ವಿಜಯ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ದುಪ್ಪಟ್ಟು ಸಂಭಾವನೆ: ಈಕೆಯೇ ನಂ.1?

ರಶ್ಮಿಕಾ ಮಂದಣ್ಣ ಇದೀಗ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ಕನ್ನಡದ ನಂತರ, ತೆಲುಗು ಮತ್ತು ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆಯ ನಟಿ. ಟಾಪ್ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆಗೆ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಕ್ರೇಜ್ ಮತ್ತಷ್ಟು ಹೆಚ್ಚಿದೆ. ಈ ಒಂದೇ ಚಿತ್ರದ ಮೂಲಕ ಉತ್ತರ ಭಾರತದಲ್ಲೂ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ನಟಿದ್ದಾರೆ. ಈಗ ತಮಿಳು ಸ್ಟಾರ್ ನಟ ವಿಜಯ್ ಜೊತೆಗೂ ತೆರೆಹಂಚಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಮೂಲಕ ರಶ್ಮಿಕಾ ಸಂಭಾವನೆ ಹೆಚ್ಚಾಗಿದೆ. ಸಂಭಾವನೆ ಹೆಚ್ಚಿದೆ ಎನ್ನುವುದಕ್ಕಿಂತಲೂ, ರಶ್ಮಿಕಾ ಈಗ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ ಎನ್ನುವುದೇ ಸುದ್ದಿ. ಹಾಗಿದ್ದರೆ ರಶ್ಮಿಕಾ ಪಡೆದ ಸಂಭಾವನೆ ಎಷ್ಟು? ಯಾವ ನಟಿಯರನ್ನು ಹಿಂದಿಕ್ಕಿದ್ದಾರೆ ಎನ್ನುವುದನ್ನು ಮುಂದೆ ಓದಿ...

'ವಾರಿಸು' ಚಿತ್ರಕ್ಕೆ ರಶ್ಮಿಕಾ ನಾಯಕಿ!

'ವಾರಿಸು' ಚಿತ್ರಕ್ಕೆ ರಶ್ಮಿಕಾ ನಾಯಕಿ!

ರಶ್ಮಿಕಾ ಮಂದಣ್ಣ ತೆಲುಗಿನ ಬಳಿಕ ತಮಿಳು ಸ್ಟಾರ್ ಹೀರೊಗಳ ಜೊತೆಗೆ ತಮ್ಮ ಸಿನಿಮಾ ಜರ್ನಿಯನ್ನು ಶುರುಮಾಡಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಕಾರ್ತಿ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಇದೀಗ ನಟ ವಿಜಯ್ ಜೊತೆಗೆ ಅಭಿನಯಿಸಲು ಮುಂದಾಗಿದ್ದಾರೆ. ತಮಿಳಿನ 'ವಾರಿಸು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. 'ವಾರಿಸು' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಆದರೆ ಪೋಸ್ಟರ್‌ನಲ್ಲಿ ನಟ ವಿಜಯ್ ಮಾತ್ರ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪಾತ್ರ ಹೇಗೆ ಇರಲೇಬೇಕು ಎನ್ನುವ ಬಗ್ಗೆ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

'ವಾರಿಸು' ಚಿತ್ರದಲ್ಲಿ ನಟಿ ರಶ್ಮಿಕಾ ಪಾತ್ರ ಹೇಗಿರಲಿದೆ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಚಿತ್ರಕ್ಕಾಗಿ ರಶ್ಮಿಕಾ ಪಡೆದುಕೊಂಡಿರುವ ಸಂಭಾವನೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. 'ವಾರಿಸು' ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ. ಜೊತೆಗೆ ನಂಬರ್ ನಟಿ ಎನಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ, ಸಮಂತಾ ಎಲ್ಲರನ್ನು ಹಿಂದೆ ಹಾಕಿ ರಶ್ಮಿಕಾ ಇದೀಗ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ರಶ್ಮಿಕಾ ಸಂಭಾವನೆ 5 ಕೋಟಿ ರೂ.ಯಂತೆ!

ರಶ್ಮಿಕಾ ಸಂಭಾವನೆ 5 ಕೋಟಿ ರೂ.ಯಂತೆ!

