For Quick Alerts
  ALLOW NOTIFICATIONS  
  For Daily Alerts

  ಅಮಿತಾಭ್ ಬಚ್ಚನ್ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಇಷ್ಟೊಂದಾ?

  |

  ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಮಿಂಚಲು ಮುಂದಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಸದ್ಯ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಟಾಪ್‌ನಲ್ಲಿದ್ದಾರೆ. ಬಹುಶಃ ನಯನತಾರ ಬಳಿಕ ರಶ್ಮಿಕಾ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೀಗ, ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ನಟಿ ಆರಂಭದಲ್ಲಿ ಅತಿ ದೊಡ್ಡ ಸಂಭಾವನೆ ಟಾರ್ಗೆಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಸೌತ್ ಸಿನಿಮಾಗಳಿಗೆ ನಯನತಾರ ತೆಗೆದುಕೊಳ್ಳುವ ಸಂಭಾವನೆಗಿಂತ ಹೆಚ್ಚು ಬಾಲಿವುಡ್‌ನಲ್ಲಿ ರಶ್ಮಿಕಾ ಬೇಡಿಕೆಯಿಟ್ಟಿದ್ದಾರಂತೆ. ಅಷ್ಟಕ್ಕೂ, ಅಮಿತಾಭ್ ಬಚ್ಚನ್ ಚಿತ್ರದಲ್ಲಿ ರಶ್ಮಿಕಾ ಸಂಭಾವನೆ ಎಷ್ಟು?

  ಅಮಿತಾಭ್ ಮಗಳ ಪಾತ್ರದಲ್ಲಿ ರಶ್ಮಿಕಾ

  ಅಮಿತಾಭ್ ಮಗಳ ಪಾತ್ರದಲ್ಲಿ ರಶ್ಮಿಕಾ

  ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ ನಟಿಸುತ್ತಿರುವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ಬಿಗ್‌ಬಿ ಮಗಳಾಗಿ ಮಂದಣ್ಣ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೂ ಹೆಚ್ಚು ಚರ್ಚೆಯಲ್ಲಿದೆ.

  ಅಮಿತಾಬ್ ಬಚ್ಚನ್ ಮಗಳಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣಅಮಿತಾಬ್ ಬಚ್ಚನ್ ಮಗಳಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ

  ರಶ್ಮಿಕಾ ಸಂಭಾವನೆ ಎಷ್ಟು?

  ರಶ್ಮಿಕಾ ಸಂಭಾವನೆ ಎಷ್ಟು?

  ಸೌತ್ ಚೆಲುವೆ ರಶ್ಮಿಕಾ ಮಂದಣ್ಣ ಈ ಕಥೆ ಕೇಳಿ ಇಷ್ಟ ಪಟ್ಟಿದ್ದಾರಂತೆ. ಬಾಲಿವುಡ್ ಸ್ಟಾರ್ ನಟಿಯರ ಅಲಭ್ಯತೆ ಹಿನ್ನೆಲೆ ರಶ್ಮಿಕಾ ಈ ಅವಕಾಶ ಪಡೆದುಕೊಂಡಿದ್ದು, ಈ ಪ್ರಾಜೆಕ್ಟ್‌ಗಾಗಿ 5-6 ಕೋಟಿ ಸಂಭಾವನೆ ಚರ್ಚೆಯಾಗಿದೆಯಂತೆ. ನಯನತಾರ ಒಂದು ಸಿನಿಮಾಗೆ ಗರಿಷ್ಠ 5 ಕೋಟಿವರೆಗೂ ಚಾರ್ಜ್ ಮಾಡ್ತಾರೆ. ನಿರ್ಮಾಪಕರು ಸಹ ರಶ್ಮಿಕಾ ಕೇಳಿದ ಹಣವನ್ನು ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

  ಕತ್ರಿನಾ-ಕೃತಿ ಸನೂನ್ ಬ್ಯುಸಿ

  ಕತ್ರಿನಾ-ಕೃತಿ ಸನೂನ್ ಬ್ಯುಸಿ

  ವಿಕಾಸ್ ಬಾಹ್ಲ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಅಮಿತಾಭ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಚಿತ್ರದ ನಾಯಕಿ ಪಾತ್ರಕ್ಕಾಗಿ ಕತ್ರಿನಾ ಕೈಫ್ ಅವರನ್ನು ಅಪ್ರೋಚ್ ಮಾಡಲಾಗಿದೆ. ಕತ್ರಿನಾ ಬ್ಯುಸಿಯಿದ್ದ ಕಾರಣ ಕೃತಿ ಸನೂನ್‌ಗೆ ಈ ಅವಕಾಶ ಹೋಗಿದೆ. ಆದರೆ, ಕೃತಿ ಸಹ ಬ್ಯುಸಿ ಶೆಡ್ಯೂಲ್ ಇದ್ದ ಕಾರಣ ಸೌತ್ ಸುಂದರಿ ಬಾಗಿಲಿಗೆ ಈ ಆಫರ್ ಬಂದಿದೆ ಎಂದು ಹೇಳಲಾಗಿದೆ.

  ಬಿಟೌನ್‌ಗೆ ಹಾರಿದ ರಶ್ಮಿಕಾ ಮಂದಣ್ಣ: ಸಿದ್ಧಾರ್ಥ್ ಮಲ್ಹೋತ್ರ ಹೇಳಿದ್ದೇನು?ಬಿಟೌನ್‌ಗೆ ಹಾರಿದ ರಶ್ಮಿಕಾ ಮಂದಣ್ಣ: ಸಿದ್ಧಾರ್ಥ್ ಮಲ್ಹೋತ್ರ ಹೇಳಿದ್ದೇನು?

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  ಮಿಷನ್ ಮಜ್ನು ಚೊಚ್ಚಲ ಸಿನಿಮಾ

  ಮಿಷನ್ ಮಜ್ನು ಚೊಚ್ಚಲ ಸಿನಿಮಾ

  ಅಂದ್ಹಾಗೆ, ವಿಕಾಸ್ ಬಾಹ್ಲ್ ಪ್ರಾಜೆಕ್ಟ್‌ಗೂ ಮೊದಲು ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ರಶ್ಮಿಕಾ ಅವರ ಚೊಚ್ಚಲ ಸಿನಿಮಾ. ಸಿದ್ಧಾರ್ಥ್ ಮಲ್ಹೋತ್ರಾ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ.

  English summary
  Kannada actress Rashmika mandanna charge huge remuneration for her bollywood movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion