40 ಸಾವಿರ ಸ್ಕ್ರೀನ್‌ಗಳಲ್ಲಿ 'ರಾಮಾಯಣ' ಚಿತ್ರ ಬಿಡುಗಡೆ ನಿಜಾನಾ? ಎಲ್ಲಿ ಎಷ್ಟು ಸ್ಕ್ರೀನ್, ವಿತರಕರು ಸಿಕ್ಕಿಬಿಟ್ರಾ?

ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸರಣಿ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೀತಿದೆ. ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ತೆರೆಗೆ ಬರಲಿದೆ. ರಾಮನವಮಿ ಸಂಭ್ರಮದಲ್ಲಿ ಕಲಾವಿದರ ಲುಕ್ ರಿವೀಲ್ ಆಗುವ ಸುಳಿವು ಸಿಕ್ಕಿದೆ.

ಸಿನಿ ಜಗತ್ತಿನಲ್ಲೇ ಬಹಳ ಅದ್ಧೂರಿಯಾಗಿ 'ರಾಮಾಯಣ' ಸಿನಿಮಾ ನಿರ್ಮಾಣವಾಗ್ತಿದೆ. ಅಂದಾಜು 4000 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಚಿತ್ರವನ್ನು ಕಟ್ಟಿಕೊಡಲಾಗ್ತಿದೆ. ದೇಶ ವಿದೇಶದ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಸಣ್ಣ ಟೀಸರ್ ರಿಲೀಸ್ ಆಗಿ ಕುತೂಹಲ ಮೂಡಿಸಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಚಿತ್ರವನ್ನು ಕಟ್ಟಿಕೊಡಲಾಗ್ತಿದೆ. ಯಶ್ ಕೂಡ ಚಿತ್ರದ ಭಾಗವಾಗಿರುವುದು ಚಂದನವನದಲ್ಲಿ ಕುತೂಹಲ ಮೂಡಿಸಿದೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ.

Ranbir Sai pallavi Yash s Ramayana Set for Massive Global Release 40 000-Screen Rumors Spark Buzz

ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದು ವಿಶೇಷ. 4000 ಸಾವಿರ ಕೋಟಿ ರೂ. ಬಜೆಟ್ ಸಿನಿಮಾ ಅಂದಾಗ ಮಾರ್ಕೆಟಿಂಗ್, ರಿಲೀಸ್ ಕೂಡ ದೊಡ್ಡ ಮಟ್ಟದಲ್ಲೇ ಇರಬೇಕು. ಈಗಾಗಲೇ ಸಿನಿಮಾ ಬಿಡುಗಡೆ ಕರಸತ್ತು ಶುರುವಾಗಿದೆ. ವಿಶ್ವದಾದ್ಯಂತ 40 ಸಾವಿರ ಸ್ಕ್ರೀನ್‌ಗಳಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ರಾಮಾಯಣ ಕಾವ್ಯವನ್ನು ಇಡೀ ಪ್ರಪಂಚದ ಸಿನಿರಸಿಕರ ಮುಂದಿಡಬೇಕು ಎನ್ನುವ ಆಸೆಯಿಂದ ಸಿನಿಮಾ ಮಾಡುತ್ತಿರುವುದಾಗಿ ನಿಮಿತ್ ಮಹ್ಹೋತ್ರಾ ಹೇಳಿದ್ದಾರೆ. ಭಾರತೀಯರ ಸಿನಿಮಾ, ಧಾರಾವಾಹಿ, ನಾಟಕದ ರೂಪದಲ್ಲಿ ಶ್ರೀರಾಮ ಚರಿತ್ರೆಯನ್ನು ನೋಡಿದ್ದಾರೆ. ಆದರೆ ವಿದೇಶದಲ್ಲಿರುವವರಿಗೆ ನಮ್ಮ ಪುರಾಣ, ಕಾವ್ಯಾವನ್ನು ತೋರಿಸಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ಅಂದರೆ ಹೊರ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಬೇಕಿದೆ. ದೇಶ ವಿದೇಶದ ಸಾಕಷ್ಟು ಭಾಷೆಗಳಲ್ಲಿ ಒಟ್ಟಿಗೆ 'ರಾಮಾಯಣ' ಸಿನಿಮಾ ಬಿಡುಗಡೆ ಪ್ರಯತ್ನ ಮಾಡಲಾಗ್ತಿದೆ.

