For Quick Alerts
  ALLOW NOTIFICATIONS  
  For Daily Alerts

  'ರಂಗಿತರಂಗ' ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿನೇ ಬೇಕಂತೆ.!

  By Suneetha
  |

  ಭಂಡಾರಿ ಸಹೋದರರ 'ರಂಗಿತರಂಗ' ಚಿತ್ರಕ್ಕೆ ಬಂಡವಾಳ ಹಾಕಿ ಕೋಟಿ-ಕೋಟಿ ಹಣ ಬಾಚಿಕೊಂಡ ನಿರ್ಮಾಪಕ ಎಚ್.ಕೆ ಪ್ರಕಾಶ್ ಅವರು ಇದೀಗ ರಕ್ಷಿತ್ ಶೆಟ್ಟಿ ಅವರ ಜೊತೆ ಕೈ ಜೋಡಿಸುತ್ತಿದ್ದಾರೆ.

  'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ರಿಕ್ಕಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮುಂತಾದ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಇದೀಗ ಹಿಟ್ ನಿರ್ಮಾಪಕ ಎಚ್.ಕೆ.ಪ್ರಕಾಶ್ ಅವರ ಜೊತೆ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಮಾಡಲು ತಯಾರಾಗಿದ್ದಾರೆ.['ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ]

  'ಉಳಿದವರು ಕಂಡಂತೆ' ಚಿತ್ರದಲ್ಲಿ ಕೆಲಸ ಮಾಡಿರುವ ಸಂಕಲನಕಾರ ಸಚಿನ್ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ಇನ್ನೂ ಹೆಸರಿಡದ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಮನೋಹರ್ ಜೋಷಿ ಅವರು ಕ್ಯಾಮರಾ ಕೈ ಚಳಕ ತೊರಲಿದ್ದು, ಚರಣ್ ರಾಜ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.[ನಟ-ನಿರ್ದೇಶಕನ ನಂತರ ನಿರ್ಮಾಪಕರಾಗಿ ಶೆಟ್ರ ಹೊಸ ವರಸೆ]

  ಈಗಾಗಲೇ ಚಿತ್ರದ ಸಿದ್ಧತೆಗಳು ಒಂದೊಂದಾಗಿ ನಡೆಯುತ್ತಿದ್ದು, ಅಧೀಕೃತ ಘೋಷಣೆ ಮಾಡುವುದಷ್ಟೇ ಬಾಕಿ ಇದೆ. ಇನ್ನು ನಟ ರಕ್ಷಿತ್ ಶೆಟ್ಟಿ ಅವರು ತಮ್ಮ 'ಕಿರಿಕ್ ಪಾರ್ಟಿ' ಚಿತ್ರ ಕಂಪ್ಲೀಟ್ ಆದ ಮೇಲೆ ನಿರ್ಮಾಪಕ ಪ್ರಕಾಶ್ ಅವರ ಜೊತೆ ಸೇರಿಕೊಳ್ಳಲಿದ್ದಾರೆ.

  ಒಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ 'ರಂಗಿತರಂಗ' [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ] ಚಿತ್ರದ ನಂತರ ಇದೀಗ 'ಆ' ಯಶಸ್ಸನ್ನು ಮತ್ತೆ ಮರುಕಳಿಸಲು ನಿರ್ಮಾಪಕ ಎಚ್.ಕೆ ಪ್ರಕಾಶ್ ಅವರು ಪಣ ತೊಟ್ಟಿದ್ದಾರೆ.

  English summary
  'RangiTaranga' fame producer H.K Prakash and Kannada Actor Rakshit Shetty will join hands for a new film. The movie is directed by Sachin, an editor, as director. He had previously worked in Kannada Movie 'Ulidavara Kandante' directed by Rakshit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X