ಹಿಂದಿಯಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ: ಜನಪ್ರಿಯ ಸಿನಿಮಾ ಸರಣಿಗೆ ನಾಯಕಿ?

ರಶ್ಮಿಕಾ ಮಂದಣ್ಣ ಮಹಾತ್ವಾಕಾಂಕ್ಷಿ ನಟಿ. 'ಕಿರಿಕ್ ಪಾರ್ಟಿ' ಸಿನಿಮಾದಿಂದ ವೃತ್ತಿ ಆರಂಭಿಸಿದ ಈ ನಟಿ ಇದೀಗ ಬಾಲಿವುಡ್‌ನಲ್ಲೂ ಅವಕಾಶ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ಬಾಲಿವುಡ್‌ನಲ್ಲಿಯೇ ನೆಲೆಗೊಳ್ಳಬೇಕು ಎಂಬ ಪ್ರಯತ್ನದಲ್ಲಿರುವ ರಶ್ಮಿಕಾಗೆ ಹಲವು ಉತ್ತಮ ಸಿನಿಮಾ ಅವಕಾಶಗಳು ಸಿಗುತ್ತಿವೆ. ಈಗಾಗಲೇ ಅಮಿತಾಬ್ ಬಚ್ಚನ್ ಜೊತೆ 'ಗುಡ್ ಬೈ', ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಇದೀಗ ಹೊಸ ಹಿಂದಿ ಸಿನಿಮಾ ಒಂದು ರಶ್ಮಿಕಾಗೆ ದೊರೆತಿದೆ. ಅದೂ ಈಗಾಗಲೇ ಹಿಂದಿಯಲ್ಲಿ ಬಹಳ ಜನಪ್ರಿಯವಾಗಿರುವ ಸಿನಿಮಾ ಒಂದರ ಸರಣಿಯಾಗಿದೆ. ಸಿನಿಮಾ ಸರಣಿಯ ಮೂರನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಸುದ್ದಿಯಷ್ಟೆ ಹೊರಬೀಳಬೇಕಿದೆ.

Rashmika Mandanna Acting In Aashuqui 3 Movie Along With Karthik Aryan

'ಆಶಿಕಿ' ಸಿನಿಮಾಕ್ಕೆ ಹಿಂದಿಯಲ್ಲಿ ತನ್ನದೆ ಆದ ಅಭಿಮಾನಿ ಬಳಗವಿದೆ. ಮ್ಯೂಸಿಕಲ್ ಲವ್‌ ಸ್ಟೋರಿಯಾಗಿ ಹೆಸರಾಗಿದ್ದ 'ಆಶಿಕಿ' ಭಾರಿ ಹಿಟ್ ಆಗಿತ್ತು. 2013 ರಲ್ಲಿ ಬಿಡುಗಡೆ ಆಗಿದ್ದ 'ಅಶಿಕಿ 2' ಸಿನಿಮಾ ಸಹ ಅದ್ಭುತವಾದ ಹಾಡುಗಳು ಹಾಗೂ ಪ್ರೇಮಕತೆಯಿಂದಾಗಿ ಸೂಪರ್ ಹಿಟ್ ಆಗಿತ್ತು. ಇದೀಗ 'ಆಶಿಕಿ 3' ಸಿನಿಮಾ ತಯಾರಾಗುತ್ತಿದ್ದು, ಸಿನಿಮಾದಲ್ಲಿ ನಾಯಕಿ ಪಾತ್ರ ರಶ್ಮಿಕಾ ಮಂದಣ್ಣ ಪಾಲಾಗಿದೆ ಎನ್ನಲಾಗುತ್ತಿದೆ.

2013 ರಲ್ಲಿ ಬಿಡುಗಡೆ ಆಗಿದ್ದ 'ಆಶಿಕಿ 2' ಸಿನಿಮಾದಲ್ಲಿ ಶ್ರದ್ಧಾ ಕಪೂರ್, ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಇದೀಗ 'ಆಶಿಕಿ 3' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

'ಆಶಿಕಿ 3' ಸಿನಿಮಾವು ಈ ಕಾಲದ ಪ್ರೇಮಕತೆಯನ್ನು ಒಳಗೊಂಡಿರಲಿದೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾವನ್ನು ಮಹೇಶ್ ಭಟ್ ನಿರ್ದೇಶನ ಮಾಡುವುದಿಲ್ಲ. ಬದಲಿಗೆ ಅನುರಾಗ್ ಬಸು ನಿರ್ದೇಶನ ಮಾಡಲಿದ್ದಾರೆ. ಈ ಹಿಂದಿನ ಎರಡು 'ಆಶಿಕಿ' ಸಿನಿಮಾಗಳನ್ನು ಮಹೇಶ್ ಭಟ್ ನಿರ್ದೇಶನ ಮಾಡಿದ್ದರು. ಆದರೆ 'ಆಶಿಕಿ 3' ಸಿನಿಮಾವನ್ನು ಅನುರಾಗ್ ಬಸು ನಿರ್ದೇಶಿಸಲಿದ್ದಾರೆ. ಇದು ಬಸುಗೆ ಹೊಸ ಸವಾಲಾಗಿರಲಿದೆ.

ರಶ್ಮಿಕಾ ಮಂದಣ್ಣ ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಜೊತೆಗೆ ವರುಣ್ ಧವನ್ ಸೇರಿದಂತೆ ಇನ್ನೂ ಕೆಲವರೊಟ್ಟಿಗೆ ಜಾಹೀರಾತುಗಳಲ್ಲಿ ಸಹ ರಶ್ಮಿಕಾ ನಟಿಸುತ್ತಿದ್ದಾರೆ. ಇವುಗಳ ಹೊರತಾಗಿ, 'ಪುಷ್ಪ 2' ಸಿನಿಮಾ ಹಾಗೂ ತಮಿಳಿನ ವಿಜಯ್ ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ಕಾರ್ತಿಕ್ ಆರ್ಯನ್ ಸಹ ತಮ್ಮ ಇತ್ತೀಚಿನ 'ಭೂಲ್ ಭುಲಯ್ಯ 2' ಸಿನಿಮಾದ ಹಿಟ್‌ನಿಂದ ಉತ್ತೇಜಿತರಾಗಿದ್ದು ಒಂದರ ಹಿಂದೊಂದು ಹೊಸ ಹಿಂದಿ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ.

More from Filmibeat

English summary
Actress Rashmika Mandanna acting in Aashuqui 3 movie along with Karthik Aryan. Movie is directing by Anurag Basu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X