Just In
Don't Miss!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಸಂಭಾವನೆ ಜಾಸ್ತಿ: ನಟಿ ರಶ್ಮಿಕಾ ಮಂದಣ್ಣ ಇನ್ನಷ್ಟು ಕಾಸ್ಟ್ಲಿ.?
ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ತೆಲುಗು ಸಿನಿ ಅಂಗಳದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಹೊಸದೊಂದು ಗಾಸಿಪ್ ಹರಿದಾಡುತ್ತಿದೆ. ಅದು ರಶ್ಮಿಕಾ ಮಂದಣ್ಣ ಸಂಭಾವನೆ ಕುರಿತಾದದ್ದು.!
ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷಗಳಾಗಿದೆ ಅಷ್ಟೇ. ಈ ನಾಲ್ಕು ವರ್ಷಗಳಲ್ಲಿ 'ಕಿರಿಕ್ ಪಾರ್ಟಿ', 'ಅಂಜನಿ ಪುತ್ರ', 'ಚಲೋ', 'ಗೀತ ಗೋವಿಂದಂ', 'ಯಜಮಾನ', 'ಸರಿಲೇರು ನೀಕೆವ್ವರು' ಅಂತಹ ಹಿಟ್ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ನೀಡಿದ್ದಾರೆ.
'ಸರಿಲೇರು ನೀಕೆವ್ವರು' ಸಿನಿಮಾ ಹಿಟ್ ಆಗುತ್ತಿದ್ದಂತೆಯೇ, ನಟಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಲ್ಲಿ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದ್ಯಂತೆ. ಬೇಡಿಕೆ ಜಾಸ್ತಿ ಆಗಿರುವ ಕಾರಣ ಸಂಭಾವನೆಯನ್ನೂ ಮತ್ತೆ ಜಾಸ್ತಿ ಮಾಡಿಕೊಂಡಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ. ಮುಂದೆ ಓದಿರಿ...

ನಟಿ ರಶ್ಮಿಕಾ ಮಂದಣ್ಣ ಸಂಭಾವನೆ ಇನ್ನಷ್ಟು ಜಾಸ್ತಿ.?
ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಗಾಸಿಪ್ ಪ್ರಕಾರ, ರಶ್ಮಿಕಾ ಮಂದಣ್ಣ ಸಂಭಾವನೆ ಹೈಕ್ ಆಗಿದೆ. ಚಿತ್ರವೊಂದರಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ ಎಂಬ ಅಂತೆ-ಕಂತೆ ತೆಲುಗು ಸಿನಿ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.
'ಸರಿಲೇರು ನೀಕೆವ್ವರು': ರಶ್ಮಿಕಾ, ವಿಜಯಶಾಂತಿಗೆ ಕೈ ತುಂಬಾ ಸಂಭಾವನೆ.!

ಮಹೇಶ್ ಬಾಬು ಜೊತೆ ನಟಿಸಲು ಪಡೆದ ಸಂಭಾವನೆ ಎಷ್ಟು.?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರು. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ 1.1 ಕೋಟಿಯನ್ನ ಸಂಭಾವನೆಯಾಗಿ ಪಡೆದಿದ್ದರು ಎಂದು ಈ ಹಿಂದೆ ಸುದ್ದಿ ಆಗಿತ್ತು.
ರಶ್ಮಿಕಾ ಇಷ್ಟು ದೊಡ್ಡ ಶ್ರೀಮಂತರಾ? ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ

ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬಿಜಿ
ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿ ಅಂಗಳದಲ್ಲಿ ಬಿಜಿಯಾಗಿದ್ದಾರೆ. 'ಭೀಷ್ಮ' ಮತ್ತು ಅಲ್ಲು ಅರ್ಜುನ್ ಅಭಿನಯದ ಇನ್ನೂ ಹೆಸರಿಡದ ಚಿತ್ರಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ. ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಧ್ರುವ ಸರ್ಜಾ ಜೊತೆಗೆ 'ಪೊಗರು' ಚಿತ್ರದಲ್ಲೂ ರಶ್ಮಿಕಾ ಅಭಿನಯಿಸಿದ್ದಾರೆ.
ಒಂದು ಸಿನಿಮಾಗೆ ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?

ಕಾಲಿವುಡ್ ಮತ್ತು ಬಾಲಿವುಡ್ ನಿಂದಲೂ ಬುಲಾವ್
ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ನಲ್ಲೂ ರೆಡ್ ಕಾರ್ಪೆಟ್ ಹಾಸಲಾಗಿದೆ. ರಶ್ಮಿಕಾ ಮಂದಣ್ಣ ಕಾಲ್ ಶೀಟ್ ಗಾಗಿ ಕೆಲ ಬಾಲಿವುಡ್ ನಿರ್ಮಾಪಕರು ಮಾತುಕತೆ ನಡೆಸಿದ್ದಾರೆ. ಎಲ್ಲವೂ ಓಕೆ ಆದರೆ, ಬಾಲಿವುಡ್ ಗೆ ರಶ್ಮಿಕಾ ಹಾರುವುದು ಪಕ್ಕಾ. ಅಂದ್ಹಾಗೆ, 'ಸುಲ್ತಾನ್' ಚಿತ್ರದ ಮೂಲಕ ರಶ್ಮಿಕಾ ಕಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.