ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾದ ರಶ್ಮಿಕಾ ಮಂದಣ್ಣ.!

Recommended Video

ರಶ್ಮಿಕಾ ಮಂದಣ್ಣರ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ರಾ? | FILMIBEAT KANNADA

'ಚಮಕ್' ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ತೆರೆಕಂಡಿಲ್ಲ. ಆದ್ರೆ, ತೆಲುಗಿನಲ್ಲಿ ಮೂರು ಹಿಟ್ ಸಿನಿಮಾಗಳು ಬಿಡುಗಡೆಯಾಗಿದೆ. ಹಾಗಾಗಿ, ರಶ್ಮಿಕಾ ಅವರು ಕನ್ನಡದಿಂದ ಆಲ್ ಮೋಸ್ಟ್ ದೂರವಾಗ್ತಿದ್ದಾರೆ ಎಂಬ ಮಾತುಗಳೇ ಕೇಳಿಬರ್ತಿತ್ತು.

ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ, ಮುಂದಿನ ಕನ್ನಡ ಸಿನಿಮಾ ಯಾವುದು ಎಂಬ ಕುತೂಹಲ ಕಾಡುತ್ತಿತ್ತು. ಯಾವುದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಕಾಣಿಸಿಕೊಂಡರು, ನಿಮ್ಮ ಮುಂದಿನ ಕನ್ನಡ ಸಿನಿಮಾ ಯಾವುದು ಅಂತ ಕೇಳ್ತಿದ್ರು.

ಇತ್ತೀಚಿಗಷ್ಟೆ ಜಯನಗರದ ಮಾಲ್ ಉದ್ಘಾಟನೆಗೆ ಬಂದಿದ್ದ ರಶ್ಮಿಕಾಗೆ ಅಲ್ಲಿ ಮಾಧ್ಯಮದವರು ನಿಮ್ಮ ಮುಂದಿನ ಕನ್ನ ಸಿನಿಮಾ ಯಾವುದು ಎಂದಾಗ 'ಒಂದು ಸೂಪರ್ ಆಗಿರೋ ಸಿನಿಮಾ ಬರ್ತಿದೆ. ಅದನ್ನ ನಾನು ಹೇಳಲ್ಲ, ಪ್ರೊಡಕ್ಷನ್ ಹೌಸ್ ಅವರೇ ಹೇಳಲಿ' ಎಂದಿದ್ದರು. ಇದೀಗ, ಆ ಚಿತ್ರ ಯಾವುದು ಎಂದು ಬಹಿರಂಗವಾಗಿದೆ. ಮುಂದೆ ಓದಿ....

ಧ್ರುವ ಸಿನಿಮಾದಲ್ಲಿ ರಶ್ಮಿಕಾ.!

ಧ್ರುವ ಸಿನಿಮಾದಲ್ಲಿ ರಶ್ಮಿಕಾ.!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ಆದ್ರೆ, ಇದನ್ನ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಲ್ಲ. ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ರಶ್ಮಿಕಾ ಹೇಳಿದ್ದ ಸೂಪರ್ ಆಗಿರೋ ಸಿನಿಮಾ ಇದೆನಾ ಅಥವಾ ಇದನ್ನ ಬಿಟ್ಟು ಇನ್ನೊಂದು ಇದೆಯಾ ಗೊತ್ತಿಲ್ಲ.

ಎರಡನೇ ಶೆಡ್ಯೂಲ್ ಗೆ 'ಕಿರಿಕ್' ಹುಡುಗಿ.!

ಎರಡನೇ ಶೆಡ್ಯೂಲ್ ಗೆ 'ಕಿರಿಕ್' ಹುಡುಗಿ.!

ಈಗಾಗಲೇ 'ಪೊಗರು' ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದೆ. ವಿಭಿನ್ನ ಶೇಡ್ ನಲ್ಲಿ ಧ್ರುವ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಶಾಲೆಯ ಹುಡುಗನ ಲುಕ್ ನ ಶೂಟಿಂಗ್ ಮುಗಿದಿದೆ. ನವೆಂಬರ್ 20 ರಿಂದ ಎರಡನೇ ಶೆಡ್ಯೂಲ್ ಆರಂಭವಾಗುತ್ತಿದ್ದು, ಅಂದಿನಿಂದ ರಶ್ಮಿಕಾ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಅರ್ಜುನ್ ಸರ್ಜಾ ಕಥೆ

ಅರ್ಜುನ್ ಸರ್ಜಾ ಕಥೆ

ಅಂದ್ಹಾಗೆ, ನಂದಕಿಶೋರ್ ನಿರ್ದೇಶನ ಮಾಡ್ತಿರುವ ಈ ಚಿತ್ರಕ್ಕೆ ಕಥೆ ಬರೆದಿರುವುದು ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ. ಇಲ್ಲಿಯವರೆಗೂ ಹೀರೋಯಿನ್ ಯಾರು ಎಂಬುದನ್ನ ನಿರ್ಧರಿಸಿರಲಿಲ್ಲ. ಈಗ ಅಂತಿಮವಾಗಿ ರಶ್ಮಿಕಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ.

ಮೊದಲ ಸಲ...

ಮೊದಲ ಸಲ...

ರಶ್ಮಿಕಾ ಮಂದಣ್ಣ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಮೊದಲ ಸಲ. ಹೀಗಾಗಿ, ಸಹಜವಾಗಿ ಈ ಚಿತ್ರದ ಮೇಲೆ ಈಗ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ, ಧ್ರುವ ಮೂರು ಹಿಟ್ ಸಿನಿಮಾ ನೀಡಿ ತಮ್ಮದೇ ಟ್ರೆಂಡ್ ಸೃಷ್ಟಿಸಿಕೊಂಡಿದ್ದಾರೆ. ಅದೇ ರೀತಿ ರಶ್ಮಿಕಾ ಕೂಡ ಕನ್ನಡದಲ್ಲಿ ಮೂರು ಹಿಟ್ ಹಾಗೂ ತೆಲುಗಿನಲ್ಲಿ ಮೂರು ಹಿಟ್ ಸಿನಿಮಾ ನೀಡಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Rashmika Mandanna, who became an overnight sensation in sandalwood and tollywood, has been finalised for Dhruva Sarja-starrer Pogaru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X