IPL ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ರಣ್ವೀರ್ ಗೆ ಇಷ್ಟೊಂದು ಕೋಟಿನಾ.?
Recommended Video

ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಹಂಗಾಮ ಆರಂಭವಾಗುತ್ತಿದೆ. 11ನೇ ಆವೃತ್ತಿಯ ಐಪಿಎಲ್ ಉದ್ಘಾಟನೆ ಏಪ್ರಿಲ್ 7 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸಂಪ್ರದಾಯದಂತೆ ಉದ್ಘಾಟನೆ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಗಳ ವರ್ಣರಂಜಿತ ಕಾರ್ಯಕ್ರಮಗಳು ಗಮನ ಸೆಳೆಯಲಿದೆ.
ಈ ಬಾರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಟೌನ್ ನ ಯುವ ಕಲಾವಿದರ ದಂಡು ಭಾಗವಹಿಸಲಿದೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್, ವರುಣ್ ಧವನ್, ಪರಿಣಿತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವರು ಹೆಜ್ಜೆ ಹಾಕಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ರಣ್ವೀರ್ ಸಿಂಗ್ ಐಪಿಎಲ್ ವೇದಿಕೆಯಲ್ಲಿ ಕುಣಿಯಲು ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಕೇವಲ 15 ನಿಮಿಷಗಳ ಫರ್ಫಾಮೆನ್ಸ್ ಗೆ ನಟ ರಣ್ವೀರ್ ದುಬಾರಿ ಮೊತ್ತ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅರ್ಥಾಥ್ 1 ನಿಮಿಷಕ್ಕೆ 33 ಲಕ್ಷ ಎಂದು ಅಂದಾಜಿಸಲಾಗಿದೆ.

ಮೂಲಗಳ ಪ್ರಕಾರ ಐಪಿಎಲ್ ಉದ್ಘಾಟನೆ ಪಂದ್ಯಕ್ಕೆ ಸುಮಾರು 20 ರಿಂದ 30 ಕೋಟಿ ಖರ್ಚು ಮಾಡಲಾಗುತ್ತಿದೆ. 'ಚೆನ್ನೈ ಸೂಪರ್ ಕಿಂಗ್' ತಂಡದ ನಾಯಕ ಎಂ.ಎಸ್ ಧೋನಿ ಮತ್ತು 'ಮುಂಬೈ ಇಂಡಿಯೆನ್ಸ್' ತಂಡದ ನಾಯಕ ರೋಹಿತ್ ಶರ್ಮಾ ಮಾತ್ರ ಉದ್ಘಾಟನೆ ದಿನ ಭಾಗಿಯಾಗಲಿದ್ದಾರಂತೆ. ಉಳಿದ ನಾಯಕರು ಕಾರಣಾಂತರಗಳಿಂದ ಮೊದಲ ದಿನ ಗೈರಾಗಲಿದ್ದಾರೆ ಎನ್ನಲಾಗಿದೆ.
ಇನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ಮೂಲಕ ಯಶಸ್ಸಿನ ಅಲೆಯಲ್ಲಿರುವ ರಣ್ವೀರ್ ಸಿಂಗ್ ಇಷ್ಟೊಂದು ದುಬಾರಿಯಾಗಿರುವುದು ಈಗ ಬಾಲಿವುಡ್ ನಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.


Click it and Unblock the Notifications











