ಮಹೇಶ್ ಬಾಬುಗಾಗಿ ಹಿಂದಿ ಸಿನಿಮಾ ರಿಜೆಕ್ಟ್ ಮಾಡಿದ್ರಾ ರಶ್ಮಿಕಾ?

Recommended Video

ರಶ್ಮಿಕಾ ಮಂದಣ್ಣ ಸಂಜಯ್ ಲೀಲಾ ಬನ್ಸಾಲಿ ಆಫರ್ ಬೇಡ ಅಂದಿದ್ಯಾಕೆ? | FILMIBEAT KANNADA

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ತೆಲುಗು ಚಿತ್ರಪ್ರಿಯರ ನೆಚ್ಚಿನ ನಟಿಯಾಗಿರುವ ರಶ್ಮಿಕಾ ಹೆಸರು ತೆಲುಗಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಕೇಳಿ ಬರುತ್ತಿದೆ. ಸದ್ಯ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ಬ್ಯುಸಿ ಇರುವ ರಶ್ಮಿಕಾ ಬಾಲಿವುಡ್ ಕಡೆ ಪಯಣ ಬೆಳೆಸಲಿದ್ದಾರೆ ಎನ್ನುವು ಮಾತು ಅನೇಕ ದಿನಗಳಿಂದ ಕೇಳಿಬರುತ್ತಿದೆ.

ರಶ್ಮಿಕಾ ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಆದ್ರೆ ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ಸಂಜಯ್ ಲೀಲಾ ಬನ್ಸಾಲಿ ಆಗಲಿ ಎಲ್ಲೂ ಹೇಳಿಕೊಂಡಿಲ್ಲ.

ಆದ್ರೆ ಚಿತ್ರಂಗದಲ್ಲಿ ರಶ್ಮಿಕಾ ಬೆಳೆಯುತ್ತಿರುವ ರೀತಿ ನೋಡಿ ರಶ್ಮಿಕಾ ಪಕ್ಕಾ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದ್ರಲ್ಲಿ ಯಾವುದೆ ಅನುಮಾನವಿಲ್ಲ ಎಂದೇ ಹೇಳಲಾಗುತ್ತಿತ್ತು. ಆದ್ರೆ ಸಧ್ಯದ ಮಾಹಿತಿ ಪ್ರಕಾರ ರಶ್ಮಿಕಾ ಸಂಜಯ್ ಲೀಲಾ ಬನ್ಸಾಲಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ. ಸ್ಟಾರ್ ನಿರ್ದೇಶಕನ ಸಿನಿಮಾ ರಿಜೆಕ್ಟ್ ಮಾಡಲು ಕಾರಣವೇನು? ಮುಂದೆ ಓದಿ..

ರಣದೀಪ್ ಹೂಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

ರಣದೀಪ್ ಹೂಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದು ಅನೇಕ ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ರಣದೀಪ್ ಹೂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾಗೆ ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರಿಗೆ ಆಫರ್ ಮಾಡಲಾಗಿತ್ತಂತೆ. ಆದ್ರೀಗ ಕಿರಿಕ್ ಬೆಡಗಿ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.

ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ

ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ

ಬಾಲಿವುಡ್ ನ ದೊಡ್ಡ ನಿರ್ದೇಶಕ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಕೈ ಬಿಟ್ಟಿದ್ದಾರೆ ಎನ್ನುವ ವಿಚಾರ ಅಚ್ಚರಿ ಅನಿಸಿದ್ರು ಇದು ಸತ್ಯ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಇದಕ್ಕೆ ಕಾರಣ ಮಹೇಶ್ ಬಾಬು ಸಿನಿಮಾದ ಆಫರ್ ಎನ್ನುತ್ತಿವೆ ಮೂಲಗಳು. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನುವ ಸುದ್ದಿ ದಟ್ಟವಾಗಿ ಕೇಳಿ ಬರುತ್ತಿದೆ. ಹಾಗಾಗಿ ಬಾಲಿವುಡ್ ಸಿನಿಮಾವನ್ನು ಕೈಬಿಟ್ಟಿದ್ದಾರಂತೆ.

