ರಶ್ಮಿಕಾ -ರಕ್ಷಿತ್ ಬ್ರೇಕ್ ಅಪ್: ಆಪ್ತ ಮೂಲಗಳಿಂದ ಬಂದ ಬ್ರೇಕಿಂಗ್ ನ್ಯೂಸ್!

By Pavithra

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮನೆ ಮಾತಾದ ಚೆಲುವೆ ರಶ್ಮಿಕಾ ಮಂದಣ್ಣ. ತಾನು ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಚಿತ್ರಪ್ರೇಮಿಗಳ ಮನಸ್ಸನ್ನು ಕದ್ದ ಚೆಲುವೆ ಈಕೆ. ತೆರೆ ಮೇಲೆ ಜೋಡಿಯಾಗಿದ್ದ ರಕ್ಷಿತ್ ಮತ್ತು ರಶ್ಮಿಕಾ ನಿಜ ಜೀವನದಲ್ಲಿಯೂ ಜೋಡಿ ಆಗಲು ನಿರ್ಧಾರ ಮಾಡಿದ್ದರು.

ಕಳೆದ ವರ್ಷ ಕಿರಿಕ್ ಜೋಡಿ ತಮ್ಮ ಮನೆಯವರ ಒಪ್ಪಿಗೆಯನ್ನು ಪಡೆದುಕೊಂಡು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು. ನಾವಿಬ್ಬರು ಪ್ರೇಮಿಗಳು ಎನ್ನುವುದನ್ನು ಅಭಿಮಾನಿಗಳಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದರ ಮೂಲಕ ಅಧಿಕೃತಗೊಳಿಸಿದ್ದರು. ನೋಡ ನೋಡುತ್ತಿದ್ದಂತೆ ರಶ್ಮಿಕಾ, ಯಾರೂ ಊಹೆ ಮಾಡಿಕೊಳ್ಳದ ರೀತಿಯಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಲು ಆರಂಭಿಸಿದರು. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಕರ್ನಾಟಕ ಕ್ರಶ್ ಸಖತ್ ಫೇಮಸ್ ಆದರು.

ಸ್ಯಾಂಡಲ್ ವುಡ್ ನಲ್ಲಿ ಭಾರಿ ಪ್ರಖ್ಯಾತಿಗಳಿಸಿದ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ತೆಲುಗಿನಲ್ಲಿ ಅಭಿನಯ ಮಾಡಿದ ಎರಡನೇ ಚಿತ್ರವೇ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಇದರ ಬೆನ್ನಲ್ಲೆ ರಶ್ಮಿಕಾ ಹಾಗೂ ರಕ್ಷಿತ್ ಮಧ್ಯೆ ಏನೋ ಸರಿ ಇಲ್ಲ ಎನ್ನುವ ಗುಸು-ಗುಸು ಕೇಳಿ ಬರುತ್ತಿತ್ತು. ಇಬ್ಬರು ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿಯೂ ಹರಡಿತ್ತು. ಈ ವಿಚಾರಗಳಿಗೆ ಪುಷ್ಟಿ ನೀಡುವಂತೆ ರಶ್ಮಿಕಾ ಮಂದಣ್ಣ ಅವರ ಆಪ್ತ ಮೂಲದಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಮುಂದೆ ಓದಿ

ರಕ್ಷಿತ್-ರಶ್ಮಿಕಾ ಗಾಸಿಪ್ ಸುದ್ದಿ ನಿಜವಾಗುತ್ತಾ?

ರಕ್ಷಿತ್-ರಶ್ಮಿಕಾ ಗಾಸಿಪ್ ಸುದ್ದಿ ನಿಜವಾಗುತ್ತಾ?

'ಗೀತಾ-ಗೋವಿಂದಂ' ಸಿನಿಮಾದ ವೇಳೆಯಲ್ಲಿಯೇ ಇತ್ತ ರಶ್ಮಿಕಾ ಹಾಗೂ ರಕ್ಷಿತ್ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಅದೇ ಸುದ್ದಿ ನಿಜವಾಗುತ್ತೆ ಅಂತ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಕುಟುಂಬದ ಆಪ್ತರು ನೀಡಿದ್ದಾರೆ.

ಬ್ರೇಕ್ ಅಪ್ ಗೆ ಕಾರಣ ಏನು?

ಬ್ರೇಕ್ ಅಪ್ ಗೆ ಕಾರಣ ಏನು?

ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧಾರ ಮಾಡಿದ್ದಾರಂತೆ. ರಕ್ಷಿತ್ ಮತ್ತು ರಶ್ಮಿಕಾ ಫ್ಯಾಮಿಲಿ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರಂತೆ.

ಮನೆಯವರ ಜೊತೆ ಮಾತನಾಡಿ ನಿರ್ಧಾರ

ಮನೆಯವರ ಜೊತೆ ಮಾತನಾಡಿ ನಿರ್ಧಾರ

ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತನಾಡಿದ್ದಾರಂತೆ. ಹಿರಿಯರು ಹಾಗೂ ಸಂಬಂದಿಕರೆಲ್ಲರೂ ಒಮ್ಮತದ ನಿರ್ಧಾರ ಮಾಡಿದ್ದಾರಂತೆ. ಸದ್ಯ ರಶ್ಮಿಕಾ ವೃತ್ತಿ ಜೀವನದ ಬಗ್ಗೆ ಗಮನ ಹರಿಸಲಿ, ಮದುವೆ ವಿಚಾರ ಮುಂದೆ ಮಾಡೋಣ ಎಂದು ಕುಟುಂಬದವರು ನಿರ್ಧಾರ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣದಿಂದ ಹೊರನಡೆದ ರಕ್ಷಿತ್

ಸಾಮಾಜಿಕ ಜಾಲ ತಾಣದಿಂದ ಹೊರನಡೆದ ರಕ್ಷಿತ್

ರಕ್ಷಿತ್ ಶೆಟ್ಟಿ ಸೋಷಿಯಲ್ ಮಿಡಿಯಾದಿಂದ ತಮ್ಮ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಿಂದ ಹೊರ ಹೋಗಿದ್ದಾರೆ. ಇನ್ನು ಮುಂದೆ ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಬಳಸುವುದಿಲ್ಲ ಎಂದಿದ್ದಾರೆ. ರಕ್ಷಿತ್ ಈ ನಿರ್ಧಾರ ಮಾಡಲು ಇದೆ ಕಾರಣ ಇರಬಹುದು.

More from Filmibeat

English summary
A source close to the actress confirm. Actress Rashmika Mandanna has broken off her engagement with Kannada actor Rakshith Shetty. A source close to the actress confirm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X