'ವಾರಿಸು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದಿರುವ ಸಂಭಾವನೆ 5 ಕೋಟಿ ರೂ. ಎನ್ನಲಾಗಿದೆ. ಸಿನಿಮಾರಂಗದಲ್ಲಿ ನಾಯಕ ನಟಿಯರಿಗೆ ನಾಯಕರಿಗಿಂತ ಕಡಿಮೆ ಸಂಭಾವನೆ ಇರುತ್ತೆ. ಆದರೆ ನಾಯಕಿಯರ ಪೈಕಿ ಹೆಚ್ಚು ಸಂಭಾವನೆ ಪಡೆದು ನಂಬರ್1 ಸ್ಥಾನದಲ್ಲಿ ರಶ್ಮಿಕಾ ಇದ್ದಾರೆ. ಈ ಮೊದಲು ರಶ್ಮಿಕಾ ಮಂದಣ್ಣ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಈಗ ತಮಿಳು ಚಿತ್ರಕ್ಕಾಗಿ 2 ಕೋಟಿ ರೂ. ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ 5 ಕೋಟಿ ರೂ. ಪಡೆದುಕೊಳ್ಳುವ ಮೂಲಕ ರಶ್ಮಿಕಾ ಸುದ್ದಿಯಾಗಿದ್ದಾರೆ.

ಪೂಜಾ ಹೆಗ್ಡೆಯನ್ನು ಬೀಟ್ ಮಾಡಿದ ರಶ್ಮಿಕಾ!

ಪೂಜಾ ಹೆಗ್ಡೆಯನ್ನು ಬೀಟ್ ಮಾಡಿದ ರಶ್ಮಿಕಾ!

ಸೌತ್ ನಟಿಯರ ಪೈಕಿ ನಟಿ ಪೂಜಾ ಹೆಗ್ಡೆ ಮೂರುವರೆ ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು. ಹಾಗಾಗಿ ಪೂಜಾ ಹೆಗ್ಡೆ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಮೂರು ಕೋಟಿ ರೂ. ಸಂಭಾವನೆ ಪಡೆದು ಎರಡನೇ ಸ್ಥಾನದಲ್ಲಿದ್ದರು. ರಶ್ಮಿಕಾ ಮಂದಣ್ಣ ರೀತಿಯೇ ಸಮಂತಾ ಕೂಡ 3 ಕೋಟಿ ರೂ. ಪಡೆಯುತ್ತಿದ್ದರು. ಆದರೀಗ ಮತ್ತೆ 2 ಕೋಟಿ ರೂ.ಸಂಭಾವನೆ ಹೆಚ್ಚಿದ್ದು, ಸಮಂತಾ, ಪೂಜಾ ಹೆಗ್ಡೆಯನ್ನು ಹಿಂದಿಕ್ಕಿದ್ದಾರೆ ಎನ್ನಲಾಗಿದೆ.

ಬಾಲಿವುಡ್‌ನಲ್ಲಿ ರಶ್ಮಿಕಾಗೆ ಬೇಡಿಕೆ!

ಬಾಲಿವುಡ್‌ನಲ್ಲಿ ರಶ್ಮಿಕಾಗೆ ಬೇಡಿಕೆ!

ಅಲ್ಲದೇ ರಶ್ಮಿಕಾಗೆ ಇದೀಗ ಬಾಲಿವುಡ್‌ನಲ್ಲೂ ಕೂಡ ಬೇಡಿಕೆ ಹೆಚ್ಚಾಗುತ್ತಿದೆ. ಕರಣ್ ಜೋಹರ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿ ಬಂದ ರಶ್ಮಿಕಾ ಬಗ್ಗೆ ಮತ್ತಷ್ಟು ಸುದ್ದಿಗಳು ಹಬ್ಬಿವೆ. ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡಿರುವ ಸೂಚನೆಯನ್ನು ಕೊಟ್ಟಿದ್ದಾರೆ. ಈಗಾಗಲೇ ರಣ್ಬೀರ್ ಕಪೂರ್ ಜೊತೆಗೆ ಸಿನಿಮಾ ಮಾಡುತ್ತಿದ್ದು, ಸಲ್ಮಾನ್ ಖಾನ್ ಜೊತೆಗೂ ರಶ್ಮಿಕಾ ಹೆಸರು ಕೇಳಿ ಬರ್ತಿದೆ.

More from Filmibeat

English summary
Rashmika Mandanna Hike Remuneration To 5 Crore For Varisu And Become No.1, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X