For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಜಯ್ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ?

  |

  ತಮಿಳು ನಟ ವಿಜಯ್ ಅವರ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಕಳೆದ ಎರಡು ವರ್ಷದಿಂದಲೂ ಆಗಾಗ ಸುದ್ದಿಯಾಗುತ್ತಲೇ ಇದೆ. ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಆರಂಭದಲ್ಲಿ ಈ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಬಹುದು ಎನ್ನಲಾಯ್ತು. ಆಮೇಲೆ ಮಾಳವಿಕಾ ಮೋಹನ್ ನಾಯಕಿ ಅವಕಾಶ ಪಡೆದುಕೊಂಡರು.

  ಈಗ ವಿಜಯ್ ಜೊತೆ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಚರ್ಚೆಗೆ ಬಂದಿದೆ. ವಿಜಯ್ ಅಭಿನಯಿಸಲಿರುವ 65ನೇ ಚಿತ್ರದಲ್ಲಿ ನಾಯಕಿಯಾಗಲು ಕೊಡಗಿನ ಕುವರಿಗೆ ಆಫರ್ ಮಾಡಲಾಗಿದ್ದು, ಮಾರ್ಚ್ ತಿಂಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಂದೆ ಓದಿ....

  ಮುಂಬೈ ಫಿಲಂ ಸಿಟಿಯಲ್ಲಿ ಹಿಂದಿ ಸಿನಿಮಾ ಚಿತ್ರೀಕರಣ ಆರಂಭಿಸಿದ ರಶ್ಮಿಕಾ

  ರಶ್ಮಿಕಾ ಭೇಟಿ ಮಾಡಿದ ನೆಲ್ಸನ್ ದಿಲೀಪ್ ಕುಮಾರ್

  ರಶ್ಮಿಕಾ ಭೇಟಿ ಮಾಡಿದ ನೆಲ್ಸನ್ ದಿಲೀಪ್ ಕುಮಾರ್

  ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಯಿತು. ಆದರೆ. ಕಾರಣಾಂತರಗಳಿಂದ ಅವರ ಜಾಗಕ್ಕೆ ದಿಲೀಪ್ ಎಂಟ್ರಿಯಾಗಿದೆ. ಈಗ ನಟಿ ರಶ್ಮಿಕಾ ಅವರನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಿದ ದಿಲೀಪ್ ಸಿನಿಮಾ ಬಗ್ಗೆ ಮಾತುಕತೆ ಮಾಡಿದ್ದಾರಂತೆ. ಪಕ್ಕಾ ಆಗಿದ್ದಾರಾ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ.

  ಇಬ್ಬರು ನಾಯಕಿಯರು?

  ಇಬ್ಬರು ನಾಯಕಿಯರು?

  ಅಂದ್ಹಾಗೆ, ವಿಜಯ್ 65ನೇ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ, ಈ ಕುರಿತು ಚಿತ್ರತಂಡ ಆಗಲಿ ಅಥವಾ ನಿರ್ದೇಶಕರಾಗಲಿ ಸ್ಪಷ್ಟನೆ ನೀಡಿಲ್ಲ. ಇದೊಂದು ಆಕ್ಷನ್ ಪ್ಯಾಕೇಜ್ ಆಗಿದ್ದು, ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ವಿದೇಶಗಳಲ್ಲಿ ನಡೆಯಲಿದೆ.

  ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಇನ್ನಷ್ಟು ತಡ

  ಸೌತ್ ಸ್ಟಾರ್ ವಿಲನ್?

  ಸೌತ್ ಸ್ಟಾರ್ ವಿಲನ್?

  ವಿಜಯ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ ಬರಲಿರುವ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಖಳನಾಯಕನ ಪಾತ್ರ ಮಾಡುವ ಸಾಧ್ಯತೆ ಇದೆಯಂತೆ. ಆದರೆ, ಆ ನಟ ಯಾರು ಎನ್ನುವುದು ಸದ್ಯಕ್ಕೆ ಬಹಿರಂಗವಾಗಿಲ್ಲ.

  'ಪೊಗರು' ರಿಲೀಸ್‌ನಲ್ಲಿ ರಶ್ಮಿಕಾ ಬ್ಯುಸಿ

  'ಪೊಗರು' ರಿಲೀಸ್‌ನಲ್ಲಿ ರಶ್ಮಿಕಾ ಬ್ಯುಸಿ

  ತಮಿಳು ನಟ ಕಾರ್ತಿ ಜೊತೆ 'ಸುಲ್ತಾನ್' ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದು ರಶ್ಮಿಕಾಗೆ ಮೊದಲ ತಮಿಳು ಸಿನಿಮಾ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಾರ್ವಾನಂದ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಟನೆ 'ಮಿಷನ್ ಮಜ್ನು' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆ ಜೊತೆ ನಟಿಸಿರುವ 'ಪೊಗರು' ಸಿನಿಮಾ ಬಿಡುಗಡೆಯಾಗುತ್ತಿದೆ.

  English summary
  Kannada actress Rashmika Mandanna Playing Female Lead In Vijay and Nelson Dilipkumar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X