ರಶ್ಮಿಕಾಗೆ ಬಂಪರ್ ಲಾಟ್ರಿ: ಒಲಿದು ಬಂತು ಸ್ಟಾರ್ ನಟನ ಚಿತ್ರ!
ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾತನಾಡ ಬೇಕು ಅಂದರೆ. ಅವರು ಒಬ್ಬ ಲಕ್ಕಿ ಚಾರ್ಮ್ ಎಂದೇ ಹೇಳಬೇಕು. ಯಾಕೆಂದರೆ ನಟಿ ರಶ್ಮಿಕಾ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದೇ ಮಾಡಿದ್ದು, ಆಕೆ ಮುಟ್ಟಿದ್ದೆಲ್ಲವೂ ಚಿನ್ನ ಆಗ್ತಿದೆ. ಸದ್ಯಕ್ಕೆ ಕನ್ನಡದಿಂದ ಅಂತರ ಕಾಯ್ದುಕೊಂಡ ನಟಿ ರಶ್ಮಿಕಾ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ.
ರಶ್ಮಿಕಾ ಹೊಸ ಮನೆಯನ್ನು ಖರೀದಿ ಮಾಡಿ ಸುದ್ದಿ ಆಗಿದ್ದರು, ಹೈದ್ರಾಬಾದ್‌ನಲ್ಲಿ ರಶ್ಮಿಕಾ ಹೊಸ ಮನೆ ಖರೀಸಿದ್ದ ಕಾರಣ, ರಶ್ಮಿಕಾ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತು. ಅಂತೆಯೇ ಈಗ ರಶ್ಮಿಕಾ ಹೊಸದೊಂದು ಸಿನಿಮಾ ಬಗ್ಗೆ ಸುದ್ದಿ ಬಂದಿದೆ. ಇದು ರಶ್ಮಿಕಾ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಹೌದು ನಟಿ ರಶ್ಮಿಕಾ ತಮ್ಮ ಮುಂದಿನ ತೆಲುಗು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಪುಷ್ಪ 2 ಚಿತ್ರ ಮಾಡಲಿದ್ದಾರೆ. ಇದರ ನಂತರ ತೆಲುಗಿನ ಮತ್ತೊಬ್ಬ ಸ್ಟಾರ್ ನಟನೊಂದಿಗೂ ರಶ್ಮಿಕಾ ಅವರು ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಂದಿದೆ.

ರಾಮ್ ಚರಣ್ ಜೊತೆಗೆ ರಶ್ಮಿಕಾ ಹೆಸರು!
ನಟ ರಾಮ್ ಚರಣ್ ಸದ್ಯ RRR ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಆರ್ಆರ್ಆರ್ ಬಳಿಕ ರಾಮ್ ಚರಣ್ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಬಳಿಕ ರಾಮ್ ಚರಣ್ ಅವರು ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕ ಶಂಕರ್ ಜೊತೆಗೆ ಆರಂಭಿಸಲಿದ್ದಾರೆ. ನಂತರ 16ನೇ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ರಾಮ್ ಚರಣ್‌ಗೆ ನಾಯಕಿ ಆಗಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ದಿಶಾ ಪಟಾನಿ ಜಾಗಕ್ಕೆ ಬಂದ ರಶ್ಮಿಕಾ ಮಂದಣ್ಣ!
ರಾಮ್ ಚರಣ್ 16ನೇ ಚಿತ್ರಕ್ಕೆ ತಾತ್ಕಾಲಿಕವಾಗಿ 'RC16' ಎಂದು ಕರೆಯಾಲಾಗುತ್ತಿದೆ. ಇನ್ನೂ ಚಿತ್ರಕ್ಕೆ ಹೆರಿಟ್ಟಿಲ್ಲ. ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಯುವಿ ಕ್ರಿಯೇಷನ್ಸ್, ಎನ್‌ವಿಆರ್ ಸಿನಿಮಾ ಸಹಯೋಗದಲ್ಲಿ ಚಿತ್ರ ನಿರ್ಮಾಣ ಆಗಲಿದೆ. ಮೊದಲು ಈ ಚಿತ್ರದಲ್ಲಿ ದಿಶಾ ಪಟಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ 'RC16'ಕ್ಕಾಗಿ ರಾಮ್ ಚರಣ್ ಅವರ ಪ್ರೇಮಿ ಪಾತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ವಿಚಾರ ಟಾಲಿವುಡ್‌ನಲ್ಲಿ ಜೋರಾಗಿ ಹಬ್ಬಿದೆ.

ಮಹೇಶ್ ಬಾಬು, ಅಲ್ಲು ಅರ್ಜುನ್ ಬಳಿಕ ರಶ್ಮಿಕಾಗೆ ಸಿಕ್ಕಾ ರಾಮ್ ಚರಣ್!
ನಟಿ ರಶ್ಮಿಕಾ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ದರ್ಶನ್, ಪುನೀತ್ ರಾಜ್‌ಕುಮಾರ್, ಗಣೇಶ್ ಸೇರಿದಂತೆ ಹಲವು ನಟರ ಜೊತೆಗೆ ಸಿನಿಮಾ ಮಾಡಿದ್ದಾರೆ. ಕನ್ನಡದ ಬಳಿಕ ತೆಲುಗಿಗೆ ಎಂಟ್ರಿಯಾದ ರಶ್ಮಿಕಾ ಅಲ್ಲೂ ಕೂಡ ಸ್ಟಾರ್ ನಟರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ, ಮಹೇಶ್ ಬಾಬು, ಅಲ್ಲು ಅರ್ಜುನ್ ಜೊತೆಗೆ ನಟಿಸಿ ರಶ್ಮಿಕಾ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟ ರಾಮ್ ಚರಣ್ ತೇಜ ಜೊತೆಗೆ ರಶ್ಮಿಕಾ ಹೆಸರು ಕೇಳಿ ಬಂದಿದೆ. ಈ ಬಗ್ಗೆ ಸದ್ಯದಲ್ಲಿಯೇ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಹೊರ ಬರಲಿದೆ.

ಪುಷ್ಪ ಸಿನಿಮಾದ ಬಳಿಕ ಬಾಲಿವುಡ್‌ನಲ್ಲಿ ಹೆಚ್ಚಿದ ರಶ್ಮಿಕಾ ಬೇಡಿಕೆ!
ನಟಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾ ಮಾಡುವ ತನಕ ಒಂದು ರೇಂಜಿನಲ್ಲಿ ಇದ್ದರು, ಆದರೆ ಪುಷ್ಪ ಸಿನಿಮಾ ರಿಲೀಸ್ ಬಳಿಕ ಅವರ ಬೇಡಿಕೆ ದುಪ್ಪಟ್ಟಾಗಿದೆ. ಬಾಲಿವುಡ್‌ನಲ್ಲಿ ಪುಷ್ಪ ಗೆದ್ದ ಬಳಿಕ ರಶ್ಮಿಕಾಗೆ ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಾಗಿದೆ ಅಂತೆ. ಹಾಗಾಗಿಯೇ ರಶ್ಮಿಕಾ ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಹಾಗಾಗಿ ರಶ್ಮಿಕಾಳ ಹಿಂದಿ ಮತ್ತು ತೆಲುಗಿನ ಸಾಲು ಸಾಲು ಸಿನಿಮಾಗಳು ಪ್ರಕಟ ಆಗಲಿವೆ ಎನ್ನುವ ನಿರೀಕ್ಷೆ ಇದೆ.


Click it and Unblock the Notifications











