For Quick Alerts
  ALLOW NOTIFICATIONS  
  For Daily Alerts

  ಕ್ರೇಜಿ ಪ್ರಾಜೆಕ್ಟ್‌ನಲ್ಲಿ ರಶ್ಮಿಕಾ ಐಟಂ ಸಾಂಗ್: ಬಿಂದಾಸ್ ಆಗಿ ಕುಣಿಯಲು ಭಾರೀ ಸಂಭಾವನೆ ಕೇಳಿದ ಕಿರಿಕ್ ಬೆಡಗಿ?

  |

  ಕನ್ನಡ ಸಿನಿಮಾಗಳಲ್ಲಿ ಮಿಂಚಿ ಮುಂದೆ ಟಾಲಿವುಡ್ ಮೂಲಕ ಬಾಲಿವುಡ್ ಪ್ರವೇಶಿಸಿದ ಬೆಡಗಿ ರಶ್ಮಿಕಾ ಮಂದಣ್ಣ. ತೆಲುಗು, ತಮಿಳು ಜೊತೆಗೆ ಹಿಂದಿ ಸಿನಿಮಾಗಳಲ್ಲೂ ರೋಶ್ ಬಣ್ಣ ಹಚ್ಚಿದ್ದಾರೆ. ಇದೀಗ ಕೊಡಗಿನ ಬೆಡಗಿ ಐಟಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

  ಸ್ಟಾರ್ ಹೀರೊಯಿನ್ಸ್ ಐಟಂ ಸಾಂಗ್‌ಗೆ ಸ್ಟೆಪ್ಸ್ ಹಾಕಿದ್ರೆ ಹಿಟ್ ಆಗೋದು ಗ್ಯಾರೆಂಟಿ. ಇಂತಹ ಸಾಂಗ್ಸ್ ಸಹಜವಾಗಿಯೇ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡೋಕೆ ಸಹಕಾರಿ ಆಗುತ್ತದೆ. ಅದೇ ಕಾರಣಕ್ಕೆ ಕಥೆ ಬೇಕೋ ಬೇಡೋ ಒಂದು ಸ್ಪೆಷಲ್ ನಂಬರ್ ಅಂತೂ ಡಿಸೈನ್ ಆಗುತ್ತೆ. ದಶಕದ ಹಿಂದೆಯೇ ಬಾಲಿವುಡ್ ಟಾಪ್ ಹೀರೋಯಿನ್ಸ್ ಡ್ಯಾನ್ಸಿಂಗ್ ನಂಬರ್ಸ್‌ಗೆ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಅದಕ್ಕೆ ತಕ್ಕ ಸಂಭಾವನೆಯನ್ನು ಪಡೆದಿದ್ದರು. ದಕ್ಷಣದಲ್ಲೂ ಈ ಟ್ರೆಂಡ್ ಶುರುವಾಗಿದೆ. ಕಾಜಲ್, ತಮನ್ನಾ, ಸಮಂತಾರಂತಹ ಸ್ಟಾರ್ ನಟಿಯರೇ ಬಿಂದಾಸ್ ನಂಬರ್‌ಗೆ ಡ್ಯಾನ್ಸ್ ಮಾಡಿ ಮೋಡಿ ಮಾಡಿದ್ದಾರೆ.

  ಕ್ರೇಜ್‌ಗೆ ತಕ್ಕಂತೆ ನಟಿಯರು ಐಟಂ ಸಾಂಗ್ಸ್‌ಗೆ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. ಇಡೀ ಸಿನಿಮಾದಲ್ಲಿ ನಟಿಸೋದಕ್ಕಿಂತ ಇಂತಹ ಸಾಂಗ್ಸ್‌ನಲ್ಲಿ ಒಂದೆರಡು ದಿನ ಕುಣಿದರೆ ಭಾರೀ ಸಂಭಾವನೆ ಬ್ಯಾಗಿಗೆ ಇಳಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ. ಸಿನಿಮಾ ಗೆಲ್ಲುತ್ತೋ ಸೋಲುತ್ತೋ ಒಳ್ಳೆ ಸಂಭಾವನೆ ಅಂತೂ ಸಿಗುತ್ತೆ.

