ಪ್ರಶಾಂತ್ ನೀಲ್ ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ?

ನಟಿ ರಶ್ಮಿಕಾ ಮಂದಣ್ಣ ಇದೀಗ ಬಹುಬೇಡಿಕೆಯ ನಟಿ. ಬಾಲಿವುಡ್ ಮಂದಿ ಕೂಡ ಆಕೆಯ ಕಾಲ್‌ಶೀಟ್‌ಗಾಗಿ ಕಾಯುವಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿ ರಶ್ಮಿಕಾ ಕಮಾಲ್ ಮಾಡುತ್ತಿದ್ದಾರೆ. 'ಸಿಕಂದರ್' ಸಿನಿಮಾ ಸೋತರೂ ಆಕೆಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.

'ಅನಿಮಲ್', 'ಪುಷ್ಪ-2', 'ಛಾವ' ರೀತಿಯ ದೊಡ್ಡ ಸಿನಿಮಾಗಳ ಗೆಲುವು ರಶ್ಮಿಕಾ ಕ್ರೇಜ್ ಹೆಚ್ಚುವಂತೆ ಮಾಡಿದೆ. 'ಸಿಂಕದರ್' ಗೆಲ್ಲದಿದ್ದರೂ ಸಲ್ಮಾನ್ ಖಾನ್ ಜೊತೆ ನಟಿಸಿದ ಖುಷಿ ಆಕೆಗಿದೆ. ತಮಿಳಿನ 'ಕುಬೇರ' ಹಾಗೂ 'ದಿ ಗರ್ಲ್ ಫ್ರೆಂಡ್' ಹಾಗೂ 'ಥಮ' ಸಿನಿಮಾಗಳಲ್ಲಿ ಈಗ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಕೊಡಗಿನ ಕುವರಿ ಮಿಂಚುತ್ತಾರೆ ಎಂದು ಗುಲ್ಲಾಗಿದೆ.

Rashmika Mandanna in Prashanth Neel Directional

'ಸಲಾರ್' ಬಳಿಕ ಪ್ರಶಾಂತ್ ನೀಲ್ 'ಡ್ರ್ಯಾಗನ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸದ್ಯ ಕರ್ನಾಟಕದಲ್ಲೇ ಸಿನಿಮಾ ಚಿತ್ರೀಕರಣ ನಡೀತಿದೆ. ಜ್ಯೂ. ಎನ್‌ಟಿಆರ್ ಕೂಡ ತಂಡ ಸೇರಿಕೊಂಡಿದ್ದಾರೆ. ಜೂನ್ 25, 2016ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಕುಮಟಾದ ಧಾರೇಶ್ವರದಲ್ಲಿ ಭಾರೀ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ.

ರೈಲ್ವೆ ಟ್ರ್ಯಾಕ್, ಹೆಲಿಕ್ಯಾಪ್ಟರ್, ಟ್ಯಾಂಕರ್ ತಂದು ನಿಲ್ಲಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಬಂದೂಕು ಸೇರಿ ಸಾಕಷ್ಟು ಪ್ರಾಪರ್ಟಿ ಬಳಸಿ ಸನ್ನಿವೇಶಗಳನ್ನು ಸೆರೆಹಿಡಿಯುತ್ತಿದ್ದಾರೆ. ರಾಮನಗಿಂಡಿ ಕಡಲ ತೀರದಲ್ಲಿ ಇಡೀ ಚಿತ್ರೀಕರಣ ನಡೆಯುತ್ತಿದೆ. ಸಾರ್ವಜನಿಕರಿಗೆ ಪ್ರವೇಶವಿಲ್ಲ. ಇನ್ನು ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.

ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಅಷ್ಟೇ ಪ್ರಾಮುಖ್ಯತೆ ಇರುವುದಿಲ್ಲ. ಆದರೆ 'ಡ್ರ್ಯಾಗನ್' ಚಿತ್ರದಲ್ಲಿ ನಾಯಕಿ ಯಾರಾಗುತ್ತಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಮಾಸ್ ಕಮರ್ಷಿಯಲ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಬೇಕು ಎನ್ನುವುದು ಕೆಲವರ ವಾದ. ಅದರಲ್ಲೂ ತೆಲುಗು ಸಿನಿಮಾಗಳಲ್ಲಿ ಈ ಕ್ರೇಜ್ ಜಾಸ್ತಿ ಇರುತ್ತದೆ.

Rashmika Mandanna in Prashanth Neel Directional

'KGF' ಚಾಪ್ಟರ್-1 ಚಿತ್ರದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಸಾಂಗ್ ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿತ್ತು. ಬಳಿಕ ಚಾಪ್ಟರ್-2ನಲ್ಲಿ ಕೂಡ ಐಟಂ ಸಾಂಗ್ ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. 'ಸಲಾರ್-1' ಚಿತ್ರದಲ್ಲಿ ಕೂಡ ಡ್ಯಾನ್ಸಿಂಗ್ ನಂಬರ್ ಇದೆ ಅಂತೆಲ್ಲಾ ಗುಲ್ಲಾಗಿತ್ತು. ಆದರೆ ಅದೆಲ್ಲಾ ಸುಳ್ಳಾಗಿತ್ತು. ಇದೀಗ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಜೋಡಿಯ ಚಿತ್ರದಲ್ಲಿ ರಶ್ಮಿಕಾ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಸ್ಟಾರ್ ನಟಿಯರು ಸ್ಪೆಷಲ್ ಸಾಂಗ್‌ಗಳಿಗೆ ಕುಣಿಯೋದು ಹೊಸದೇನು ಅಲ್ಲ. ತಮನ್ನಾ ಇತ್ತೀಚೆಗೆ ನಟಿಯಾಗಿ ನಟಿಸೋದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಹೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ರಜನಿಕಾಂತ್ ನಟನೆಯ 'ಕೂಲಿ' ಚಿತ್ರದಲ್ಲಿ ಪೂಜಾ ಹೆಗ್ಡೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. 'ಪುಷ್ಪ'-2 ಚಿತ್ರದಲ್ಲಿ ಶ್ರೀಲೀಲಾ 'ಕಿಸ್ಸಿಕ್' ಎಂದು ಕುಣಿದಿದ್ದು ಗೊತ್ತೇಯಿದೆ. 'ಪುಷ್ಪ'-2 ಚಿತ್ರದಲ್ಲೇ ರಶ್ಮಿಕಾ ಕೂಡ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು.

'ಡ್ರ್ಯಾಗನ್' ಚಿತ್ರದ ಸ್ಪೆಷಲ್ ಸಾಂಗ್ ಅವಕಾಶ ಸಿಕ್ಕರೆ ರಶ್ಮಿಕಾ ಮಂದಣ್ಣ ಮಿಸ್ ಮಾಡಿಕೊಳ್ಳಲ್ಲ. ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಎಂದು ಕಾದು ನೋಡಬೇಕಿದೆ. ಬಹಳ ಹಿಂದೆ ಘೋಷಣೆ ಆಗಿದ್ದ ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಇದೀಗ ಅನಿವಾರ್ಯವಾಗಿ 6 ತಿಂಗಳು ರಿಲೀಸ್ ಮುಂದೂಡಲಾಗಿದೆ.

More from Filmibeat

English summary
Rashmika Mandanna specila song in Prashanth Neel's next film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X