತ ಕೇವಲ ಟಾಲಿವುಡ್‌ನಲ್ಲಿ ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್ ಮಂದಿ ಕೂಡ ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಅದಕ್ಕೊಂದು ಕಾರಣವಿದೆ.

  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸಲಿರೋ ಯಶ್: ಫ್ಯಾನ್ಸ್ ವೇಟಿಂಗ್!75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸಲಿರೋ ಯಶ್: ಫ್ಯಾನ್ಸ್ ವೇಟಿಂಗ್!

  ಶಂಕರ್ ಶೀಘ್ರದಲ್ಲಿಯೇ ತಮ್ಮ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಲಿದ್ದಾರಂತೆ ಅನ್ನೋ ವದಂತಿಗಳು ಹರಿದಾಡಲಿವೆ. ಆದರೆ, ಫಸ್ಟ್ ಲುಕ್ ಅನ್ನು ಭಾರತದಲ್ಲಿ ಅಲ್ಲ. ಬದಲಾಗಿ ದುಬೈನಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ. ಇದೇ ಈವೆಂಟ್‌ಗೆ ರಾಕಿ ಭಾಯ್ ಯಶ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರಂತೆ. ಅಷ್ಟಕ್ಕೂ ಈ ಸುದ್ದಿ ಹೊರಬೀಳುತ್ತಿದ್ದಂತೆ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಂತಿದೆ.

  ಆರ್‌ಸಿ 15 ದುಬಾರಿ ಈವೆಂಟ್

  ಆರ್‌ಸಿ 15 ದುಬಾರಿ ಈವೆಂಟ್

  ರಾಮ್‌ ಚರಣ್‌ ಹಾಗೂ ಶಂಕರ್ ಪ್ಯಾನ್ ಇಂಡಿಯಾ ಸಿನಿಮಾ ದುಬಾರಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಈ ಸಿನಿಮಾ ಶೂಟಿಂಗ್ ಅದ್ಧೂರಿಯಾಗಿಯೇ ನಡೆಯುತ್ತಿದೆ. ಸದ್ಯಕ್ಕೆ ಶಂಕರ್ ಇನ್ನೂ ಟೈಟಲ್ ಇಟ್ಟಿಲ್ಲ. ಆರ್‌ಸಿ 15 ಅನ್ನೋ ಟೈಟಲ್‌ ಅಡಿಯಲ್ಲಿ ಈ ಸಿನಿಮಾ ಸೆಟ್ಟೇರಿದ್ದು, ಅದೇ ಹೆಸರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೇ ಸಿನಿಮಾದ ಫಸ್ಟ್ ಲುಕ್ ಈವೆಂಟ್ ಅನ್ನು ದುಬೈನಲ್ಲಿ ಮಾಡಬೇಕು ಅಂತ ಶಂಕರ್ ತೀರ್ಮಾನ ಮಾಡಿದ್ದಾರಂತೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳು ಈಗಾಗಲೇ ಆರಂಭ ಆಗಿದೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ.

  ಮೆಗಾಸ್ಟಾರ್ ಬರ್ತ್‌ಡೇಗೆ ಮೆಗಾ ಈವೆಂಟ್

  ಮೆಗಾಸ್ಟಾರ್ ಬರ್ತ್‌ಡೇಗೆ ಮೆಗಾ ಈವೆಂಟ್

  ಆರ್‌ಸಿ 15 ಫಸ್ಟ್ ಪೋಸ್ಟರ್ ಈವೆಂಟ್ ಆಗಸ್ಟ್ 22ಕ್ಕೆ ನಡೆಯಲಿದೆ ಅನ್ನೋ ಟಾಲಿವುಡ್‌ ಮೂಲಗಳಿಂದ ಬಂದ ಸುದ್ದಿ. ಇದೇ ದಿನ ಯಾಕೆ ಅಂದ್ರೆ, ಆಗಸ್ಟ್ 22ರಂದು ಮೆಗಾಸ್ಟಾರ್ ಚಿರಂಜೀವಿ 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅದೇ ದಿನ ರಾಮ್‌ ಚರಣ್ ಪ್ಯಾನ್ ಇಂಡಿಯಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸ್ಕೆಚ್ ಹಾಕಿದೆ. ಈ ಸ್ಪೆಷಲ್ ಈವೆಂಟ್ ಅನ್ನು ಅದ್ಧೂರಿಯಾಗಿ ಮಾಡಲು ಇಬ್ಬರು ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  ದುಬೈ ಈವೆಂಟ್‌ನಲ್ಲಿ ಯಶ್ ಅತಿಥಿ

  ದುಬೈ ಈವೆಂಟ್‌ನಲ್ಲಿ ಯಶ್ ಅತಿಥಿ

  ದಿಲ್ ರಾಜು ನಿರ್ಮಾಣ ಮಾಡುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ಸ್ಪೆಷಲ್‌ ಈವೆಂಟ್‌ನಲ್ಲಿ ಇಬ್ಬರಿಗೆ ಆಹ್ವಾನ ನೀಡಿದ್ದಾರಂತೆ. ಒಬ್ಬರು ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಆಗಿದ್ದರೆ, ಇನ್ನೊಬ್ಬರು ರಾಕಿ ಬಾಯ್ ಯಶ್. ಇಬ್ಬರೂ ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾರಿಂದಲೂ ಮಾಹಿತಿ ಹೊರಬಿದ್ದಿಲ್ಲ. ಆದರೆ ಯಶ್ ಅಭಿಮಾನಿಗಳಿಗೆ ಅವರ ಮುಂದಿನ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಸಿಕ್ಕಿದೆ.

  ಯಶ್ 19ನೇ ಸಿನಿಮಾ ಬಗ್ಗೆ ಸುಳಿವು

  ಯಶ್ 19ನೇ ಸಿನಿಮಾ ಬಗ್ಗೆ ಸುಳಿವು

  ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ ಬಳಿಕ ಅವರ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಕೆಲವು ದಿನಗಳಲ್ಲಿ ರಾಕಿ ಬಾಯ್ 19ನೇ ಸಿನಿಮಾವನ್ನು ರಾಕಿ ಭಾಯ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಮಾತು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಒಂದ್ವೇಳೆ ದುಬೈ ಕಾರ್ಯಕ್ರಮಕ್ಕೆ ಯಶ್ ವಿಶೇಷ ಅತಿಥಿಯಾಗಿ ಹೋದರೆ, ಶಂಕರ್ ಹಾಗೂ ಯಶ್ ಸಿನಿಮಾ ಮಾಡೋ ಬಗ್ಗೆ ಸುಳಿವು ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

  Recommended Video

  Sonu Srinivas Gowda | ಸ್ಪೂರ್ತಿ ಸೋನು ನಡುವೆ ಮಾತಿನ ಚಕಮಕಿ | Filmibeat Kannada
  English summary
  Ram Charan Shankar Movie RC 15 First Look Launch In Dubai: Yash And Pawan Kalyan Guest, Know More.
  Wednesday, August 10, 2022, 15:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X