ರಶ್ಮಿಕಾಗೆ ಮೊದಲ ಸೋಲಿನ ರುಚಿ ತೋರಿಸಿದ 'ಆಡವಾಳ್ಳು ಮೀಕು ಜೋಹಾರ್ಲು'!

ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್. ಸ್ಯಾಂಡ್‌ವುಡ್ ಬಳಿಕ ಈಗ ಟಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ತುಂಬಾನೆ ಬ್ಯುಸಿಯಾಗಿರವ ನಟಿ. ಸ್ಟಾರ್​ ನಟರ ಜೊತೆ ನಟಿಸುವ ಮೂಲಕ ದೊಡ್ಡ ಮಟ್ಟದ ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ದಕ್ಷಿಣದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅದೃಷ್ಟವಂತ ನಟಿ ಎಂದು ಕರೆಸಿಕೊಳ್ಳುತ್ತಿದ್ದಾರೆ.

Recommended Video

ದಕ್ಷಿಣ ಭಾರತದ ನಟಿ ಅಂತ ಕರೆಸಿಕೊಳ್ಳಲು ಇಷ್ಟವಿಲ್ಲ.

ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಈ ನಡುವೆ ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆಗೆ ನಟಿಸಿರುವ 'ಪುಷ್ಪ' ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೂಲಕ ರಶ್ಮಿಕಾ ಪ್ಯಾನ್ ಇಂಡಿಯಾ ಹೀರೋಯಿನ್ ಎನಿಸಿಕೊಂಡಿದ್ದಾರೆ. ಪುಷ್ಪ ‌ಚಿತ್ರದ ಬಳಿಕಾ ರಶ್ಮಿಕಾಗೆ ಇದ್ದ ಮತ್ತಷ್ಟು ಜನಪ್ರಿಯತೆ ಹೆಚ್ಚಾಗಿದೆ. ಹಾಗಾಗಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ.

ಸಾಲು ಸಾಲು ನಿರ್ಮಾಪಕರು ರಶ್ಮಿಕಾ ಡೇಟ್ಸ್​ಗಾಗಿ ಕಾಯುತ್ತಿದ್ದಾರೆ. ಆದರೆ ಅದ್ಯಾಕೋ ಸದ್ಯ ರಶ್ಮಿಕಾಗೆ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ. ಲಕ್ಕಿ ಗರ್ಲ್ ಹೊಸ ಸಿನಿಮಾ ಲಕ್ ಇಲ್ಲದೆ ಮಕಾಡೆ ಮಲಗುವ ಸ್ಥಿತಿ ಬಂದೊದಗಿದೆ. ಇದು ರಶ್ಮಿಕಾ ಮಂದಣ್ಣ ಸೋಲು ಎಂದೇ ಹೇಳಬಹುದು.

Rashmika Mandannas First Movie To Flop At Boxoffice Collection

ರಶ್ಮಿಕಾ ಮಂದಣ್ಣ ಜೊತೆಗೆ ನಟ ಶರ್ವಾನಂದ್ ಅಭಿನಯದ 'ಆಡವಾಳ್ಳು ಮೀಕು ಜೋಹಾರ್ಲು' ಎನ್ನುವ ಹೊಸ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿದ ಮಂದಿ ರಶ್ಮಿಕಾ ಈ ಸಿನಿಮಾ ಮಾಡಲೇಬಾರದಿತ್ತು ಎನ್ನುವ ಮಾತನ್ನು ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಂಡಿರಲಿಲ್ಲ. ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರಿಗೆ ಸೋಲಿನ ರುಚಿ ತೋರಿಸಿದೆ ಎಂದು ಟಾಲಿವುಡ್ ನಲ್ಲಿ ಗುಸು, ಗುಸು ಹಬ್ಬಿದೆ.

ಕಲೆಕ್ಷನ್​ ಇಲ್ಲದೆ ಬಾಕ್ಸಾಫೀಸ್ ಖಾಲಿ, ಖಾಲಿ!

ಮಾರ್ಚ್ 04 ರಂದು 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ರಿಲೀಸ್ ಆಗಿದೆ. ಆದರೆ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ನಿರೀಕ್ಷೆಯ ಮಟ್ಟಕ್ಕೆ ಕಲೆಕ್ಷನ್ ಮಾಡೋದ್ರಲ್ಲಿ ಸಿನಿಮಾ ಸೋತಿದೆ. ಮೊದಲ ದಿನದ ಕಲೆಕ್ಷನ್ ಹೇಳಿಕೊಳ್ಳುವಂತಿಲ್ಲ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು ರುಚಿಯನ್ನು ತೋರಿಸಲಿದೆ. ಇನ್ನೂ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ಸಾಧ್ಯವೇ ಎನ್ನಲಾಗುತ್ತಿದೆ.

ರಶ್ಮಿಕಾ, ಶರ್ವಾನಂದ್, ಖುಷ್ಬು ಈ ಸಿನಿಮಾದಲ್ಲಿ ನಟಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿದೆ. ಈ ಸಿನಿಮಾ ಮೊದಲ ದಿನ ಕೇವಲ 3.60 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ನಿರ್ಮಾಪಕ ಕೈ ಸೇರಿದ್ದು ಕೇವಲ 1.92 ಕೋಟಿ ರೂಪಾಯಿಯಂತೆ. ಬಳಿಕ ಚಿತ್ರ ತೆರೆಕಂಡ ವಾರಾಂತ್ಯದಲ್ಲೂ ಕೂಡ ಅಂತಹ ದೊಡ್ಡ ಮಟ್ಟಿನ ಕಲೆಕ್ಷನ್ ಏನೂ ಮಾಡಿಲ್ಲ. ಹಾಗಾಗಿ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋತಹಾಗೆ ಎನ್ನಲಾಗುತ್ತಿದೆ.

More from Filmibeat

English summary
Rashmika Mandanna's First Movie To Flop At Boxoffice Collection, That Is Aadavallu Meeku Joharulu,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X