Rashmika Mandanna: ರಶ್ಮಿಕಾಗೆ ಬಾಲಿವುಡ್ ಬಂಪರ್ ಆಫರ್: ರಣ್‌ಬೀರ್ ಜೊತೆ ಸಿನಿಮಾ!

ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿ ಜರ್ನಿಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಟಿ. ಸದ್ಯ ಕರುನಾಡಿನ ಈ ಪೋರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಾಲು ಸಾಲಾಗಿ ಸ್ಟಾರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ನಟಿ ರಶ್ಮಿಕಾ ಮೊದಲ ಸಾಲಿನಲ್ಲಿ ಇದ್ದಾರೆ. 'ಪುಷ್ಪ' ಚಿತ್ರದ ಬಳಿಕ ರಶ್ಮಿಕಾ ರೇಂಜ್ ಮತ್ತಷ್ಟು ಬದಲಾಗಿದೆ.

ಈಗಾಗಲೇ ನಟಿ ರಶ್ಮಿಕಾ ಬಾಲಿವುಡ್‌ನಲ್ಲಿ ಅಭಿನಯಕ್ಕೆ ಇಳಿದ್ದಾರೆ. ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಒಂದು ಆಲ್ಬಮ್ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಈಕೆ ಅಭಿನಯದ 'ಮಿಷನ್ ಮಜ್ನು' ಸಿನಿಮಾ ಇದೇ ವರ್ಷ ಮೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅತ್ತ ಅಮಿತಾಬ್ ಬಚ್ಚನ್ ಅವರ ಜೊತೆಗೆ 'ಗುಡ್ ಬೈ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಆ ಚಿತ್ರ ರಿಲೀಸ್ ಆಗುವುದು ಬಾಕಿ ಇದೆ.

ಈ ನಡುವೆ ರಶ್ಮಿಕಾ ಮಂದಣ್ಣ ಅಭಿನಯಿಸಲಿರುವ ಮತ್ತೊಂದು ಹೊಸ ಚಿತ್ರದ ಬಗ್ಗೆ ಸುದ್ದಿ ಹಬ್ಬಿದೆ, ಹೌದು ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಾಲಿವುಡ್ ಸಿನಿಮಾ ಒಲಿದು ಬಂದಿದೆಯಂತೆ. ಅದು ಸಾಮಾನ್ಯ ಸಿನಿಮಾ ಅಲ್ಲ. ಬಾಲಿವುಡ್ ಸ್ಟಾರ್ ನಟ ರಣ್‌ಬೀರ್ ಕಪೂರ್ ಸಿನಿಮಾ. ರಣ್‌ಬೀರ್ ಕಪೂರ್ ಅಭಿನಯದ ಮುಂದಿನ ಸಿನಿಮಾ 'ಅನಿಮಲ್'.

Rashmika Mandanna Likely To Act With Bollywood Hero Ranbir Kapoor In Animal Movie

'ಅನಿಮಲ್' ಚಿತ್ರದ ಹಾಡಿನಲ್ಲಿ ರಶ್ಮಿಕಾ ಮಂದಣ್ಣ, ರಣ್‌ಬೀರ್ ಜೊತೆಗೆ ಹೆಜ್ಜೆ ಹಾಕಲಿದ್ದಾರಂತೆ. ಹೌದು ಸಿನಿಮಾದಲ್ಲಿ ರಣ್‌ಬೀರ್‌ಗೆ ನಾಯಕಿಯಾಗಿ ಅಭಿನಯಿಸುತ್ತಿಲ್ಲ. ಬದಲಿಗೆ ಚಿತ್ರದ ಒಂದು ಹಾಡಿನಲ್ಲಿ ಮಾತ್ರ ಡ್ಯಾನ್ಸ್ ಮಾಡಲಿದ್ದಾರಂತೆ. ಆದರೂ ಕೂಡ ರಣ್‌ಬೀರ್ ಜೊತೆಗೆ ತೆರೆ ಹಂಚಿಕೊಳ್ಳುವ ಘಳಿಗೆ ಆದಷ್ಟು ಬೇಗ ರಶ್ಮಿಕಾಗೆ ಒಲಿದು ಬಂದಿದೆ.

ರಣ್‌ಬೀರ್ ಕಪೂರ್ ಅಭಿನಯದ ಈ ಚಿತ್ರಕ್ಕೆ 'ಅರ್ಜುನ್ ರೆಡ್ಡಿ' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 'ಅನಿಮಲ್' ಎನ್ನುವ ಚಿತ್ರದ ಟೈಟಲ್ ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿದೆ. 'ಅನಿಮಲ್' ಸಿನಿಮಾ ಬಗ್ಗೆ ಬಾಲಿವುಡ್‌ನಲ್ಲಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ರಣ್‌ಬೀರ್ ಕಪೂರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಕಾಂಬಿನೇಷನ್. ಜೊತೆಗೆ ಈ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎನ್ನುವ ಕುತೂಹಲವೂ ಮೂಡಿದೆ.

ರಶ್ಮಿಕಾ ಅಭಿನಯದ 'ಆಡವಾಳ್ಳ ಮೀಕು ಜೋಹರ್ಲು' ಚಿತ್ರ ಇತ್ತೀಚೆಗೆ ತೆರೆಕಂಡಿದೆ. ಇನ್ನು ರಶ್ಮಿಕಾ ಮಂದಣ್ಣ ಅಭಿನಯದ ಮುಂದಿನ ಚಿತ್ರ ಪುಷ್ಪ 2.

More from Filmibeat

English summary
Rashmika Mandanna Likely To Act With Bollywood Hero Ranbir Kapoor In Animal Movie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X