»   » ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.?

ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.?

Posted By:
Subscribe to Filmibeat Kannada
ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.? | FIlmibeat Kananda

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಇದರ ಮಧ್ಯೆ ತೆಲುಗಿನ ಬಿಗ್ ಸಿನಿಮಾಗಳಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ಈಗ ಹೊರಬಿದ್ದಿರುವ ಮಾಹಿತಿ ಏನಪ್ಪಾ ಅಂದ್ರೆ, ರಶ್ಮಿಕಾ ತಮ್ಮ ಹೊಸ ಚಿತ್ರದಲ್ಲಿ ಕ್ರೀಡಾಪಟು ಪಾತ್ರವನ್ನ ನಿರ್ವಹಿಸುತ್ತಿದ್ದಾರಂತೆ. ಹೌದು, ತೆಲುಗಿನ ಸ್ಟಾರ್ ನಟ ವಿಜಯ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ಈ ಚಿತ್ರದಲ್ಲಿ ಕ್ರೀಡಾಪಟು ಆಗಿ ಕಾಣಿಸಿಕೊಳ್ಳಲಿದ್ದಾರೆ.

ರಾಜಮೌಳಿ ಕಣ್ಣು ಕನ್ನಡದ ರಶ್ಮಿಕಾ ಮೇಲೆ ಬಿತ್ತು.?

ನಾಗಶೌರ್ಯ ಅಭಿನಯದ 'ಚಲೋ' ಚಿತ್ರದ ನಂತರ ರಶ್ಮಿಕಾ ತೆಲುಗಿನಲ್ಲಿ ಎರಡು ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದರು. ಆ ಎರಡು ಚಿತ್ರಗಳಿಗೆ ವಿಜಯ ದೇವರಕೊಂಡ ಅವರೇ ನಾಯಕರಾಗಿದ್ದಾರೆ. ಇದರಲ್ಲಿ ಒಂದು ಚಿತ್ರವನ್ನ 'ಪರಶುರಾಮ' ನಿರ್ದೇಶನ ಮಾಡಿದ್ರೆ, ಇನ್ನೊಂದು ಚಿತ್ರಕ್ಕೆ ಭರತ್ ಕಾಮ್ನಾ ಆಕ್ಷನ್ ಕಟ್ ಹೇಳ್ತಿದ್ದಾರೆ.

Rashmika Mandanna Role In Vijay Devarakonda Movie

ಈಗ ಭರತ್ ಕಾಮ್ನಾ ನಿರ್ದೇಶನದ ಸಿನಿಮಾ ಆರಂಭವಾಗಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಕ್ರೀಡಾಪಟು ಆಗಲಿದ್ದಾರೆ. ಅಂದ್ಹಾಗೆ, ಈ ಸಿನಿಮಾ ಕ್ರೀಡೆ ಆಧರಿತ ಕಥೆ ಹೊಂದಿದೆಯಾ ಅಥವಾ ರಶ್ಮಿಕಾ ಯಾವ ಆಟದ ಕ್ರೀಡಾ ಪಟು ಆಗಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ರಶ್ಮಿಕಾ ಪಾತ್ರ ಮಾತ್ರ ಪಕ್ಕಾ ಆಗಿದೆಯಂತೆ.

ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ 'ಚಮಕ್' ಚಲುವೆ

ಸದ್ಯ, ವಿಜಯ ದೇವರಕೊಂಡ ತಮಿಳಿನ ಒಂದು ಸಿನಿಮಾ ಮಾಡುತ್ತಿದ್ದಾರೆ. 'ಅರ್ಜುನ್ ರೆಡ್ಡಿ' ಚಿತ್ರದ ಸೂಪರ್ ಸಕ್ಸಸ್ ನಂತರ ತಮಿಳಿನಲ್ಲಿ ಅಭಿನಯಿಸಲು ಅವಕಾಶ ಬಂದಿತ್ತು. ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದು, ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ತೆರೆಕಾಣಲಿದೆ. ಈ ಚಿತ್ರದ ಜೊತೆಯಲ್ಲಿ ಭ್ರತ್ ಕಾಮ್ನಾ ನಿರ್ದೇಶನದ ಸಿನಿಮಾ ಆರಂಭಿಸಿಲಿದ್ದಾರೆ.

English summary
Kirik Party fame Rashmika Mandanna, who forayed into acting via Kannada industry, is on a roll in Telugu cinema. She plays a sportswoman in Bharat Kamma’s film which also stars Vijay Deverakonda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X