'ಇಸ್ಮಾರ್ಟ್' ರಾಮ್ ಪೋತಿನೇನಿ ಮದುವೆ: ಸ್ಕೂಲ್ ಕ್ರಶ್ ಜೊತೆಗೆ ವಿವಾಹವಂತೆ!
ತೆಲುಗು ನಟ ರಾಮ್ ಪೋತಿನೇನಿ ಟಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರು. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ, ರಾಮ್ ಪೋತಿನೇನಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಟಾಲಿವುಡ್‌ನಲ್ಲಿ ಈತನ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡುತ್ತಿದೆ.
ಹೌದು, ರಾಮ್ ಪೋತಿನೇನಿ ಮದುವೆ ಆಗಲು ಅಣಿಯಾಗಿದ್ದಾರಂತೆ. ಈ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿದೆ.
ಅದು ಕೂಡ ಹುಡುಗಿ ಯಾರು ಎನ್ನುವ ಮಾಹಿತಿಗಳು ಕೂಡ ಹರಿದಾಡುತ್ತಿವೆ. ಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ರಾಮ್ ಪೋತಿನೇನಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಈಗಾಗಲೇ ತೆರೆಮರೆಯಲ್ಲಿ ಮದುವೆ ತಯಾರಿ ನಡೆದಿದೆಯಂತೆ. ಅಷ್ಟಕ್ಕೂ ರಾಮ್‌ಪೋತಿನೇನಿ ಮದುವೆ ಯಾವಾಗ, ಈ ನಟನನ್ನು ಕೈ ಹಿಡಿಯುವ ಆ ಬೆಡಗಿ ಯಾರು ಎನ್ನುವುದನ್ನು ಮುಂದೆ ಓದಿ...

ರಾಮ್ ಪೋತಿನೇನಿಗೆ ಹೈ ಸ್ಕೂಲ್ ಗೆಳತಿ ಬಾಳಸಂಗಾತಿ!
ರಾಮ್ ಪೋತಿನೇನಿ ತನ್ನ ಹೈಸ್ಕೂಲ್ ಸ್ನೇಹಿತನನ್ನು ಬಾಳಸಂಗಾತಿಯಾಗಿ ಪಡೆಯುತ್ತಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿ ಇದ್ದಾರಂತೆ. ಸ್ನೇಹ ಪ್ರೀತಿಯಾಗಿ, ಈಗ ಈ ಜೋಡಿ ಮದುವೆಗೆ ಸಿದ್ಧವಾಗಿದೆ.
ಎರಡೂ ಕುಟುಂಬಸ್ಥರು ಇವರ ಮದುವೆಗೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಮದುವೆ ತಯಾರಿ ಜೋರಾಗಿ ನಡೆದಿದೆ.

ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮದುವೆ!
ರಾಮ್ ಪೋತಿನೇನಿ ಮದುವೆ ಸುದ್ದಿ ಬಂದಿದ್ದೇ, ಬಂದಿದ್ದು ಮದುವೆ ಯಾವಾಗ ಎನ್ನುವ ಬಗ್ಗೆಯೂ ಮಾಹಿತಿ ಹೊರ ಬಂದಿದೆ. ಇದೇ ವರ್ಷ ಸಿನಿಮಾ ಮದುಮಗ ಆಗ್ತಿದ್ದಾರೆ. ಕುಟುಂಬಸ್ಥರು ಸೇರಿ ಅದಾಗಲೇ ಮದುವೆ ನಿಶ್ಚಯ ಮಾಡಿದ್ದಾರಂತೆ. ಇದೆ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮದುವೆ ಆಗಲಿದೆಯಂತೆ. ಆದರೆ ಈ ವಿಚಾರವನ್ನು ಕುಟುಂಬಸ್ಥರು ಇನ್ನೂ ಧೃಡಪಡಿಸಿಲ್ಲ.

19ನೇ ವಯಸ್ಸಿಗೆ ರಾಮ್ ಪೋತಿನೇನಿ ಎಂಟ್ರಿ!
ರಾಮ್ ಪೋತಿನೇನಿ ತಮ್ಮ 19 ನೇ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಚಲನಚಿತ್ರವು 2006 ರಲ್ಲಿ ಬಿಡುಗಡೆಯಾದ ಇಲಿಯಾನ ಡಿ ಕ್ರೂಜ್ ನಟಿಸಿದ, ವೈವಿಎಸ್ ಚೌಧರಿ ನಿರ್ದೇಶನದ, 'ದೇವದಾಸ್' ಚಿತ್ರದ ಮೂಲಕ ರಾಮ್ ಗಮನ ಸೆಳೆದಿದ್ದರು. ಇಲ್ಲಿ ತನಕ ಹಲವು ಸಿನಿಮಾಗಳನ್ನು ಮಾಡಿದ್ದು, ಕನ್ನಡದ ನಟಿ ನಭಾ ನಟೇಶ್ ಜೊತೆಗೆ ನಟಿಸಿದ 'ಇಸ್ಮಾರ್ಟ್' ಶಂಕರ್ ಮೂಲಕ ಮತ್ತಷ್ಟು ಗಮನ ಸೆಳೆದಿದ್ದಾರೆ.

ತೆಲುಗು, ತಮಿಳಿನಲ್ಲಿ ರಾಮ್ ಬ್ಯುಸಿ!
ರಾಮ್ ಪೋತಿ ನೇನಿ ಸದ್ಯ ತೆಲುಗು ಚಿತ್ರಗಳ ಜೊತೆಗೆ ತಮಿಳೀನಲ್ಲೂ ಬ್ಯುಸಿಯಾಗಿದ್ದಾರೆ. ದ್ವಿಭಾಷೆಗಳಲ್ಲೂ ಸಿನಿಮಾ ಮಾಡ್ತಿದ್ದಾರೆ. 'ವಾರಿಯರ್'ಗಾಗಿ ನಿರ್ದೇಶಕ ಎನ್ ಲಿಂಗುಸ್ವಾಮಿ ಜೊತೆ ಜೋಡಿಸಿದ್ದು, ಕೃತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ರಾಮ್ ಹೇಗೆ ಜಾದು ಮಾಡಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











