ಮುಂಬೈನಲ್ಲಿ ಭೇಟಿಯಾದ ಜೋಡಿ: ರಶ್ಮಿಕಾ ಉಡುಪಿನ ಮೇಲೇಕೆ ನೆಟ್ಟಿಗರ ಕಣ್ಣು?

By ಫಿಲ್ಮೀಬೀಟ್‌ ಡೆಸ್ಕ್

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಬಗ್ಗೆ ಹಲವು ಗಾಳಿಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಅವರು ಮಾತ್ರ 'ಹಾಗೇನೂ ಇಲ್ಲ ನಾವಿಬ್ಬರು ಒಳ್ಳೆಯ ಗೆಳೆಯರು' ಎಂದೇ ಹೇಳುತ್ತಿದ್ದಾರೆ.

ತೆಲುಗಿನಲ್ಲಿ ಬಹಳ ಬ್ಯುಸಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಹಠಾತ್ತನೆ ಬಾಲಿವುಡ್‌ನಲ್ಲಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಇದೀಗ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ.

ಹೈದರಾಬಾದ್‌ನಿಂದ ತಾತ್ಕಾಲಿಕವಾಗಿ ಮುಂಬೈ ಶಿಫ್ಟ್ ಆಗಿರುವ ರಶ್ಮಿಕಾರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದಾರೆ ವಿಜಯ್ ದೇವರಕೊಂಡ. ಅಲ್ಲಿ ಇಬ್ಬರೂ ಸಹ ತಡರಾತ್ರಿ ಹೋಟೆಲ್‌ ಒಂದರಿಂದ ಹೊರಗೆ ಬರುತ್ತಾ ಬಾಲಿವುಡ್ 'ಪಾಪಾರಾಟ್ಜಿ'ಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.

ರೊಮ್ಯಾಂಟಿಕ್ ಡೇಟ್ ಇರಬಹುದೇ?

ರೊಮ್ಯಾಂಟಿಕ್ ಡೇಟ್ ಇರಬಹುದೇ?

ಶ್ವೇತ ಬಣ್ಣದ ಹೂವುಗಳನ್ನು ಹಿಡಿದಿರುವ ರಶ್ಮಿಕಾ ಕ್ಯೂಟ್ ಹಾಗೂ ಮಾದಕ ಎರಡೂ ಮಾದರಿಯ ಲುಕ್ ನೀಡುತ್ತಿರುವ ಉಡುಗೆ ತೊಟ್ಟಿದ್ದಾರೆ. ರಶ್ಮಿಕಾ ಕೈಯಲ್ಲಿ ಹೂವು ನೋಡಿ 'ಇದೊಂದು ರೊಮ್ಯಾಂಟಿಕ್ ಡೇಟ್ ಇರಬಹುದು' ಎಂದು ಊಹಿಸಲಾಗುತ್ತಿದೆ. ರಶ್ಮಿಕಾ ಧರಿಸಿರುವ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದ್ದು, ಕೆಲವು ಅಸಭ್ಯ ಕಮೆಂಟ್‌ಗಳು ಸಹ ಬಂದಿವೆ.

ಪರಸ್ಪರ ಆತ್ಮೀಯತೆ, ಸಲುಗೆ ಇದೆ

ಪರಸ್ಪರ ಆತ್ಮೀಯತೆ, ಸಲುಗೆ ಇದೆ

ಈ ಹಿಂದೆಯೂ ಹಲವಾರು ಬಾರಿ ರಶ್ಮಿಕಾ-ವಿಜಯ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಆತ್ಮೀಯತೆ ಹಾಗೂ ಸಲುಗೆ ಇಬ್ಬರ ನಡುವೆ ಇದೆ. ಕೆಲವು ದಿನಗಳ ಹಿಂದಷ್ಟೆ ರಶ್ಮಿಕಾರ ಮುರಿದುಹೋದ ನಿಶ್ಚಿತಾರ್ಥದ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತ ಒಬ್ಬರ ಮೇಲೆ ವಿಜಯ್ ದೇವರಕೊಂಡ ಜಗಳವಾಡಿದ ಘಟನೆ ನಡೆದಿದೆ. ಇಂಥಹಾ ಕೆಲವು ಅನುಮಾನ ಮೂಡಿಸುವ ಘಟನೆಗಳು ನಡೆದಿವೆ. ಆದರೆ ಇವರು ಮಾತ್ರ ತಾವು ಪ್ರೇಮಿಗಳು ಎಂದು ಈವರೆಗೆ ಎಲ್ಲಿಯೂ ಹೇಳಿಕೊಂಡಿಲ್ಲ.

ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ

ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡರ ಜೊತೆಗೆ ಮತ್ತೊಂದು ಸಿನಿಮಾದಲ್ಲಿಯೂ ಅವಕಾಶ ಸಿಕ್ಕಿದೆಯಂತೆ ರಶ್ಮಿಕಾಗೆ.

Recommended Video

ಬುಲ್ ಬುಲ್ ಸಿನಿಮಾ ಹಿಟ್ ಆಗೋದು ಡೌಟ್ ಅಂತಾ ಎಚ್ಚರಿಸಿದ್ದು ಯಾರು? | Filmibeat Kannada
ವಿಜಯ್ ಸಹ ಬಾಲಿವುಡ್‌ಗೆ ಹಾರಲಿದ್ದಾರೆ

ವಿಜಯ್ ಸಹ ಬಾಲಿವುಡ್‌ಗೆ ಹಾರಲಿದ್ದಾರೆ

ಇನ್ನು ವಿಜಯ್ ದೇವರಕೊಂಡ ಸಹ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲು ವಿಜಯ್ ಸಕಲ ತಯಾರಿ ನಡೆಸಿದ್ದಾರೆ. ಪ್ರಸ್ತುತ ಅವರು ಪುರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಈ ಸಿನಿಮಾಕ್ಕೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿ.

More from Filmibeat

English summary
Rashmika Mandanna And Vijay Devarakonda met in Mumbai. Rashmika is busy in bollywood movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X