»   » 'ರಾಜಾಹುಲಿ'ಯ ಮುಂದಿನ ಚಿತ್ರಕ್ಕೆ 'ಕಿರಿಕ್' ರಶ್ಮಿಕಾ ರಾಣಿ.!

'ರಾಜಾಹುಲಿ'ಯ ಮುಂದಿನ ಚಿತ್ರಕ್ಕೆ 'ಕಿರಿಕ್' ರಶ್ಮಿಕಾ ರಾಣಿ.!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ವಿವಾದ ದೊಡ್ಡ ಸುದ್ದಿಯಾಗಿತ್ತು. ಸಂದರ್ಶನವೊಂದರಲ್ಲಿ ಯಶ್ ವಿರುದ್ಧ ನೀಡಿದ್ದ ಹೇಳಿಕೆವೊಂದು ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕೆರಳಿಸಿತ್ತು. ನಂತರ ರಶ್ಮಿಕಾ ಹಾಗೂ ಯಶ್ ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ವಿವಾದ ಸುಖಾಂತ್ಯ ಕಂಡಿತ್ತು.

ಇದಾದ ನಂತರ ಯಶ್ ಜೊತೆ ರಶ್ಮಿಕಾ ಮಂದಣ್ಣ ಅವರು ಅಭಿನಯಿಸುವುದು ಇನ್ನು ಕನಸು ಮಾತ್ರ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದಿತ್ತು. ಆದ್ರೆ, ಈ ವಿವಾದದ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಸಿನಿಮಾಗೆ ರಶ್ಮಿಕಾ ನಾಯಕಿ ಆಗಿ ಆಯ್ಕೆ ಆಗಿದ್ದಾರಂತೆ.

ಯಶ್ ಜೊತೆ ರಶ್ಮಿಕಾ ಯಾವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಯಾವಾಗ ಶುರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ರಾಕಿಂಗ್ ಸ್ಟಾರ್ ರಶ್ಮಿಕಾ ಜೋಡಿ

ಕನ್ನಡದ ಸ್ಟಾರ್ ನಟರಿಗೆ ನಾಯಕಿ ಆಗಿ ಅಭಿನಯಿಸುತ್ತಿರುವ ರಶ್ಮಿಕಾ ಈಗ ಯಶ್ ಸಿನಿಮಾಗೂ ಹೀರೋಯಿನ್ ಆಗುವ ಅವಕಾಶ ಪಡೆದುಕೊಂಡಿದ್ದಾರೆ. ಯಶ್ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರಂತೆ.

ಹರ್ಷ ನಿರ್ದೇಶನದ ಚಿತ್ರ

ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಹರ್ಷ ತಮ್ಮ ಮುಂದಿನ ಚಿತ್ರವನ್ನ ರಾಕಿಂಗ್ ಸ್ಟಾರ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ರಾಣಾ' ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ, 'ಮಾಸ್ಟರ್ ಪೀಸ್'ಗೆ ಜೊತೆಯಾಗುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಕನಸು ಈಡೇರುತ್ತಿದೆ

ಅಂದ್ಹಾಗೆ, ಯಶ್ ಅಭಿಮಾನಿಗಳು ಮತ್ತು ರಶ್ಮಿಕಾ ಅವರ ನಡುವೆ ಈ ವಿವಾದ ಸೃಷ್ಟಿಯಾಗುವುದಕ್ಕು ಮುಂಚೆ, ಯಶ್ ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ ಎಂದು ಹಲವು ಬಾರಿ ರಶ್ಮಿಕಾ ಅವರು ಹೇಳಿಕೊಂಡಿದ್ದರು. ಈಗ ರಶ್ಮಿಕಾ ಅವರ ಈ ಆಸೆ ನೆರವೇರುತ್ತಿದೆ.

ಹರ್ಷ ಜೊತೆ ರಶ್ಮಿಕಾಗೆ 2ನೇ ಸಿನಿಮಾ

ಸದ್ಯ, ಹರ್ಷ ನಿರ್ದೇಶನ ಮಾಡುತ್ತಿರುವ 'ಅಂಜನಿಪುತ್ರ' ಚಿತ್ರದಲ್ಲಿ ರಶ್ಮಿಕಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದಾರೆ. ಹೀಗಿರುವಾಗ, ತಮ್ಮ ಮುಂದಿನ ಚಿತ್ರದಲ್ಲಿ ಯಶ್ ಜೊತೆ ಅಭಿನಯಿಸಲು ಹೊಸ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಹೀಗಾಗಿ, ರಶ್ಮಿಕಾ ಅವರನ್ನ ಹರ್ಷ ಆಯ್ಕೆ ಮಾಡಿಕೊಂಡಿದ್ದಾರಂತೆ.

ಅಧಿಕೃತ ಘೋಷಣೆ ಆಗಿಲ್ಲ

ಹರ್ಷ ನಿರ್ದೇಶನದ 'ರಾಣಾ' ಚಿತ್ರದಲ್ಲಿ ರಶ್ಮಿಕಾ ನಾಯಕಿ ಎಂದು ಅಧಿಕೃತ ಘೋಷಣೆ ಆಗಿಲ್ಲ. ರಶ್ಮಿಕಾ ಮಂದಣ್ಣ ಸದ್ಯ 'ಅಂಜನಿಪುತ್ರ' ಹಾಗೂ 'ಚಮಕ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ, ಇದರ ಜೊತೆ ಎರಡು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮಧ್ಯೆ ಡೇಟ್ಸ್ ಹೊಂದಾಣಿಕೆ ಆದರೇ, ಖಂಡಿತ ಯಶ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುತ್ತಿವೆ ಮೂಲಗಳು.

ಅಕ್ಟೋಬರ್ ನಲ್ಲಿ 'ರಾಣಾ'

ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ತೊಡಗಿಕೊಂಡಿದ್ದಾರೆ. ಅಕ್ಟೋಬರ್ ವೇಳೆ ಈ ಸಿನಿಮಾ ಕಂಪ್ಲೀಟ್ ಆಗಿರುತ್ತೆ. ಹೀಗಾಗಿ, ಅಕ್ಟೋಬರ್ ತಿಂಗಳಿನಿಂದ ರಾಣಾ ಚಿತ್ರವನ್ನ ಶುರು ಮಾಡುವ ಭರವಸೆಯಲ್ಲಿದೆ ಚಿತ್ರತಂಡ.

English summary
Director Harsha, who will be helming Yash’s next movie Raana, might feature Rashmika Mandanna opposite the Rocking Star.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada