For Quick Alerts
ALLOW NOTIFICATIONS
For Daily Alerts

ಸಮಾನ ಸಂಭಾವನೆ ಕೇಳಿದ ರಮ್ಯಾ, ಕೆರಳಿದ ಫ್ಯಾನ್ಸ್

By * ಜೇಮ್ಸ್ ಮಾರ್ಟಿನ್

'ಸಮಾಜದಲ್ಲಿ ಹೆಣ್ಣು ಗಂಡು ಸಮಾನರು, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಇಂದು ಸಬಲರಾಗಿದ್ದಾರೆ ಆದರೆ, ಅವರ ದುಡಿಮೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಇನ್ನೇಷ್ಟು ದಿನ ಈ ರೀತಿ ಲಿಂಗ ತಾರತಮ್ಯ ಮುಂದುವರೆಯಬೇಕು..' ಈ ರೀತಿ ಮಾಜಿ ಸಂಸದೆ ರಮ್ಯಾ ಅವರು ಫೇಸ್ ಬುಕ್ ನಲ್ಲಿ ಪುಂಖಾನುಪುಂಖವಾಗಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಅದರೆ, ರಮ್ಯಾ ಅವರ ಈ ಫೇಸ್ ಬುಕ್ ಪೋಸ್ಟ್ ಗೆ ಬೆಂಬಲಕ್ಕಿಂತ ತಿರುಗು ಬಾಣಗಳೇ ಸಿಕ್ಕಿವೆ.

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಲಕ್ಕಿಸ್ಟಾರ್ ಮತ್ತೊಮ್ಮೆ ಪವರ್ ಸ್ಟಾರ್ ಜತೆ ನಟಿಸಬೇಕಿತ್ತು. ಆದರೆ, ನಾನಾ ಕಾರಣಗಳಿಂದ ರಮ್ಯಾ ಅವರು ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಪಕ್ಕಾ ಆಗುತ್ತಿದ್ದಂತೆ ಹಬ್ಬಿದ ಸಂಭಾವನೆ ವಿಷಯದಲ್ಲಿ ರಮ್ಯಾ ಅವರು ಕಿರಿಕ್ ಮಾಡಿಕೊಂಡ್ದಾರೆ ಎಂಬ ಸುದ್ದಿ ಪಕ್ಕಾ ಆಗಿದೆ. ಸಂಭಾವನೆ ವಿಷಯದ ಬಗ್ಗೆ ರಮ್ಯಾ ಚಕಾರ ಎತ್ತಿದ್ದಾರೆ.

Post by Ramya.

ಈ ಹಿಂದೆ ತಾರಾ ಅವರು ಚಿತ್ರರಂಗದಲ್ಲಿನ ಸಂಭಾವನೆ ತಾರತಮ್ಯದ ಬಗ್ಗೆ ದನಿ ಎತ್ತಿದ್ದರು. ಅದರೆ, ಅದು ಯಾರ ಕಿವಿಗೂ ಕೇಳಿಸಿರಲಿಲ್ಲ. ಈಗ ಹೀರೋಗಳಿಗೆ, ಪರಭಾಷೆಯಿಂಬ ಬರುವ ಆಮದು ನಟಿಯರಿಗೆ ಎತ್ತಿ ಎತ್ತಿ ಕೊಡುವ ನಿರ್ಮಾಪಕರು ಹೀರೋಯಿನ್ ಗಳಿಗೆ ಏಕೆ ಕಡಿಮೆ ಮೊತ್ತ ನೀಡುತ್ತಾರೆ. ಆಮದು ನಟಿಯರಿಗೆ ಬಾದಾಮಿ ನಮಗೇಕೆ ಬಟಾಣಿ ಎಂದು ರಮ್ಯಾ ಗರಂ ಆಗಿದ್ದಾರೆ.

