ಕೆಜಿಎಫ್ 3: ರಾಕಿ ಭಾಯ್ ಎದುರು ರಾಣಾ ದಗ್ಗುಬಾಟಿ ವಿಲನ್?

ನಿರ್ದೇಶಕ ಪ್ರಶಾಂತ್ ನೀಲ್ 'ಕೆಜೆಎಫ್ 2' ಚಿತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೆಜಿಎಫ್ ಮತ್ತು ರಾಕಿ ಬಾಯ್ ಕಥೆಯನ್ನು ಎರಡು ಕಂತುಗಳಲ್ಲಿ ಹೇಳಿದ ಪ್ರಶಾಂತ್ ನೀಲ್‌ ರಾಕಿ ಭಾಯ್ ಕಥೆಯನ್ನು ಮೂರನೇ ಕಂತಿನಲ್ಲೂ ಹೇಳಲಿದ್ದಾರೆ. ಈ ಬಗ್ಗೆ ಅವರು ಬಾಯಿಬಿಟ್ಟು ಹೇಳಿಕೊಂಡಿಲ್ಲ. ಆದರೆ 'ಕೆಜಿಎಫ್ 2' ಚಿತ್ರದ ಕೊನೆಯಲ್ಲಿ ಬಿಗ್ ಟ್ವಿಸ್ಟ್ ಇಡುವುದರ ಮೂಲಕ ಜನರ ಊಹೆಗೆ ಇದನ್ನು ಬಿಟ್ಟು ಬಿಟ್ಟಿದ್ದಾರೆ.

'ಕೆಜೆಎಫ್ 2' ಚಿತ್ರವನ್ನು ನೋಡಿದ್ದರೆ. ನೀವೂ ಕೂಡ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಹಲವು ಲೆಕ್ಕಾಚಾರಗಳನ್ನು ಮಾಡಿಯೇ ಇರುತ್ತೀರಾ. ರಾಕಿ ಏನಾದ?, ರಾಕಿ ಸತ್ತೇ ಹೋದನ, ಹಾಗಿದ್ದರೆ ಕೆಜಿಎಫ್ ಚಾಪ್ಟರ್ 3 ಬರುವುದಿಲ್ಲ, ಚಾಪ್ಟರ್ 3ಯಲ್ಲಿ ರಾಕಿಯ ಫ್ಲ್ಯಾಶ್ ಬ್ಯಾಕ್ ಹೇಳಲಾಗುತ್ತದೆಯಾ, ಅಥವಾ ಸಮುದ್ರ ಅಲೆಗಳ ನಡುವಿನಿಂದ ಎದ್ದು ಬಂದು ಮತ್ತೆ ತನ್ನ ಆಟವನ್ನು ರಾಕಿ ಮುಂದುವರೆಸುತ್ತಾನಾ ಎನ್ನುವ ಬಗ್ಗೆ ನಿಮ್ಮ ತಲೆಯಲ್ಲೂ ಯೋಚನೆಗಳು ಮೂಡಿರುತ್ತವೆ. ಆದರೆ ಇದೆಲ್ಲವನ್ನು ಮೀರಿದ್ದು ನಿರ್ದೇಶಕನ ತಲೆಯಲ್ಲಿ ಇರುತ್ತದೆ.

ಕೆಜಿಎಫ್ 3 ಚಿತ್ರ ಬಂದೇ ಬರುತ್ತೆ ಅಂತ ಚಿತ್ರತಂಡ ಹೇಳಿಕೊಂಡಿಲ್ಲ, ಹಾಗಂತ ಬರುವುದೇ ಇಲ್ಲ ಎಂದು ಕೂಡ ಹೇಳಿಲ್ಲ. ಹಾಗಾಗಿ ಕೆಜಿಎಫ್ 3 ಯಾವಾಗ ಬೇಕಾದರು ಸೆಟ್ಟೇರುವ ಸಾಧ್ಯತೆ ಇದ್ದೇ ಇದೆ. ಈಗಾಗಲೇ ಚಿತ್ರರಂಗದಲ್ಲಿ ಕೆಜಿಎಫ್ 3 ಪಾತ್ರವರ್ಗದ ಬಗ್ಗೆ ಗುಸು ಗುಸು ಹಬ್ಬಿದೆ. ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.

'ಕೆಜಿಎಫ್ 3'ಯಲ್ಲಿ ರಾಕಿ ಎದುರು ರಾಣಾ ದಗ್ಗುಬಾಟಿ!

'ಕೆಜಿಎಫ್ 3'ಯಲ್ಲಿ ರಾಕಿ ಎದುರು ರಾಣಾ ದಗ್ಗುಬಾಟಿ!

