For Quick Alerts
  ALLOW NOTIFICATIONS  
  For Daily Alerts

  'ಸರಿಲೇರು ನೀಕೆವ್ವರು': ರಶ್ಮಿಕಾ, ವಿಜಯಶಾಂತಿಗೆ ಕೈ ತುಂಬಾ ಸಂಭಾವನೆ.!

  |
  ಕೋಟಿ ಕೋಟಿ ಗಳಿಸುತ್ತಿದ್ದಾರೆ ಕಿರಿಕ್ ಪಾರ್ಟಿ ರಶ್ಮಿಕಾ..? | RASHMIKA MANDANNA | RENUMERATION | FILMIBEAT

  ''ಚಿತ್ರರಂಗದಲ್ಲಿ ನಟರಿಗೆ ಮಾತ್ರ ಹೆಚ್ಚು ಸಂಭಾವನೆ ಕೊಡ್ತಾರೆ. ನಟಿಯರಿಗೆ ಸಂಭಾವನೆ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತದೆ. ನಟಿಯರಿಗೆ ಹೆಚ್ಚು ಸಂಭಾವನೆ ಕೊಡುವುದಿಲ್ಲ'' ಎಂಬ ಮಾತುಗಳು ಆಗಾಗ ಬಣ್ಣದ ಪ್ರಪಂಚದಲ್ಲಿ ಕೇಳಿಬರುತ್ತದೆ.

  ಆದ್ರೀಗ, ಕೆಲ ನಟಿಮಣಿಯರ ಸಂಭಾವನೆ ಕೋಟಿ ದಾಟಿದೆ ಎಂಬುದು ವಾಸ್ತವ. ಇಷ್ಟು ದಿನ ಲಕ್ಷಗಳ ಲೆಕ್ಕಾಚಾರದಲ್ಲಿದ್ದ ಕೆಲ ನಟಿಯರ ಸಂಭಾವನೆ ಈಗ ಕೋಟಿ ಗಡಿ ಮೀರಿದೆ.

  ಕನ್ನಡದ ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ರನ್ನೇ ತೆಗೆದುಕೊಳ್ಳಿ.. ಕೇವಲ ಮೂರು ವರ್ಷಗಳ ಹಿಂದೆ ಚಿತ್ರಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಇದೀಗ ಒಂದು ಚಿತ್ರಕ್ಕೆ ಒಂದು ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ. ಮುಂದೆ ಓದಿರಿ...

  ಸರಿಲೇರು ನೀಕೆವ್ವರು ಚಿತ್ರಕ್ಕೆ ರಶ್ಮಿಕಾ ಪಡೆದ ಸಂಭಾವನೆ ಎಷ್ಟು.?

  ಸರಿಲೇರು ನೀಕೆವ್ವರು ಚಿತ್ರಕ್ಕೆ ರಶ್ಮಿಕಾ ಪಡೆದ ಸಂಭಾವನೆ ಎಷ್ಟು.?

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೆಲ ವರದಿಗಳ ಪ್ರಕಾರ, 1.1 ಕೋಟಿ.! (ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ)

  'ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!''ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!'

  ವಿಜಯಶಾಂತಿ ಪಡೆದ ಸಂಭಾವನೆ ಎಷ್ಟು.?

  ವಿಜಯಶಾಂತಿ ಪಡೆದ ಸಂಭಾವನೆ ಎಷ್ಟು.?

  'ಲೇಡಿ ಸೂಪರ್ ಸ್ಟಾರ್' ಅಂತಲೇ ಕರೆಯಿಸಿಕೊಳ್ಳುತ್ತಿದ್ದ ನಟಿ ವಿಜಯಶಾಂತಿ 'ಸರಿಲೇರು ನೀಕೆವ್ವರು' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ನಟಿ ವಿಜಯಶಾಂತಿ 1.5 ಕೋಟಿ ರೂಪಾಯಿಯನ್ನ ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ)

  ಲಕ್ಕು ಅಂದ್ರೆ ಇದೇ ನೋಡ್ರಪ್ಪ....ರಶ್ಮಿಕಾಗೆ ಮಾತ್ರ ಇಂತಹ ಆಫರ್!ಲಕ್ಕು ಅಂದ್ರೆ ಇದೇ ನೋಡ್ರಪ್ಪ....ರಶ್ಮಿಕಾಗೆ ಮಾತ್ರ ಇಂತಹ ಆಫರ್!

  ಲಾಂಗ್ ಗ್ಯಾಪ್ ನಂತರ ನಟನೆ ಮಾಡುತ್ತಿರುವ ವಿಜಯಶಾಂತಿ

  ಲಾಂಗ್ ಗ್ಯಾಪ್ ನಂತರ ನಟನೆ ಮಾಡುತ್ತಿರುವ ವಿಜಯಶಾಂತಿ

  ಹದಿಮೂರು ವರ್ಷಗಳ ಬಳಿಕ ನಟಿ ವಿಜಯಶಾಂತಿ ಬಣ್ಣ ಹಚ್ಚಿರುವುದು 'ಸರಿಲೇರು ನೀಕೆವ್ವರು' ಚಿತ್ರದಲ್ಲಿ. 2006 ರಲ್ಲಿ ತೆರೆಕಂಡ 'ನಾಯುಡಮ್ಮ' ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದ ವಿಜಯಶಾಂತಿ ಇದೀಗ 'ಸರಿಲೇರು ನೀಕೆವ್ವರು' ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಹೊಸ ಇನ್ನಿಂಗ್ ಆರಂಭಿಸಿದ ವಿಜಯಶಾಂತಿಗೆ ಕೈ ತುಂಬಾ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.

  ನಂ.1 ಟ್ರೆಂಡಿಂಗ್ ನಲ್ಲಿದೆ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಟ್ರೈಲರ್.!ನಂ.1 ಟ್ರೆಂಡಿಂಗ್ ನಲ್ಲಿದೆ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಟ್ರೈಲರ್.!

  ಜನವರಿ 11 ರಂದು ಬಿಡುಗಡೆ

  ಜನವರಿ 11 ರಂದು ಬಿಡುಗಡೆ

  ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಕೃಷ್ಣ, ಪ್ರಕಾಶ್ ರಾಜ್, ರಾಜೇಂದ್ರ ಪ್ರಸಾದ್, ವೆನ್ನೆಲ್ಲಾ ಕಿಶೋರ್, ಸುಬ್ಬರಾಜು ಮುಂತಾದ ದೊಡ್ಡ ತಾರಾಬಳಗ ಹೊಂದಿರುವ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿರುವ 'ಸರಿಲೇರು ನೀಕೆವ್ವರು' ಚಿತ್ರ ಜನವರಿ 11, 2020 ರಂದು ತೆರೆಗೆ ಬರಲಿದೆ.

  English summary
  Rashmika Mandanna and Vijayashanti has got whopping remuneration for Sarileru Neekkevvaru Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X