ಸಂಭಾವನೆ ವಿಷಯದಲ್ಲಿ ರಮ್ಯಾ ಆಕ್ಷೇಪಣೆಗಳೇನು

ಸಂಭಾವನೆ ವಿಷಯದಲ್ಲಿ ರಮ್ಯಾ ಆಕ್ಷೇಪಣೆಗಳೇನು

ಹೀರೋಗಳಿಗೆ ಸಿಗುವ ಸಂಭಾವನೆಯ ಕಾಲು ಭಾಗದಷ್ಟು ಮಾತ್ರ ನಮಗೆ ಸಿಗುತ್ತದೆ. ಪರಭಾಷೆ ನಾಯಕಿಯರಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿದೆ.

ಸೇವಂತಿ ಸೇವಂತಿ, ಆಕಾಶ್ ಹಾಗೂ ಅರಸು ಸಂಭಾವನೆ ಬಗ್ಗೆ ಮಾತುಕತೆ ನಡೆಸದೆ ಒಪ್ಪಿಕೊಂಡ ಚಿತ್ರಗಳು ನಿರ್ಮಾಪಕರ ಪರ ಸದಾ ನಿಂತಿದ್ದೇನೆ. ಆದರೆ, ನನಗೆ ಅನ್ಯಾಯವಾಗಿದೆ. ಎಂದು ರಮ್ಯಾ ಹೇಳಿದ್ದಾರೆ.

ಫೇಸ್ಬುಕ್ ನಲ್ಲಿ ರಮ್ಯಾ ಹಾಕಿರುವ ಪೋಸ್ಟ್ ಗೆ 2547 ಲೈಕ್ಸ್ 37 ಷೇರು ಪಡೆದುಕೊಂಡಿದೆ. ಮುಖ್ಯವಾಗಿ 344ಕ್ಕೂ ಅಧಿಕ ಕಾಮೆಂಟ್ ಬಂದಿವೆ

ಹಣವೇ ಮುಖ್ಯವಾದರೆ ಕ್ಷೇತ್ರ ಬದಲಾಯಿಸಿ

ಹಣವೇ ಮುಖ್ಯವಾದರೆ ಕ್ಷೇತ್ರ ಬದಲಾಯಿಸಿ

ಹಣವೇ ಮುಖ್ಯವಾದರೆ ಕ್ಷೇತ್ರ ಬದಲಾಯಿಸಿ. ಮೊದಲು ನಟನೆ ಬಗ್ಗೆ ಏಕಾಗ್ರತೆ ಬೆಳೆಸಿಕೊಳ್ಳಿ. ಇತರೆ ಭಾಷೆಯಲ್ಲಿ ನೀವು ನಟಿಸಿದ್ದಾಗ ಇದೇ ರೀತಿ ಸಮಸ್ಯೆ ಎದುರಿಸಿದ್ರಾ? ಆಗ ಏಕೆ ಮಾತನಾಡಲಿಲ್ಲ? ದೊಡ್ಮನೆ ಹುಡ್ಗ ಒಳ್ಳೆ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದು ತಪ್ಪಲ್ವ? ಮೊದಲು ನಿಮ್ಮದೇ ಮಾರುಕಟ್ಟೆ ನಿರ್ಮಿಸಿಕೊಳ್ಳಿ ನಂತರ ತಾನಾಗೇ ನಿರ್ಮಾಪಕರು ಸಂಭಾವನೆ ಹೆಚ್ಚಿಗೆ ನೀಡುತ್ತಾರೆ.- ಸಚಿನ್ ರೊಸಾರಿಯೋ

ಮೊದಲು ಕನ್ನಡ ಮಾತಾಡು ತಾಯಿ

ಮೊದಲು ಕನ್ನಡ ಮಾತಾಡು ತಾಯಿ

ಮೊದಲು ಚೆನ್ನಾಗಿ ಕನ್ನಡ ಮಾತಾಡು ತಾಯಿ ಆಮೇಲೆ ಇದೆಲ್ಲ, ಬಾಯಿ ತೆಗೆದ್ರೆ ಇಂಗ್ಲೀಷ್- ಮುತ್ತಣ್ಣ ಬಿಂಜವಡಗಿ