Ranbir Sai pallavi Yash s Ramayana Set for Massive Global Release 40 000-Screen Rumors Spark Buzz

ಭಾರತೀಯ ಚಿತ್ರಗಳನ್ನು ಹೆಸರು ಜನರಿಗೆ ತಲುಪಿಸಬೇಕು ಎಂದು ಇತ್ತೀಚೆಗೆ ಬಾಲಿವುಡ್ ನಟ ಆಮೀರ್ ಖಾನ್ ಹೇಳಿದ್ದರು. ಚೀನಾದಲ್ಲಿ ಲಕ್ಷಂತರ ಚಿತ್ರಮಂದಿರಗಳಿವೆ. ಭಾರತದಲ್ಲಿ 7ರಿಂದ 9 ಸಾವಿರ ಸ್ಕ್ರೀನ್ ಇದೆ. 'ಧುರಂಧರ್' ಚಿತ್ರವನ್ನು 15 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಿದ್ದರೆ ಫಲಿತಾಂಶ ಇನ್ನು ದೊಡ್ಡದಾಗಿ ಇರ್ತಿತ್ತು ಎಂದಿದ್ದರು. ಅದರ ಅರ್ಥ ನಮ್ಮ ಸಿನಿಮಾಗಳನ್ನು ದೊಡ್ಡದಾಗಿ ಬಿಡುಗಡೆ ಮಾಡಿದರೆ ದೊಡ್ಡಮಟ್ಟದ ಯಶಸ್ಸು ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

'ಟಾಕ್ಸಿಕ್' ಹಾಗೂ 'ಧುರಂಧರ್' ಚಿತ್ರಗಳನ್ನು ದಾಖಲೆ ಮಟ್ಟದ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಜೋರಾಗಿದೆ. ಅದೇ ರೀತಿ ಮುಂದೆ 'ರಾಮಾಯಣ' ಸರಣಿ ಸಿನಿಮಾಗಳನ್ನು ದೊಡ್ಡದಾಗಿ ಪ್ರೇಕ್ಷಕರ ಮುಂದೆ ಇಡುವ ಲೆಕ್ಕಾಚಾರ ಶುರುವಾಗಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ವಿಶ್ವದಾದ್ಯಂತ 12,400 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿತ್ತು. ಇದು ಹೊಸ ದಾಖಲೆ ಆಗಿತ್ತು. ಅದನ್ನು ಮೀರಿ 'ರಾಮಾಯಣ' ಸಿನಿಮಾ ತೆರೆಗೆ ಬರುವುದು ಖಚಿತ ಎನ್ನಬಹುದು.

ದೊಡ್ಡ ದೊಡ್ಡ ಸಂಸ್ಥೆಗಳು 'ರಾಮಾಯಣ' ಚಿತ್ರದ ಡಿಸ್ಟ್ರಿಬ್ಯೂಷನ್ ವಹಿಸಿಕೊಳ್ಳುವ ಸಾಧ್ಯೆತೆಯಿದೆ. ಉತ್ತರ ಭಾರತದಲ್ಲಿ ಅನಿಲ್ ತದಾನಿ(ಎಎ ಫಿಲ್ಮ್ಸ್), ಆಂಧ್ರ- ತೆಲಂಗಾಣ ರೈಟ್ಸ್ ದಿಲ್ ರಾಜು ಖರೀದಿಸುತ್ತಾರೆ, ಕರ್ನಾಟಕದ ರೈಟ್ಸ್ ಹೊಂಬಾಳೆ ಫಿಲ್ಮ್ಸ್ ಪಾಲಾಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಚೀನಾದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ, ಭಾರತದಲ್ಲಿ 7 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ದೊಡ್ಡಮಟ್ಟದಲ್ಲೇ 'ರಾಮಾಯಣ' ಸಿನಿಮಾ ಬಿಡುಗಡೆ ಆಗಲಿದೆ. ಆದರೆ 40 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಬಹುದು.

More from Filmibeat

Read more about: yash ranbir kapoor sai pallavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X