'ಕೆಜಿಎಫ್' ಸಿನಿಮಾ ಸರಣಿಯಲ್ಲಿ ನಾಯಕನಷ್ಟೇ ಹೆಸರುವಾಸಿ ಆಗಿಲ್ಲ, ಬದಲಿಗೆ ಪ್ರತೀ ಪಾತ್ರವೂ ತನ್ನದೇ ಪ್ರಾಮುಖ್ಯತೆಯ ಮೂಲಕ ಗುರುತಿಸಿಕೊಂಡಿದೆ. ಇನ್ನು ಚಿತ್ರದಲ್ಲಿ ರಾಕಿಗೆ ಎದುರಾಗುವ ಖಳನಾಯಕರು ಕೂಡ ಫೇಮಸ್ ಆಗಿದ್ದಾರೆ. 'ಕೆಜಿಎಫ್ 3' ಚಿತ್ರ ಬಂದರೆ, ಇಲ್ಲಿ ನಾಯಕ ಯಶ್ ಇದ್ದೇ ಇರುತ್ತಾರೆ. ಆದರೆ ಯಶ್‌ಗೆ ವಿಲನ್ ಯಾರು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎನ್ನಲಗುತ್ತಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ 'ಕೆಜಿಎಫ್ 3' ಚಿತ್ರದಲ್ಲಿ ರಾಣ ಇರಬೇಕು ಎನ್ನುವ ಕಮೆಂಟ್‌ಗಳು ವ್ಯಕ್ತವಾಗುತ್ತಿವೆ.

ಪ್ರಶಾಂತ್ ನೀಲ್, ರಾಣಾ ದಗ್ಗುಬಾಟಿ ಭೇಟಿ!

ಪ್ರಶಾಂತ್ ನೀಲ್, ರಾಣಾ ದಗ್ಗುಬಾಟಿ ಭೇಟಿ!

ರಾಣಾ ಬಗ್ಗೆ ಹೀಗೋಂದು ಸುದ್ದಿ ಹಬ್ಬಲು ಕಾರಣ ಆಗಿದ್ದು, ಪ್ರಶಾಂತ್ ನೀಲ್ ಮತ್ತು ರಾಣಾ ದಗ್ಗುಬಾಟಿ ಟ್ವೀಟ್. 'ಕೆಜಿಎಫ್ 2' ಚಿತ್ರವನ್ನು ನೋಡಿದ ಬಳಿಕ ಚಿತ್ರದ ಬಗ್ಗೆ ರಾಣಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಉತ್ತರಿಸಿದ ಪ್ರಶಾಂತ್ ನೀಲ್ ನಾವು ಶೀಘ್ರದಲ್ಲೇ ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಇವರ ಭೇಟಿ 'ಕೆಜಿಎಫ್3' ಚಿತ್ರಕ್ಕಾಗಿ ಎಂಬ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್ ಬ್ಯೂಸಿ!

ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್ ಬ್ಯೂಸಿ!

ಕೆಜಿಫ್ 2 ಮುಗೀತು. ಇನ್ನೇನಿದ್ದರೂ ಪ್ರಶಾಂತ್ ನೀಲ್ ಮುಂದಿನ ಹೆಜ್ಜೆ ಸಲಾರ್ ಕಡೆಗೆ ಇರಲಿದೆ. ಪ್ರಭಾಸ್ ಜೊತೆಗೆ ಪ್ರಶಾಂತ್ ನೀಲ್ ಮಾಡುತ್ತಿರುವ 'ಸಲಾರ್' ಸಿನಿಮಾ ಈಗಾಗಲೇ ಸೆಟ್ಟೇರಿದೆ. ಚಿತ್ರದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದು ಬಿಟ್ಟಿದೆ. ಆದರೆ ಸಿನಿಮಾ ಪೂರ್ಣಗೊಳ್ಳಲು ಇನ್ನು ಸಾಕಷ್ಟು ಚಿತ್ರೀಕರಣ ಮಾಡಬೇಕಿದೆ. ಈ ಚಿತ್ರದ ಜೊತೆಗೆ ಪ್ರಶಾಂತ್ ನೀಲ್ ಇನ್ನು 3 ತೆಲುಗು ಚಿತ್ರಗಳನ್ನು ಮಾಡಲಿದ್ದಾರೆ.

ಜೂನಿಯರ್ ಎನ್‌ಟಿಆರ್‌ಗೆ ನೀಲ್ ನಿರ್ದೇಶನ!

ಜೂನಿಯರ್ ಎನ್‌ಟಿಆರ್‌ಗೆ ನೀಲ್ ನಿರ್ದೇಶನ!

ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಬಳಿಕ ಮತ್ತೊಬ್ಬ ತೆಲುಗಿನ ಸ್ಟಾರ್ ನಟನಿಗೆ ಡೈರೆಕ್ಷನ್ ಮಾಡಲಿದ್ದಾರೆ. ನಟ ಜೂನಿಯರ್ ಎನ್‌ಟಿಆರ್‌ಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಜೂ.ಎನ್‌ಟಿಆರ್ ಕಥೆಯನ್ನು ಒಪ್ಪಿದ್ದು, ಸಿನಿಮಾದ ಮಾತು ಕಥೆ ಕೂಡ ಮುಗಿದೆ. ಜೂ.ಎನ್‌ಟಿಆರ್ ಕೊರಟಾಲ ಶಿವ ಚಿತ್ರವನ್ನು ಮುಗಿಸಿ ಪ್ರಶಾಂತ್ ನೀಲ್ ಚಿತ್ರವನ್ನು ಶುರು ಮಾಡಲಿದ್ದಾರೆ.

More from Filmibeat

English summary
Rana Daggubati Is Villain For Prashanth Neel Directional KGF 3, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X