ನಿಮ್ಮ ಮಾತು ಸರಿಯಾಗಿದೆ ನೀವು ದನಿಯಾಗಿ

ನಿಮ್ಮ ಮಾತು ಸರಿಯಾಗಿದೆ ನೀವು ದನಿಯಾಗಿ

It's great that you are raising voice on behalf all the female actors Appreciate your audacity Love you & support your stand -ವೈಶಾಲಿ

ರಮ್ಯಾರಿಂದ ಮೂರ್ಖತನದ ಹೇಳಿಕೆ

ರಮ್ಯಾರಿಂದ ಮೂರ್ಖತನದ ಹೇಳಿಕೆ

Its such a foolish statement, its depends on the market value... Y u dont tell about the technicians behind the screen, these ppl worked hard for such small about wen comparing to others.... If these heroines want such huge payment, prove on screen.... Like kangana ranaut, vidya balan etc etc...ಅಜ್ಮಲ್ ಉಸ್ಮಾನ್ ಸಾಹೀಬ್

ದುಡ್ ಬರೋದು ಡೌಟು

ದುಡ್ ಬರೋದು ಡೌಟು

ದರ್ಶನ್ ಜೊತೆ ರಮ್ಯಾನ ಹಾಕೊಂಡ್ರು ಸಿನಿಮಾ ಓಡುತ್ತೆ... ಒಂದು ಹೊಸ ಹುಡುಗಿ ನ ಹಾಕೊಂಡ್ರು ಓಡುತ್ತೆ...ಅದೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆ ಒಬ್ಬ ಹೊಸ ಹುಡುಗನ್ನ ಹಾಕೊಂಡು ಹಿಟ್ ಮೂವಿ ರೀಮೇಕ್ ಮಾಡಿದ್ರೂ ಹಾಕಿರೋ ದುಡ್ ಬರೋದು ಡೌಟು. N u have huge "NAKRA " as a bonus so how can producer's tolerate..ದಯಾನಂದ ಗೌಡ ಹಾಸನ

ನಿಮಗೆ ಅಷ್ಟು ಫ್ಯಾನ್ಸ್ ಇದ್ರೆ ಧೈರ್ಯ ಮಾಡಿ

ನಿಮಗೆ ಅಷ್ಟು ಫ್ಯಾನ್ಸ್ ಇದ್ರೆ ಧೈರ್ಯ ಮಾಡಿ

ನಿಮಗೆ ಅಷ್ಟು ಫ್ಯಾನ್ಸ್ ಇದ್ರೆ ಧೈರ್ಯ ಮಾಡಿ ಸೋಲೋ ಆಕ್ಟಿಂಗ್ ಮಾಡಿ. ನಾಯಕನಿಲ್ಲದ ಚಿತ್ರ ಮಾಡಿ ನಾಯಕನ ತಕ್ಕ ಸಂಭಾವನೆ ಕೇಳಿ ನೋಡೋಣ-ಅರುಣ್ ಕುಮಾರ್

ಅಜಿತ್ ಮಾಧವ್ ಅವರ ಅನಿಸಿಕೆ

ಅಜಿತ್ ಮಾಧವ್ ಅವರ ಅನಿಸಿಕೆ

its right thing..wen we stand their side.nd also im support the statement because wen they get their reasonable amount they open up their dedication- ಅಜಿತ್ ಮಾಧವ್ ಅವರ ಅನಿಸಿಕೆ

English summary
Sandalwood queen Ramya is in news again for a cause! She has raised the issue of equal pay for both the genders in the Kannada film industry. Ramya said that female actors work equally hard as any male actor and deserves to be paid well This is not the first instance that an actress has raised the issue of gender equality.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X