ಶ್ರೀದೇವಿಯಾದ ರಾಮ್ ಗೋಪಾಲ್ ವರ್ಮಾ ಸಾವಿತ್ರಿ
ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಸದಾ ಒಂದು ಹೆಜ್ಜೆ ಮುಂದೇ ಇರುತ್ತಾರೆ. ಇತ್ತೀಚೆಗೆ ಅವರು 'ಸಾವಿತ್ರಿ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಈ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಿದ್ದರು.
ಶಾಲಾ ಬಾಲಕನೊಬ್ಬ ತನ್ನ ಟೀಚರನ್ನು ಕಾಮದ ದೃಷ್ಟಿಯಲ್ಲಿ ನೋಡುತ್ತಿರುವಂತೆ. ವಿದ್ಯಾರ್ಥಿಯನ್ನು ಟೀಚರ್ ಸಹ ಉತ್ತೇಜಿಸುತ್ತಿರುವಂತೆ ಆ ಪೋಸ್ಟರ್ ಇತ್ತು. ಇದು ಬಿಡುಗಡೆಯಾಗಿದ್ದೇ ತಡ. ಆಂಧ್ರದಲ್ಲಿ ಭಾರಿ ವಿವಾದ ವ್ಯಕ್ತವಾಯಿತು. [ಆಂಧ್ರ ಸಿನಿಸಂತೆಯಲ್ಲಿ ಗುಲ್ಲೆಬ್ಬಿಸಿದ ಸಾವಿತ್ರಿ ಟೀಚರ್]

ಈ ಚಿತ್ರದ ಬಗ್ಗೆ ವರ್ಮಾ ಹೇಳಿರುವುದೇನೆಂದರೆ, ಹದಿಹರೆಯದ ವಯಸ್ಸಿನಲ್ಲಿ ತಮಗೆ ಎದುರಾದ ಅನುಭವಗಳ ಆಧಾರದ ಮೇಲೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ ಎಂದಿದ್ದಾರೆ. ಈ ಚಿತ್ರದ ಟೈಟಲ್ ಬಿಡುಗಡೆಯಾದಂದಿನಿಂದ ವಿವಾದಗಳು ಸುತ್ತಿಕೊಂಡಿವೆ. ಇದೀಗ ಮತ್ತೊಂದಿಷ್ಟು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

More from Filmibeat
English summary
Ace director Ram Gopal Varma is back in news for all the wrong reasons. The teaser poster of his new regional film 'Savitri' (Now it as Sridevi) shows a little boy ogling at a woman’s navel.


Click it and Unblock the Notifications











