'ಪುಷ್ಪ' ಗೆಲುವು, ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ: ಈಗೆಷ್ಟು?

'ಪುಷ್ಪ' ಸಿನಿಮಾ ಭಾರಿ ವಿಜಯ ಸಾಧಿಸಿದೆ. ಕೇವಲ 20 ದಿನಗಳಲ್ಲಿ ಸಿನಿಮಾ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಒಟಿಟಿಯಲ್ಲಿಯೂ ಭಾರಿ ಕಮಾಲ್ ತೋರುತ್ತಿದೆ.

ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದೇ ತಡ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. 'ಪುಷ್ಪ' ಮೊದಲ ಭಾಗಕ್ಕೆ ಪಡೆದ ಸಂಭಾವನೆಗಿಂತಲೂ 50% ಹೆಚ್ಚು ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಕೇಳುತ್ತಿದ್ದಾರೆ.

'ಪುಷ್ಪ' ಸಿನಿಮಾದ ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಪಡೆದಿದ್ದರಂತೆ, ಆದರೆ ಎರಡನೇ ಭಾಗಕ್ಕೆ 3 ಕೋಟಿ ಸಂಭಾವನೆಗೆ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳಲು 'ಪುಷ್ಪ' ಗೆಲುವು ಮಾತ್ರವೇ ಅಲ್ಲ ಇನ್ನೂ ಹಲವು ಅಂಶಗಳನ್ನು ಪರಿಗಣಿಸಿದ್ದಾರೆ ಈ ನಟಿ.

Rashmika Mandanna Rised Her Remuneration After Pushpa Movie Sucesses

ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ಹಲವು ಹಿಟ್ ನೀಡಿದ ನಟಿಯರಲ್ಲಿ ಒಬ್ಬರು. 'ಗೀತ ಗೋವಿಂದಂ', 'ಸರಿಲೇರು ನೀಕೆವ್ವರು', 'ಭೀಷ್ಮ', ತಮಿಳಿನ 'ಸುಲ್ತಾನ್' ಸಾಧಾರಣ ಹಿಟ್ ಆದ 'ಡಿಯರ್ ಕಾಮ್ರೆಡ್' ಇದೀಗ 'ಪುಷ್ಪ' ರಶ್ಮಿಕಾ ನಟನೆಯ ಈ ತೆಲುಗು ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ಕನ್ನಡದಲ್ಲಿ ಐದು ಸಿನಿಮಾಗಳಲ್ಲಿ ನಟಿಸಿದ್ದು ಅವುಗಳು ಸಹ ಹಿಟ್ ಆಗಿವೆ.

ಇತ್ತೀಚೆಗೆ ರಶ್ಮಿಕಾಗೆ ಬೇಡಿಕೆ ಸಹ ಹೆಚ್ಚಿದೆ. ಅವರೀಗ ಕೇವಲ ದಕ್ಷಿಣ ಭಾರತ ಸಿನಿಮಾಗಳ ನಟಿಯಲ್ಲ ಬಾಲಿವುಡ್ ಅನ್ನು ಸಹ ಮುಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಒಟ್ಟೊಟ್ಟಿಗೆ ಎರಡು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕ ನಟನಾಗಿರುವ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ರಶ್ಮಿಕಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ನಟಿ ಪೂಜಾ ಹೆಗ್ಡೆ ಅತಿ ಹೆಚ್ಚು ದುಬಾರಿ ನಟಿ ಎನ್ನಲಾಗುತ್ತದೆ. ಪೂಜಾ ಹೆಗ್ಡೆ ಸಿನಿಮಾ ಒಂದಕ್ಕೆ ನಾಲ್ಕು ಕೋಟಿ ಪಡೆಯುತ್ತಾರೆ. ತೆಲುಗಿನಲ್ಲಿಯೇ ಕೆಲವು ನಟರು ಸಹ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವುದಿಲ್ಲ. ಪೂಜಾ ಹೆಗ್ಡೆಯ ಯಶಸ್ಸಿನ ಸರಾಸರಿ ಇತರ ಎಲ್ಲ ನಟಿಯರಿಗಿಂತಲೂ ಹೆಚ್ಚಿದೆ. ಜೊತೆಗೆ ಪೂಜಾ ಹೆಗ್ಡೆ ಸಹ ಕೇವಲ ತೆಲುಗು ಚಿತ್ರರಂಗ ಮಾತ್ರವಲ್ಲ ಹಿಂದಿ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಪೂಜಾ ಬಳಿಕ ಹೆಚ್ಚು ಸಂಭಾವನೆ ಪಡೆವ ನಟಿ ಎನಿಸಿಕೊಂಡಿರುವ ಸಮಂತಾ.

More from Filmibeat

English summary
Actress Rashmika Manadanna rised her remuneration after Pushpa movie sucess. She asking for 3 crore per movie now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X