»   » ಒಂದೇ ಮನೆಯಲ್ಲಿ ಬಾಲಿವುಡ್ ಪ್ರಣಯ ಪಕ್ಷಿಗಳು

ಒಂದೇ ಮನೆಯಲ್ಲಿ ಬಾಲಿವುಡ್ ಪ್ರಣಯ ಪಕ್ಷಿಗಳು

Posted By:
Subscribe to Filmibeat Kannada

ಬಾಲಿವುಡ್ ನ ಜೋಡಿ ಹಕ್ಕಿಗಳು ಒಂದೇ ಗೂಡು ಸೇರಿಕೊಂಡಾಗಿದೆ. ಈ ಹಿಂದೆಯೇ ಸಾಕಷ್ಟು ಬಾರಿ ಇವರಿಬ್ಬರೂ ಒಂದೇ ಮನೆ ಸೇರುತ್ತಿರುವ ಸುದ್ದಿ ಇತ್ತು. ಇದೀಗ ಅದು ಬಹುತೇಕ ನಿಜವಾಗಿದೆ. ಅದಕ್ಕೆ ಪುರಾವೆ ಎಂಬಂತೆ ಫೋಟೋ ಸಹ ಲಭ್ಯವಾಗಿದೆ.

ಕತ್ರಿನಾ ಕೈಫ್ ಹಾಗೂ ರಣಬೀರ್ ಕಪೂರ್ ಅವರ ನಡುವಿನ ಪ್ರೀತಿ ಪ್ರೇಮ ಪ್ರಣಯ ಇದೀಗ ಒಂದು ಹಂತಕ್ಕೆ ಬಂದಿದೆ. ಇವರಿಬ್ಬರೂ 2015ರಲ್ಲಿ ಹಸೆಮಣೆ ಏರಲಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಚಾರ. ಅದಕ್ಕೂ ಮುನ್ನ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇಬರಿಬ್ಬರ ನಡುವೆ ಲಿವ್ ಇನ್ ರಿಲೇಷನ್ ಶಿಪ್ ನಡೆಯುತ್ತಿದೆ. [ಕತ್ರಿನಾ, ರಣಬೀರ್ ಈಗ ಒಂದೇ ಗೂಡಿನ ಹಕ್ಕಿಗಳು]

Ranbir-Katrina Together At Their New House

ಇತ್ತೀಚೆಗೆ ಹೊಸ ಮನೆಗೆ ಗುಟ್ಟಾಗಿ ಗೃಹಪ್ರವೇಶ ಮಾಡಿರುವ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದದ್ದು ಹೀಗೆ. ಬ್ಯಾಂಕಾಕ್ ನಿಂದ ಶೂಟಿಂಗ್ ಮುಗಿಸಿಕೊಂಡ್ ಇವರಿಬ್ಬರೂ ಸೀದಾ ಈ ಮನೆಗೆ ಬರಬೇಕಾಗಿದ್ದವರು ಮುಂಬೈನ ಪಾಲಿಹಿಲ್ಸ್ ಬಂಗಲೆಗೆ ಭೇಟಿ ನೀಡಿದರು.

ಇದಕ್ಕ ಕಾರನ ರಣಬೀರ್‍ ಕಪೂರ್ ಅವರ ತಂದೆ ರಿಷಿ ಕಪೂರ್ ಅವರು ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವುದು. ಅವರ ಕ್ಷೇಮಸಮಾಚಾರ ವಿಚಾರಿಸಿಕೊಂಡ ಬಳಿಕ ಇಬ್ಬರೂ ಹೊಸ ಮನೆಯ ಬಳಿ ಹೀಗೆ ಕಾಣಿಸಿಕೊಂಡು ಗಮನಸೆಳೆದಿದ್ದಾರೆ.

ಇವರಿಬ್ಬರ ಪ್ರೇಮಾಯಣ ಈಗಾಗಲೆ ಇಬ್ಬರ ಮನೆಯ ಹಿರಿಯ ಕಿವಿಗೂ ಬಿದ್ದಿದ್ದ್ದು, ಎರಡೂ ಕುಟುಂಬಿಕರು ಆದಷ್ಟು ಬೇಗ ಮದುವೆ ಚಪ್ಪರ ಹಾಕಿಸಲು ಮುಂದಾಗಿದ್ದಾರೆ. ಬಹುಶಃ ಫೆಬ್ರವರಿ 2015ಕ್ಕೆ ಗಟ್ಟಿಮೇಳ ಮೊಳಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Ranbir Kapoor who has his new pad ready in Mumbai had plans to move in with his alleged girlfriend Katrina before their Jagga Jasoos shoot schedule in Bangkok. But now the rumour has now turned out true.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada