ಶ್ರೀಲೀಲಾ ಅವಕಾಶ ಕಿತ್ತುಕೊಂಡ 'ಕೆಜಿಎಫ್' ರಮಿಕಾ ಸೇನ್ ಮಗಳು?

ಕನ್ನಡ ನಟಿಯರು ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಕೂಡ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡದ ಬಳಿಕ ತೆಲುಗಿನಲ್ಲಿ ಶ್ರೀಲೀಲಾ ಕಾರುಬಾರು ಜೋರಾಗಿತ್ತು. ಸ್ಟಾರ್ ನಟರ ಜೊತೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಯಾವ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಆಕೆಯ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸ್ಪೆಷಲ್ ಸಾಂಗ್‌ನಲ್ಲಿ ಕುಣಿದು ರಂಗೇರಿಸಿದ್ದರು.

Rasha Thadani Replaces Sreeleela In Pati Patni Aur Woh Sequel

ಇದ್ದಕ್ಕಿದಂತೆ ಶ್ರೀಲೀಲಾ ಮುಂಬೈನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಕಾರ್ತಿಕ್ ಆರ್ಯನ್ ಜೊತೆಗೂ ಕಾಣಿಸಿಕೊಂಡಿದ್ದು ವೈರಲ್ ಆಗಿತ್ತು. ಅಲ್ಲಿಗೆ ಇಬ್ಬರೂ ಸಿನಿಮಾ ಮಾಡುವುದು ಪಕ್ಕಾ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಮತ್ತೆರಡು ಬಾಲಿವುಡ್ ಸಿನಿಮಾಗಳಿಗೆ ಕಿಸ್ ಬೆಡಗಿ ಆಯ್ಕೆ ಆಗಿದ್ದರು ಎನ್ನುವ ಗುಸುಗುಸು ಕೇಳಿಬಂದಿತ್ತು.

ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿರುವ ಸಿನಿಮಾ ಹೆಸರು 'ಆಶಿಕಿ'-3 ಎನ್ನಲಾಗ್ತಿದೆ. ಇನ್ನು 'ಪತಿ ಪತ್ನಿ ಔರ್ ವೋ' ಸೀಕ್ವೆಲ್‌ನಲ್ಲಿ ಕೂಡ ಶ್ರೀ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಆ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹೀರೊ ಆಗಿ ನಟಿಸುತ್ತಿದ್ದಾರೆ. ಆದರೆ ಎರಡೂ ಸಿನಿಮಾಗಳಲ್ಲಿ ಸೇಮ್ ಜೋಡಿ ಸರಿಹೋಗಲ್ಲ ಎಂದು. ಇದೀಗ ಹೊಸ ನಟಿಯನ್ನು ಪರಿಚಯಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

Rasha Thadani Replaces Sreeleela In Pati Patni Aur Woh Sequel

'ಪತಿ ಪತ್ನಿ ಔರ್ ವೋ'-2 ಚಿತ್ರದಲ್ಲಿ ಶ್ರೀಲೀಲಾ ಬದಲು ರಶಾ ತದಾನಿ ನಟಿಸೋ ಬಗ್ಗೆ ಚರ್ಚೆ ಶುರುವಾಗಿದೆ. ಅಂದಹಾಗೆ ರಶಾ ತದಾನಿ ಮತ್ಯಾರು ಅಲ್ಲ, ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಮಗಳು. ಕನ್ನಡದಲ್ಲಿ 'ಉಪೇಂದ್ರ' ಹಾಗೂ 'ಕೆಜಿಎಫ್'-2 ಸಿನಿಮಾಗಳಲ್ಲಿ ರವೀನಾ ನಟಿಸಿದ್ದರು.