ಬನ್ಸಾಲಿ ಸಿನಿಮಾದ ಪಾತ್ರಕ್ಕೆ ಹೆಚ್ಚು ಮಾನ್ಯತೆ ಇಲ್ಲ

ಬನ್ಸಾಲಿ ಸಿನಿಮಾದ ಪಾತ್ರಕ್ಕೆ ಹೆಚ್ಚು ಮಾನ್ಯತೆ ಇಲ್ಲ

ಬಾಲಿವುಡ್ ಕಡೆಯಿಂದ ರಶ್ಮಿಕಾಗೆ ಬಂದಿರುವ ಸಿನಿಮಾ ಪಾತ್ರಕ್ಕೆ ಹೆಚ್ಚು ಮಾನ್ಯತೆ ಇಲ್ಲವಂತೆ. ಅಲ್ಲದೆ ರಶ್ಮಿಕಾಗೆ ಆಫರ್ ಬಂದಿರುವುದು ನಾಯಕಿ ಪಾತ್ರಕ್ಕೆ ಅಲ್ಲವಂತೆ. ಹಾಗಾಗಿ ಕಾಮ್ರೇಡ್ ಸುಂದರಿ ಇನ್ನು ಬಾಲಿವುಡ್ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ. ಅದಕ್ಕಿಂತ ದೊಡ್ಡ ಪ್ರಾಜೆಕ್ಟ್ ಟಾಲಿವುಡ್ ನಲ್ಲೇ ಸಿಕ್ಕಿರುವಾಗ ಬಾಲಿವುಡ್ ಕಡೆ ಯಾಕೆ ಪಯಣ ಎನ್ನುವ ಲೆಕ್ಕಾಚಾರ ರಶ್ಮಿಕಾ ಅವರದ್ದು ಇದ್ದರು ಇರಬಹುದು. ಮಹೇಶ್ ಬಾಬು ಜೊತೆ ತೆರೆಮೇಲೆ ಕಾಣಿಸಿಕೊಳ್ಳಬೇಕೆನ್ನುವುದು ಅದೆಷ್ಟೊ ನಟಿಯರ ಕನಸಾಗಿರುತ್ತೆ. ಅಂತಹದ್ರಲ್ಲಿ ರಶ್ಮಿಕಾಗೆ ದೊಡ್ಡ ಅವಕಾಶ ಒಲಿದು ಬಂದಿದೆ. ಹಾಗಾಗಿ ಹಿಂದಿ ಸಿನಿಮಾ ಮಾಡುವುದು ಅನುಮಾನ ಎನ್ನುತ್ತಿದೆ ಟಾಲಿವುಡ್.

ಪ್ರಿನ್ಸ್ 26ನೇ ಸಿನಿಮಾದಲ್ಲಿ ರಶ್ಮಿಕಾ

ಪ್ರಿನ್ಸ್ 26ನೇ ಸಿನಿಮಾದಲ್ಲಿ ರಶ್ಮಿಕಾ

ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ 'ಮಹರ್ಷಿ' ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ಸಮಯದಲ್ಲಿ ಪ್ರಿನ್ಸ್ 26ನೇ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ 26ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎಂದು ಈಗಾಗಲೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಯಾವುದು ಅಧಿಕೃತವಾಗಿಲ್ಲ.

ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ

ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ

ಅಲ್ಲು ಅರ್ಜುನ್ ಅಭಿನಯದ 'ಎಎ20' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಕನ್ನಡತಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ನ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಮೂಲಕ ದಿನದಿಂದ ದಿನಕ್ಕೆ ಉತ್ತುಂಗದ ಶಿಖರ ಏರುತ್ತಲೆ ಇದ್ದಾರೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಯಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಸೌತ್ ಸಿನಿ ಇಂಡಸ್ಟ್ರಿಯ ಮೋಸ್ಟ್ ಬ್ಯುಸಿಯಸ್ಟ್ ನಟಿಯಾಗಿದ್ದಾರೆ.

More from Filmibeat

English summary
Kannada actress Rashmika Mandanna rejected Bollywood famous director Sanjay Leela Bhansali film. She is busy in south film industry and rashmika not happy with her role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X