twitter
    For Quick Alerts
    ALLOW NOTIFICATIONS  
    For Daily Alerts

    ಎನ್‌ಟಿಆರ್ ಮುಂದಿನ ಚಿತ್ರದಲ್ಲಿ ರಾಜಕಾರಣಿಯಾದ ಸ್ಟಾರ್ ಹೀರೋಯಿನ್!

    |

    ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ನಟಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಎನ್‌ಟಿಆರ್ ಇಬ್ಬರು ಮೊದಲ ಸಲ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರ ಮುಗಿಯುತ್ತಿದ್ದಂತೆ ತ್ರಿವಿಕ್ರಮ್ ನಿರ್ದೇಶನದಲ್ಲಿ ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರದ ಪ್ರಿ-ಪ್ರೊಡಕ್ಷನ್ ಆರಂಭಿಸಿರುವ ತ್ರಿವಿಕ್ರಮ್ ಚಿತ್ರಕ್ಕೆ ಬೇಕಾದ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಹ ಆರಂಭಿಸಿದ್ದಾರೆ.

    ಜೂನಿಯರ್ ಎನ್‌ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!ಜೂನಿಯರ್ ಎನ್‌ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!

    ತ್ರಿವಿಕ್ರಮ್ ಹಾಗೂ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಹಿರಿಯ ನಟಿಯೊಬ್ಬರು ರಾಜಕಾರಣಿ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    Ramya krishna Will Play Important Role In Jr NTR movie

    ಈ ಪಾತ್ರ ಬಹಳ ಪ್ರಮುಖವಾಗಿದ್ದು, ಇಡೀ ಚಿತ್ರದಲ್ಲಿ ಹೈಲೈಟ್ ಆಗಿರಲಿದೆಯಂತೆ. ಹಾಗಾಗಿ, ಈ ಪಾತ್ರಕ್ಕಾಗಿ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರನ್ನು ಕರೆತರುವ ಪ್ರಯತ್ನ ಸಾಗಿದೆ.

    ಬಾಹುಬಲಿ ಚಿತ್ರದಲ್ಲಿ ರಾಜಮಾತೆ ಶಿವಗಾಮಿಯಾಗಿ ಕಾಣಿಸಿಕೊಂಡ ಬಳಿಕ ರಮ್ಯಾಕೃಷ್ಣನ್ ಅವರ ಇಮೇಜ್ ಸಪೂರ್ಣವಾಗಿ ಬದಲಾಗಿದೆ. ರಮ್ಯಾಕೃಷ್ಣನ್ ಅವರಿಗಾಗಿ ಪಾತ್ರಗಳನ್ನು ಕ್ರಿಯೇಟ್ ಮಾಡುವತ್ತಾ ನಿರ್ದೇಶಕರು ಚಿತ್ತ ನೆಟ್ಟಿದ್ದಾರೆ.

    ತ್ರಿವಿಕ್ರಮ್ ತಮ್ಮ ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ಹಿರಿಯ ನಟಿಯನ್ನು ಆಯ್ಕೆ ಮಾಡಿಕೊಂಡು ಚಿತ್ರಕ್ಕೆ ಬಲ ತುಂಬುತ್ತಿದ್ದಾರೆ. ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ನಾದಿಯಾ, ಅಲಾ ವೈಕುಂಠಪುರಂಲೋ ಚಿತ್ರದಲ್ಲಿ ಟಬು ಪಾತ್ರ ಹೀಗೆ ಇತ್ತು. ಇದೀಗ, ರಮ್ಯಾಕೃಷ್ಣನ್ ಪಾತ್ರ ಸಹ ಅಷ್ಟೇ ಪ್ರಮುಖವಾಗಿರಲಿದೆಯಂತೆ.

    ಅಲಾ ವೈಕುಂಠಪುರಂಲೋ ಸಕ್ಸಸ್ ಬಳಿಕ ಎನ್‌ಟಿಆರ್ ಚಿತ್ರಕ್ಕಾಗಿ ತ್ರಿವಿಕ್ರಮ್ ಕೆಲಸ ಮಾಡುತ್ತಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಹಾಗು ನಿರ್ದೇಶನ ಸಹ ಅವರದ್ದೇ ಇರುತ್ತದೆ. ಇದಕ್ಕೂ ಮುಂಚೆ ಎನ್‌ಟಿಆರ್ ಜೊತೆ ಅರವಿಂದ ಸಮೇತ ವೀರ ರಾಘವ ಎಂಬ ಚಿತ್ರ ಮಾಡಿದ್ದರು ತ್ರಿವಿಕ್ರಮ್.

    English summary
    Ramya krishna will play important role in Jr NTR and trivikram srinivas movie.
    Wednesday, November 18, 2020, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X