ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ - ದೇವರಕೊಂಡ ಮೋಜು ಮಸ್ತಿ? ಸನ್‌ ಗ್ಲಾಸ್ ಬಿಚ್ಚಿಟ್ಟ ಸತ್ಯ ಏನು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಸಂಥಿಂಗ್ ಸಂಥಿಗ್ ನಡೀತಿದೆ ಎನ್ನುವ ಗುಸುಗುಸು ಕೇಳಿಬರ್ತಾನೆ ಇದೆ. ಆದರೆ ಅವರು ಮಾತ್ರ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರ್ತಿದ್ದಾರೆ. ಸದ್ಯ 'ಗೀತಾಗೋವಿಂದಂ' ಜೋಡಿ ಮಾಲ್ಡೀವ್ಸ್‌ಗೆ ರೊಮ್ಯಾಂಟಿಕ್ ಟೂಪರ್ ಹೋಗಿದೆ ಎನ್ನಲಾಗ್ತಿದೆ. ಶುಕ್ರವಾರ ಇಬ್ಬರೂ ಮುಂಬೈ ಏರ್‌ಪೋರ್ಟ್‌ನಿಂದು ಮಾಲ್ಡೀವ್ಸ್‌ಗೆ ಹೋಗಿದ್ದಾಗಿ ವರದಿಯಾಗಿತ್ತು. ಸದ್ಯ ರಶ್ಮಿಕಾ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದು, ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಶೇರ್ ಮಾಡ್ತಿದ್ದಾರೆ.

ವಿಜಯ್- ರೋಶ್ ಡೇಟಿಂಗ್ ಮಾಡ್ತಿದ್ದಾರೆ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಇದೀಗ ಇಬ್ಬರು ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ರಶ್ಮಿಕಾ ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ರಿಲ್ಯಾಕ್ಸ್ ಆಗ್ತಿದ್ದು, ವಿಜಯ್ ಕೂಡ ಜೊತೆಗೆ ಇದ್ದಾರೆ ಎನ್ನುತ್ತಿದ್ದಾರೆ. ಕೊಡಗಿನ ಚೆಲುವೆ ಶೇರ್ ಮಾಡಿರುವ ಫೋಟೊದಲ್ಲಿ ಅದರ ಸುಳಿವು ಸಿಕ್ಕಿದೆ ಎನ್ನುತ್ತಿದ್ದಾರೆ. ರೆಸಾರ್ಟ್‌ ರೂಮ್ ಪಕ್ಕದ ಸ್ವಿಮ್ಮಿಂಗ್ ಪೂಲ್‌ ಬಳಿ ಕುಳಿತು ರಶ್ಮಿಕಾ ಬ್ರೇಕ್‌ಫಾಸ್ಟ್‌ಗೆ ಫ್ಲೋಟಿಂಗ್ ಫುಡ್ ಸಿದ್ಧವಾಗಿರುವ ಫೋಟೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಕೊಡಗಿನ ಚೆಲುವೆ ಹಾಕಿಕೊಂಡಿರುವ ಸನ್‌ ಗ್ಲಾಸ್ ಎಲ್ಲರ ಗಮನ ಸೆಳೆದಿದೆ. ಕಾರಣ ಮೊನ್ನೆ ಮುಂಬೈ ಏರ್‌ಪೋರ್ಟ್‌ನಲ್ಲಿ ವಿಜಯ್ ದೇವರಕೊಂಡ ಇದೇ ತರಹದ ಸನ್‌ ಗ್ಲಾಸ್ ತೊಟ್ಟಿದ್ದರು.

rashmika-mandanna-and-vijay-deverakonda-s-maldives-romantic-vacation-here-s-proof

ಹೌದು ರಶ್ಮಿಕಾ ಮಂದಣ್ಣ ಹಾಕಿಕೊಂಡಿರುವ ಸನ್‌ ಗ್ಲಾಸ್ ನೋಡಿದ ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ವಿಜಯ್ ದೇವರಕೊಂಡ ಸನ್‌ಗ್ಲಾಸ್ ಕದ್ದು ಬಿಟ್ರಾ ರಶ್ಮಿಕಾ? ರೆಸಾರ್ಟ್‌ನಲ್ಲಿ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಕೂಡ ಇದ್ದಾರೆ. ರಶ್ಮಿಕಾ ಹಾಕಿಕೊಂಡಿರುವ ಸನ್‌ಗ್ಲಾಸ್ ದೇವಕೊಂಡ ಅವರದ್ದು, ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಗೀತಾ ಗೋವಿಂದಂ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿ ಮೋಡಿ ಮಾಡಿತ್ತು. ನಂತರ ಇವರಿಬ್ಬರು ನಟಿಸಿದ 'ಡಿಯರ್ ಕಾಮ್ರೆಡ್' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಲಿಪ್‌ಲಾಕ್ ವಿಚಾರ ಭಾರೀ ಸದ್ದು ಮಾಡಿತ್ತು. ಇದೇ ಕಾರಣಕ್ಕೆ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಕೂಡ ಮುರಿದು ಬಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು.

rashmika-mandanna-and-vijay-deverakonda-s-maldives-romantic-vacation-here-s-proof

ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಇತ್ತೀಚೆಗೆ ಹೀನಾಯವಾಗಿ ಸೋತಿತ್ತು. ಸದ್ಯ ಸಮಂತಾ ಜೊತೆ ವಿಜಯ್ 'ಖುಷಿ' ಎನ್ನುವ ಚಿತ್ರದಲ್ಲಿ ನಟಿಸ್ತಿದ್ದಾರೆ. ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕೊಡಗಿನ ಚೆಲುವೆಯ ಚೊಚ್ಚಲ ಬಾಲಿವುಡ್ ಸಿನಿಮಾ 'ಗುಡ್‌ಬೈ' ರಿಲೀಸ್ ಆಗಿದೆ. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೊಡಗಿನ ಚೆಲುವೆಯ ಮೊದಲ ಹಿಂದಿ ಸಿನಿಮಾ ಸೋಲಿನ ಹಾದಿ ಹಿಡಿದಿದೆ. ಇನ್ನು 'ಮಿಷನ್ ಮಜ್ನು' ಹಾಗೂ 'ಅನಿಮಲ್' ಎನ್ನುವ ಸಿನಿಮಾಗಳಲ್ಲಿ ರಶ್ಮಿಕಾ ನಟಿಸ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Rashmika Mandanna and Vijay Deverakonda's Maldives Romantic VacationHere's proof. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X