  SSMB28 ಚಿತ್ರದಲ್ಲಿ ರಶ್ಮಿಕಾ ಐಟಂ ಸಾಂಗ್

  SSMB28 ಚಿತ್ರದಲ್ಲಿ ರಶ್ಮಿಕಾ ಐಟಂ ಸಾಂಗ್


  ಹೌದು ಇಂತಾದೊಂದು ಸುದ್ದಿ ಈಗ ಫಿಲ್ಮ್‌ನಗರ್‌ನಲ್ಲಿ ಚಕ್ಕರ್ ಹೊಡೀತಿದೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್ ಆಗಿ ಕುಣಿಯೋ ಬಗ್ಗೆ ಚರ್ಚೆ ನಡೀತಿದೆಯಂತೆ. ಕಿರಿಕ್ ಬೆಡಗಿ ಈವರೆಗೆ ಯಾವುದೇ ಚಿತ್ರದಲ್ಲೂ ಐಟಂ ಸಾಂಗ್‌ಗೆ ಕುಣಿದಿಲ್ಲ. ರೋಶ್ ಕ್ರೇಜ್ ಈಗ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಜೋರಾಗಿದೆ. ತ್ರಿವಿಕ್ರಮ್ ಕ್ರೇಜಿ ಪ್ರಾಜೆಕ್ಟ್‌ನಲ್ಲಿ ರಶ್ಮಿಕಾ ಡ್ಯಾನ್ಸಿಂಗ್ ನಂಬರ್ ಪ್ಲ್ಯಾನ್ ನಡೀತಿದೆಯಂತೆ.

  ಸ್ಪೆಷಲ್‌ ಸಾಂಗ್‌ಗೆ ಭಾರೀ ಸಂಭಾವನೆ ಡಿಮ್ಯಾಂಡ್

  ಸ್ಪೆಷಲ್‌ ಸಾಂಗ್‌ಗೆ ಭಾರೀ ಸಂಭಾವನೆ ಡಿಮ್ಯಾಂಡ್

  ರ್ಯಾಪರ್ ಬಾದ್‌ಶಾ ಆಲ್ಬಮ್‌ ಸಾಂಗ್‌ನಲ್ಲಿ ಕುಣಿದಿದ್ದು ಬಿಟ್ಟರೆ ರಶ್ಮಿಕಾ ಮಂದಣ್ಣ ಯಾವುದೇ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದಿಲ್ಲ. 'ಪುಷ್ಪ' ಸಿನಿಮಾ ನಂತರ ಸಾನ್ವಿ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಅತ್ತ ಬಾಲಿವುಡ್‌ನಲ್ಲೂ ಮಿಂಚು ಹರಿಸ್ತಿದ್ದಾರೆ. ಇಂತಹ ಸಮಯದಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡಿದ್ರೆ, ಸಿನಿಮಾ ಕ್ರೇಜ್ ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ನಡೀತಿದೆ. ಡಿಮ್ಯಾಂಡ್‌ಗೆ ತಕ್ಕಂತೆ ರಶ್ಮಿಕಾ ಕೋಟಿ ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ.

  ಮಹೇಶ್- ತ್ರಿವಿಕ್ರಮ್ ಹ್ಯಾಟ್ರಿಕ್ ಸಿನಿಮಾ

  ಮಹೇಶ್- ತ್ರಿವಿಕ್ರಮ್ ಹ್ಯಾಟ್ರಿಕ್ ಸಿನಿಮಾ

  ಈ ಹಿಂದೆ 'ಅತಡು' ಹಾಗೂ 'ಖಲೇಜಾ' ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ 3ನೇ ಬಾರಿ ಕೈ ಜೋಡಿಸಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚುತ್ತಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದಾರೆ. ಇಬ್ಬರು ನಾಯಕಿಯರ ಜೊತೆಗೆ ರಶ್ಮಿಕಾ ಸ್ಪೆಷಲ್ ಸಾಂಗ್ ಚಿತ್ರಕ್ಕೆ ಮತ್ತಷ್ಟು ಗ್ಲಾಮರ್ ಆಡ್ ಮಾಡಲಿದೆ. ಕಾರಣಾಂತರಗಳಿಂದ SSMB28 ಸಿನಿಮಾ ಶೂಟಿಂಗ್ ತಡವಾಗುತ್ತಲೇ ಇದೆ.

  ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ

  ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ

  ದಿನದಿಂದ ದಿನಕ್ಕೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ರಶ್ಮಿಕಾ ನಟನೆಯ 'ವಾರೀಸು' ಚಿತ್ರೀಕರಣ ಮುಗಿದಿದೆ. 'ಪುಷ್ಪ- 2' ಶೂಟಿಂಗ್ ಶುರುವಾಗಿದೆ. ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ನಟಿಸ್ತಿದ್ದಾರೆ. 'ಮಿಷನ್ ಮಜ್ನು' ಬಿಡುಗಡೆ ಆಗಬೇಕಿದೆ. ಇನ್ನು ಬಾಲಿವುಡ್‌ ಪ್ರವೇಶಿಸಿದ ಮೇಲೆ ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಕೊಡಗಿನ ಬೆಡಗಿ ಮಿಂಚುತ್ತಿದ್ದಾರೆ.

  English summary
  Rashmika mandanna demanding whopping remuneration for SSMB 28 movie special song. The latest reports reveal that Rashmika has been approached for an item number in Trivikram srinivas- Mahesh babu's upcoming project. know more.
  Sunday, December 4, 2022, 18:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X