For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?

  |
  Ramya will join Darshan upcoming movie Gandugali Madakari Nayaka | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ಗಂಡುಗಲಿ ಮದಕರಿ ನಾಯಕ' ಚಿತ್ರ ಮುಂದಿನ ತಿಂಗಳು ಅದ್ದೂರಿಯಾಗಿ ಸೆಟ್ಟೇರುತ್ತಿದೆ. ದರ್ಶನ್ ಸಿನಿಮಾ ಅಂದ್ಮೇಲೆ ನಾಯಕಿ ಯಾರಾಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತೆ. ದಕ್ಷಿಣ ಭಾರತೀಯ ಟಾಪ್ ನಟಿಯರಿಂದ ಹಿಡಿದು ಬಾಲಿವುಡ್ ವರೆಗೂ ನಾಯಕಿಯರ ಹೆಸರುಗಳು ಕೇಳಿ ಬರುತ್ತಿರುತ್ತವೆ.

  ಸದ್ಯ 'ಮದಕರಿ ನಾಯಕ'ನಿಗೆ ರಾಣಿಯರಾಗಲಿದ್ದಾರೆ ಎನ್ನುವ ಇಂಟ್ರಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಮದಕರಿ ನಾಯಕ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ವಾಪಸ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ರಮ್ಯಾ ಕೂಡ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗಕ್ಕೆ ಮರಳುವ ಬಗ್ಗೆ ಹೇಳಿಕೊಂಡಿದ್ದರು. ಹಾಗಾಗಿ ಈ ಸುದ್ದಿ ನಿಜ ಎನ್ನುತ್ತಿವೆ ಕೆಲವು ಮೂಲಗಳು.

  ರಮ್ಯಾ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್ ಕೊಟ್ಟರೆ ಅಚ್ಚರಿ ಪಡಬೇಡಿ.!ರಮ್ಯಾ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್ ಕೊಟ್ಟರೆ ಅಚ್ಚರಿ ಪಡಬೇಡಿ.!

  ಸದ್ಯ ರಾಜಕೀಯದಿಂದನೂ ದೂರ ಸರಿದಿರುವ ರಮ್ಯಾ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುವ ಸಾಧ್ಯತೆ ಇದೆ. ಯಾಕಂದ್ರೆ ಬಣ್ಣದ ಲೋಕದ ನಂಟು ಅಷ್ಟು ಸುಲಭವಾಗಿ ಬಿಟ್ಟುಹೋಗುವಂತಹದ್ದು ಅಲ್ಲ. ಚಿತ್ರರಂಗ ತೊರೆದ ಅದೆಷ್ಟು ನಟಿಯರು ಐದಾರು ವರ್ಷಗಳಲ್ಲೆ ವಾಪಸ್ ಆಗಿದ್ದಾರೆ. ರಮ್ಯಾ ಕೂಡ ಬಣ್ಣದ ಲೋಕಕ್ಕೆ ಮರಳುತ್ತಾರೆ ಅಂದರೆ ಅಚ್ಚರಿ ಪಡಬೇಕಾಗಿಲ್ಲ.

  'ಮದಕರಿ ನಾಯಕ' ರಮ್ಯಾ ರೀ-ಎಂಟ್ರಿಗೆ ಉತ್ತಮ ಸಿನಿಮಾ

  'ಮದಕರಿ ನಾಯಕ' ರಮ್ಯಾ ರೀ-ಎಂಟ್ರಿಗೆ ಉತ್ತಮ ಸಿನಿಮಾ

  ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಾರೆ ಅಂದರೆ, ರಮ್ಯಾ ಕಮ್ ಬ್ಯಾಕ್ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ಹಾಗಾಗಿ ರೀ-ಎಂಟ್ರಿ ಸಿನಿಮಾ ದೊಡ್ಡ ಮಟ್ಟದ್ದಾಗಿರಬೇಕು, ಸ್ಟಾರ್ ನಟ, ದೊಡ್ಡ ಬ್ಯಾನರ್ ಮತ್ತು ಉತ್ತಮ ಪಾತ್ರವಿರಬೇಕು ಎನ್ನುವ ಕಂಡೀಶನ್ ಕೂಡ ಇರುವ ಸಾಧ್ಯತೆ ಇರುತ್ತೆ. ಅದರಂತೆ ಮದಕರಿ ನಾಯಕ ಸಿನಿಮಾ ರಮ್ಯಾ ಎಂಟ್ರಿಗೆ ಹೇಳಿ ಮಾಡಿಸಿದ ಹಾಗಿದೆ. ಹಾಗಾಗಿ ರಮ್ಯಾ 'ಮದಕರಿ ನಾಯಕ' ಚಿತ್ರದಲ್ಲಿ ನಾಯಕಿಯಾಗಿ ಮಿಂಚುವ ಸಾಧ್ಯತೆ ಹೆಚ್ಚಿದೆ.

  ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ

  ರಾಕ್ ಲೈನ್ ಪ್ರಯತ್ನ ಫಲಿಸುವ ಸಾಧ್ಯತೆ

  ರಾಕ್ ಲೈನ್ ಪ್ರಯತ್ನ ಫಲಿಸುವ ಸಾಧ್ಯತೆ

  ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದಕ್ಕೆ ಮತ್ತೊಂದು ಕಾರಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಹೌದು, ರಮ್ಯಾರನ್ನು ಒಪ್ಪಿಸಿ ಮತ್ತೆ ಚಿತ್ರರಂಗಕ್ಕೆ ಕರೆ ತರುವ ತಾಕತ್ ರಾಕ್ ಲೈನ್ ವೆಂಕಟೇಶ್ ಅವರಿಗಿದೆ. ಹಾಗಾಗಿ ರಾಕ್ ಲೈನ್ ಪ್ರಯತ್ನ ಪಟ್ಟರೆ ಖಂಡಿತ ರಮ್ಯಾ 'ಗಂಡುಗಲಿ ಮದಕರಿ ನಾಯಕ' ಸಿನಿಮಾಗೆ ನಾಯಕಿಯಾಗುವುದರಲ್ಲಿ ಯಾವುದೆ ಅನುಮಾನವಿಲ್ಲ.

  ದರ್ಶನ್ ಮತ್ತು ರಮ್ಯಾ

  ದರ್ಶನ್ ಮತ್ತು ರಮ್ಯಾ

  ದರ್ಶನ್ ಮತ್ತು ರಮ್ಯಾ ಕಾಂಬಿನೇಶನ್ ನಲ್ಲಿ ಒಂದೆ ಸಿನಿಮಾ ಬಂದಿರುವುದು.'ದತ್ತ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಮೋಹಕ ತಾರೆ 'ಗಂಡುಗಲಿ ಮದಕರಿ ನಾಯಕ' ಮೂಲಕ ವಾಪಸ್ ಆದರೆ ದರ್ಶನ್ ಜೊತೆ ರಮ್ಯಾ ಎರಡನೆ ಸಿನಿಮಾವಾಗಲಿದೆ. ಚಿತ್ರರಂಗದಿಂದ ದೂರ ಸರಿದ ಮೇಲೆ ರಮ್ಯಾ ಕಳೆದ ಕೆಲವು ವರ್ಷಗಳ ಹಿಂದೆ ಕಿರುತೆರೆಯ ಕಾರ್ಯಕ್ರಮವೊಂದಕ್ಕೆ ಗೆಸ್ಟ್ ಆಗಿ ಆಗಮಿಸಿದ್ದರು. ಆದೇ ಕಾರ್ಯಕ್ರಮಕ್ಕೆ ದರ್ಶನ್ ಕೂಡ ಗೆಸ್ಟ್ ಆಗಿ ಬಂದಿದ್ದರು. ಆ ನಂತರ ಇಬ್ಬರು ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.

  'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು. 'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.

  ಇತ್ತೀಚಿಗೆ ರಮ್ಯಾ ಹೇಳಿದ್ದೇನು?

  ಇತ್ತೀಚಿಗೆ ರಮ್ಯಾ ಹೇಳಿದ್ದೇನು?

  ನಟಿ ರಮ್ಯಾ ಸದ್ಯ ರಾಜಕೀಯದಿಂದನೂ ದೂರ ಸರಿದಿದ್ದಾರೆ. ಇತ್ತೀಚಿಗೆ ಪತ್ರಿಕೆಯೊಂದಕ್ಕೆ ನೀಡದ ಸಂದರ್ಶನವೊಂದರಲ್ಲಿ ರಮ್ಯಾ ಚಿತ್ರರಂಗಕ್ಕೆ ಮರಳುವ ಬಗ್ಗೆ ಹೇಳಿಕೊಂಡಿದ್ದಾರೆ. 'ಚಿತ್ರರಂಗದಿಂದ ಅವಕಾಶಗಳು ಬರುತ್ತಿವೆ. ಇಲ್ಲಿಯವರೆಗೂ ರಾಜಕೀಯದಲ್ಲಿ ಬ್ಯುಸಿಯಿದ್ದ ಕಾರಣ, ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಇನ್ಮೇಲೆ ಒಪ್ಪಿಕೊಂಡರೂ ಆಶ್ಚರ್ಯ ಇಲ್ಲ. ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದರಲ್ಲಿ ಮಜಾ ಇದೆ'' ಎಂದು ಹೇಳಿದ್ದಾರೆ. ಅಂದ್ಮೇಲೆ ರಮ್ಯಾ ಗಂಡುಗಲಿಗೆ ನಾಯಕಿಯಾದರು ಅಚ್ಚರಿ ಇಲ್ಲ.

  ಡಿಸೆಂಬರ್ ನಲ್ಲಿ ಚಿತ್ರಕ್ಕೆ ಮುಹೂರ್ತ

  ಡಿಸೆಂಬರ್ ನಲ್ಲಿ ಚಿತ್ರಕ್ಕೆ ಮುಹೂರ್ತ

  ದರ್ಶನ್ ಅಭಿನಯದ ಬಹು ನಿರೀಕ್ಷೆಯ ಗಂಡುಗಲಿ ಮದಕರಿ ನಾಯಕ ಚಿತ್ರ ಮುಂದಿನ ತಿಂಗಳು ಅಂದರೆ ಡಿಸಂಬರ್ 2ಕ್ಕೆ ಸೆಟ್ಟೇರಲಿದೆ. ಅದ್ದೂರಿ ಮುಹೂರ್ತದ ಮೂಲಕ ಚಿತ್ರಕ್ಕೆ ಚಾಲನೆ ಸಿಗಲಿದೆ. ಐತಿಹಾಸಿಕ ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ. ಮೊದಲ ಬಾರಿಗೆ ದರ್ಶನ್ ಮತ್ತು ರಾಜೇಂದ್ರ ಸಿಂಗ್ ಬಾಬು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ನಾದ ಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

  English summary
  Kannada famous actress Ramya may re-entry to Darshan starrer Gandugali Madakari Nayaka film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X