Don't Miss!
- Sports
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಮಾಡಿರುವ ವಿರಾಟ್ ಕೊಹ್ಲಿ: ವಿಶ್ವದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ
- Automobiles
ಸ್ಕೋಡಾ ಕೊಡಿಯಾಕ್ ಎಸ್ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ
- News
ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಲು ಮನಸ್ಸು ಮಾಡದ ನಟಿ!
- Technology
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ರೀಮೇಕ್ ಆಗುವುದು ಹೊಸ ಸುದ್ದಿಯೇನಲ್ಲ. ಹಲವಾರು ದಶಕಗಳಿಂದಲೂ ದಕ್ಷಿಣ ಭಾರತದ ಸಿನಿಮಾಗಳನ್ನು ರೀಮೇಕ್ ಮಾಡಿ ಹಣ ಗಳಿಸುತ್ತಾ ಬಂದಿದೆ ಬಾಲಿವುಡ್.
ಡಾ.ರಾಜ್ಕುಮಾರ್ ಸಿನಿಮಾಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳನ್ನು ಬಾಲಿವುಡ್ಡಿಗರು ರೀಮೇಕ್ ಮಾಡಿ ಹಣ ಗಳಿಸಿದ್ದಾರೆ. ಆ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಕೆಲವು ದಿನಗಳ ಹಿಂದಷ್ಟೆ ಕನ್ನಡದ 'ದಿಯಾ' ಸಿನಿಮಾ ಹಿಂದಿಯಲ್ಲಿ 'ಡಿಯರ್ ದಿಯಾ' ಹೆಸರಲ್ಲಿ ರೀಮೇಕ್ ಆಗಿ ಬಿಡುಗಡೆ ಆಗಿದೆ.
ಇದೀಗ ಮತ್ತೊಂದು ಕನ್ನಡ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. ಈ ಬಾರಿ ಹೊಸ ಸಿನಿಮಾ ಅಲ್ಲದೆ, ಏಳು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. ಸಿನಿಮಾದ ನಾಯಕ ನಟನಾಗಲು ಇಬ್ಬರು ಸ್ಟಾರ್ ನಟರಲ್ಲಿ ಪೈಪೋಟಿ ಇರುವುದು ಮತ್ತೊಂದು ವಿಶೇಷ.

ಹಿಂದಿಗೆ ಹೋಗುತ್ತಿದೆ 'ರಂಗಿತರಂಗ'
2015 ರಲ್ಲಿ ಬಿಡುಗಡೆ ಆಗಿದ್ದ ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಸಿನಿಮಾ ಇದೀಗ ಹಿಂದಿಗೆ ರೀಮೇಕ್ ಆಗಲಿದೆ. ಇದೀಗ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿಯೂ ಇದೆ.

ಅನುಪ್ ಭಂಡಾರಿಯ ಮೊದಲ ಸಿನಿಮಾ
'ರಂಗಿತರಂಗ' ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಅವರ ಚೊಚ್ಚಲ ಸಿನಿಮಾ ಆಗಿತ್ತು. ಅವರ ಸಹೋದರ ನಿರೂಪ್ ಭಂಡಾರಿ ಹೀರೋ ಆಗಿ ಆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿ ಕೂಡ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ ಸಿಕ್ಸರ್ ಬಾರಿಸಿದ್ದರು. ಈಗ ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷ ಮುಗಿದಿವೆ. 'ಬಾಹುಬಲಿ' ಸಿನಿಮಾದ ಎದುರು ನಿಂತು ಆ ಸಿನಿಮಾ ದೊಡ್ಡದಾಗಿ ಗೆದ್ದಿತ್ತು.

'ವಿಕ್ರಾಂತ್ ರೋಣ' ಬಿಡುಗಡೆಗೆ ಕಾಯುತ್ತಿದ್ದಾರೆ
2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆಗೆ ಬಂದಿತ್ತು. ಒಂದು ವರ್ಷ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಚಿತ್ರ, ಆ ಬಳಿಕ ವಿದೇಶಗಳಲ್ಲೂ ರಂಗಿತರಂಗ ಅಬ್ಬರ ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಊಹೆಗೂ ನಿಲುಕದಂತೆ ಇತಿಹಾಸ ಸೃಷ್ಟಿಸಿದ ಈ ಚಿತ್ರಕ್ಕೆ ಅನೂಪ್ ಆಕ್ಷನ್ ಕಟ್ ಹೇಳಿದ್ದರು. ನಿರೂಪ್ ನಾಯಕನಾಗಿ ಆವಂತಿಕ ಹಾಗೂ ರಾಧಿಕಾ ನಾಯಕಿಯರಾಗಿ ಕಮಾಲ್ ಮಾಡಿದ್ದರು. ಅಜನೀಶ್ ಸಂಗೀತದ ಕಂಪು ಇರುವ ಈ ಚಿತ್ರ ಬಾಲಿವುಡ್ ಅಂಗಳದಲ್ಲೂ ರಂಗು ಮೂಡಿಸಲಿದೆ ಎನ್ನಲಾಗ್ತಿದೆ. ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ 'ವಿಕ್ರಾಂತ್ ರೋಣ' ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಕನ್ನಡದ 'ಯೂ-ಟರ್ನ್' ಸಿನಿಮಾ ಸಹ ರೀಮೇಕ್ ಆಗುತ್ತಿದೆ
'ರಂಗಿತರಂಗ' ಮಾತ್ರವೇ ಅಲ್ಲದೆ ಕನ್ನಡದ 'ಯು-ಟರ್ನ್' ಸಿನಿಮಾ ಸಹ ಹಿಂದಿಗೆ ರೀಮೇಕ್ ಆಗುತ್ತಿದೆ. ಇದರ ಜೊತೆಗೆ ದಕ್ಷಿಣ ಭಾರತದ ಬರೊಬ್ಬರಿ 30 ಕ್ಕೂ ಹೆಚ್ಚು ಸಿನಿಮಾಗಳ ರೀಮೇಕ್ ಹಕ್ಕುಗಳನ್ನು ಬಾಲಿವುಡ್ನ ವಿವಿಧ ನಿರ್ಮಾಣ ಸಂಸ್ಥೆಗಳು ಖರೀದಿಸಿದ್ದು ಸಿನಿಮಾ ನಿರ್ಮಾಣದಲ್ಲಿ ತೊಡಗಿದೆ. ದಕ್ಷಿಣದ ಇತ್ತೀಚಿನ ಹಿಟ್ ಸಿನಿಮಾಗಳಾದ 'ಖೈದಿ', 'ವಿಕ್ರಂ ವೇದ', 'ಫೊರೆನ್ಸಿಕ್', 'ಸೂರರೈ ಪೊಟ್ರು' 'ಅನ್ನಿಯನ್', 'ಖೈದಿ', ಮಲಯಾಳಂನ 'ಡ್ರೈವಿಂಗ್ ಲೈಸೆನ್ಸ್', 'ಅಯ್ಯಪ್ಪನುಂ ಕೋಶಿಯುಂ', 'ಫೊರೆನ್ಸಿಕ್' ತೆಲುಗಿನ 'ಅಲಾ ವೈಕುಂಟಪುರಂಲೋ', 'ಹಿಟ್', 'ದೃಶ್ಯಂ' ಇನ್ನೂ ಹಲವು ಸಿನಿಮಾಗಳನ್ನು ಬಾಲಿವುಡ್ ರೀಮೇಕ್ ಮಾಡುತ್ತಿದೆ.