ನೆಪೊಟಿಸಂ ಬಗ್ಗೆ ಎಷ್ಟೇ ಚೆರ್ಚೆ ನಡೆದರೂ ಸ್ಟಾರ್‌ ಕಿಡ್‌ಗಳು ಬಾಲಿವುಡ್‌ ಪ್ರವೇಶಿಸುತ್ತಲೇ ಇದ್ದಾರೆ. ಇದೀಗ ರಶಾ ತದಾನಿಗಾಗಿ ಶ್ರೀಲೀಲಾ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಈಗಾಗಲೇ ಶ್ರೀಲೀಲಾ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ತಮಿಳಿನ 'ಪರಾಶಕ್ತಿ' ಎಂಬ ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಯಾವುದೇ ಹೊಸ ಸಿನಿಮಾವನ್ನು ಕಿಸ್ ಬೆಡಗಿ ಒಪ್ಪಿಕೊಂಡಿಲ್ಲ. ಆಕೆ ನಟಿಸಿದ 'ರಾಬಿನ್ ಹುಡ್' ಸಿನಿಮಾ ಕಳೆದ ವಾರ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರಿಂದ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಮುಗ್ಗರಿಸಿದೆ. ಶ್ರೀಲೀಲಾ ಪಾತ್ರದ ಬಗ್ಗೆಯೂ ಭಾರೀ ಟ್ರೋಲ್ ಆಗುತ್ತಿದೆ.

ಶ್ರೀಲೀಲಾ ಪದೇ ಪದೆ ಇದೇ ತಪ್ಪು ಮಾಡುತ್ತಾರೆ. ಒಳ್ಳೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವಡ್‌ನಲ್ಲಿ ಏಕಾಏಕಿ 3 ಸಿನಿಮಾಗಳಿಗೆ ಶ್ರೀಲೀಲಾ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ 2ನೇ ಸಿನಿಮಾದಿಂದಲೇ ಹೊರ ಬರುತ್ತಿರುವ ವಿಚಾರ ಇದೀಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

2017ರಲ್ಲಿ 'ಚಿತ್ರಾಂಗದ' ಎಂಬ ತೆಲುಗು ಚಿತ್ರದಲ್ಲಿ ಬಾಲನಟಿಯಾಗಿ ಶ್ರೀಲೀಲಾ ನಟಿಸಿದ್ದರು. ಬಳಿಕ ಕನ್ನಡದ 'ಕಿಸ್' ಚಿತ್ರದಲ್ಲಿ ನಾಯಕಿಯಾಗಿದ್ದರು. 'ಭರಾಟೆ' ಚಿತ್ರದಲ್ಲಿ ಶ್ರೀಮುರಳಿ ಜೊತೆ ಮಿಂಚಿದ್ದರು. ನಂತರ 'ಬೈಟು ಲವ್' ಚಿತ್ರದಲ್ಲಿ ಧನ್ವೀರ್‌ ಗೌಡಗೆ ಜೊತೆಯಾಗಿದ್ದರು. ಬಳಿಕ ಏಕಾಏಕಿ ತೆಲುಗು ಚಿತ್ರರಂಗ ಪ್ರವೇಶಿಸಿ ಗೆದ್ದರು.

ತೆಲುಗಿನಲ್ಲಿ ಒಳ್ಳೆ ಅವಕಾಶಗಳೇನೋ ಸಿಕ್ತು. ಆದರೆ ದೊಡ್ಡ ಗೆಲುವು ಸಿಗಲಿಲ್ಲ. ಬಾಲಕೃಷ್ಣ, ಮಹೇಶ್‌ ಬಾಬು, ರವಿತೇಜಾ ಜೊತೆ ನಟಿಸಿದರೂ ಆಕೆಯ ಕರಿಯರ್‌ಗೆ ಅದರಿಂದ ಪ್ರಯೋಜನವಾಗಲಿಲ್ಲ. ಪವನ್ ಕಲ್ಯಾಣ್ ಜೋಡಿಯಾಗಿ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಆದರೆ ಆ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ.

More from Filmibeat

English summary
This actress is set to replace Sreeleela in Kartik Aaryan's next;
Read more about: sreeleela bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X