»   » ರಶ್ಮಿಕಾಗೆ ತೆಲುಗಿನಿಂದ ಮತ್ತೊಂದು ಬಿಗ್ ಆಫರ್ ಸಿಗೋ ಸಾಧ್ಯತೆ?

ರಶ್ಮಿಕಾಗೆ ತೆಲುಗಿನಿಂದ ಮತ್ತೊಂದು ಬಿಗ್ ಆಫರ್ ಸಿಗೋ ಸಾಧ್ಯತೆ?

Posted By:
Subscribe to Filmibeat Kannada

2017ನೇ ವರ್ಷದ ಕೊನೆಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ 'ಕಿರಿಕ್' ಹುಡುಗಿ ರಶ್ಮಿಕಾ, ಎರಡೂ ಚಿತ್ರಗಳಲ್ಲೂ ಮೆಚ್ಚುಗೆ ಗಳಿಸಿಕೊಂಡರು. ಯಶಸ್ವಿಯಾಗಿ ವರ್ಷ ಮುಗಿಸಿದ ರಶ್ಮಿಕಾ ಈಗ ಹೊಸ ವರ್ಷಕ್ಕೆ ಮತ್ತೆ ತೆರೆಮೇಲೆ ಬರಲು ಸಜ್ಜಾಗುತ್ತಿದ್ದಾರೆ.

ಅಷ್ಟರಲ್ಲೇ 'ಚಮಕ್' ನಾಯಕಿಗೆ ತೆಲುಗು ಇಂಡಸ್ಟ್ರಿಯಿಂದ ಮತ್ತೊಂದು ಬಿಗ್ ಆಫರ್ ಬಂದಿದೆ. ಸದ್ಯ, ರಶ್ಮಿಕಾ ಎರಡು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳ ನಂತರ ಮೂರನೇ ಚಿತ್ರಕ್ಕೆ ನಾಯಕಿ ಆಗುವ ಒಂದು ಅವಕಾಶ ಬಂದಿದೆ.

ಹಾಗಿದ್ರೆ, ರಶ್ಮಿಕಾ ಅಭಿನಯಿಸಲಿರುವ ಮೂರನೇ ತೆಲುಗು ಸಿನಿಮಾ ಯಾವುದು? ಆ ಚಿತ್ರಕ್ಕೆ ನಾಯಕ ಯಾರು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ....

'ಚಲೋ' ರಶ್ಮಿಕಾಗೆ ಫಿದಾ ಆದ ನಿರ್ದೇಶಕರು

ತೆಲುಗಿನ 'ಚಲೋ' ಚಿತ್ರದಲ್ಲಿ ರಶ್ಮಿಕಾ ಅವರ ಲುಕ್ ನೋಡಿ ತೆಲುಗು ಚಿತ್ರದ ನಿರ್ದೇಶಕರು ಫಿದಾ ಆದಂತೆ ಕಾಣುತ್ತಿದೆ. ಹಾಗಾಗಿ, ತಮ್ಮ ಚಿತ್ರಗಳಿಗೆ ಈಕೆಯನ್ನ ನಾಯಕಿಯನ್ನಾಗಿಸಲು ಚಿಂತನೆ ನಡೆಸುತ್ತಿದ್ದಾರಂತೆ.

ಭಾವಿ ಪತ್ನಿಯ 'ಚಮಕ್' ನೋಡಿ ರಕ್ಷಿತ್ ಗೆ ಮತ್ತೆ ಲವ್ ಆಯ್ತಂತೆ.!

ಮೂರನೇ ಚಿತ್ರಕ್ಕೆ ಆಫರ್.!

ತೆಲುಗಿನ ಖ್ಯಾತ ನಟ ರಾಮ್ ಅಭಿನಯಿಸಲಿರುವ ಹೊಸ ಚಿತ್ರದಲ್ಲಿ ರಶ್ಮಿಕಾಗೆ ನಾಯಕಿಯಾಗುವ ಆಫರ್ ಬಂದಿದೆಯಂತೆ. ಈ ಚಿತ್ರವನ್ನ 'ನೇನು ಲೋಕಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ತ್ರಿನಾದ ರಾವ್ ನಕ್ಕಿನ ನಿರ್ದೇಶನ ಮಾಡಲಿದ್ದಾರೆ.

ಇಬ್ಬರು ನಾಯಕಿಯರು

ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಇದರಲ್ಲಿ ರಶ್ಮಿಕಾ ಅವರು ಕೂಡ ಒಬ್ಬರು ಎನ್ನಲಾಗಿದೆ. ಮತ್ತೊಬ್ಬ ನಾಯಕಿಯ ಆಯ್ಕೆ ಇನ್ನು ಆಗಿಲ್ಲ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಟ್, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ಕಾರ್ ಒಡತಿಯಾದ ರಕ್ಷಿತ್ ಮನದೊಡತಿ ರಶ್ಮಿಕಾ

ತೆಲುಗಿನಲ್ಲಿ 'ಲಕ್ಕಿ' ನಾಯಕಿ

ರಶ್ಮಿಕಾ ಅಭಿನಯದ 'ಚಲೋ' ಚಿತ್ರ ರಿಲೀಸ್​ಗೆ ರೆಡಿ ಇದ್ದರೆ, 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರಕೊಂಡ ಜೊತೆಯಲ್ಲಿ ಎರಡನೇ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ 'ಗೀತಾ ಗೋವಿಂದಂ' ಎಂದು ಶೀರ್ಷಿಕೆ ಫೈನಲ್ ಆಗಿದೆಯಂತೆ. ಈಗ ಮೂರನೇ ಚಿತ್ರ ಹುಡುಕಿಕೊಂಡು ಬಂದಿದೆ. ಆದ್ರೆ, ಇದು ಅಂತಿಮವಾಗುತ್ತಾ? ಕಾದುನೋಡಬೇಕಿದೆ.

English summary
According to sources, Kannada actress Rashmika mandanna will act in third telugu movie with Telugu actor Ram. The movie will directed by trinadha rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X