3 ಲಕ್ಷ ಕೊಟ್ಟರೆ ರಶ್ಮಿಕಾ ಮಂದಣ್ಣ ಚಿನ್ನದ ಡ್ರೆಸ್ ನಿಮ್ಮದಾಗುತ್ತದೆ!
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ, ಮೊದಲಿನಿಂದಲೂ ಕೂಡ ಸಿಕ್ಕಾಪಟ್ಟೆ ಸ್ಟೈಲಿಶ್. ರಶ್ಮಿಕಾ ಮಂದಣ್ಣ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಲುಕ್‌ನೊಂದಿಗೆ ಸದಾ ಮಿಂಚುತ್ತಾ ಇರುತ್ತಾರೆ. ರಶ್ಮಿಕಾ ಅವರು ಯಾವಾಗ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಕೂಡ ವಿಶೇಷವಾಗಿ ತಮ್ಮ ಸ್ಟೈಲ್‌ನಿಂದ ಗಮನ ಸೆಳೆಯುತ್ತಾರೆ.
ಕುರ್ತಾಗಳು ಮತ್ತು ಡ್ರೆಸ್‌ಗಳಿಂದ ಹಿಡಿದು ಸೀರೆಗಳು ಮತ್ತು ಲೆಹೆಂಗಾಗಳವರೆಗೆ, ರಶ್ಮಿಕಾ ಅವರು ಫ್ಯಾಷನ್‌ನ್ ಲೋಕದಲ್ಲಿ ಎಲ್ಲಾ ರೀತಿಯ ಉಡುಪುಗಳು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಒಂದೇ ರೀತಿಯಾಗಿ ಡ್ರೆಸ್ ಮಾಡಿಕೊಳ್ಳುವುದಿಲ್ಲ. ವಿಭಿನ್ನ ಶೈಲಿಗಳೊಂದಿಗೆ ಪ್ರಯೋಗ ಮಾಡುತ್ತಿರುತ್ತಾರೆ. ರಶ್ಮಿಕಾಳ ಫ್ಯಾಷನ್‌ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ರಶ್ಮಿಕಾ ಸ್ಟೈಲ್ ಎಷ್ಟೂ ಅಂದವಾಗಿ ಇರುತ್ತೋ, ಅಷ್ಟೇ ದುಬಾರಿ ಕೂಡ ಹೌದು. ಇತ್ತೀಚೆಗೆ ಈಕೆ ತೊಟ್ಟಿದ್ದ ನೇರಳೆ ಬಣ್ಣದ ಲೆಹೆಂಗಾ ಹೆಚ್ಚು ಸದ್ದು ಮಾಡಿತ್ತು. 'ಪುಷ್ಪ' ಚಿತ್ರದ ಪ್ರಚಾರಕ್ಕಾಗಿ ರಶ್ಮಿಕಾ ಈ ಲೆಹೆಂಗಾ ತೊಟ್ಟಿದ್ದರು. ಈಗ ಇದನ್ನು ನೀವೂ ಕೂಡ ಕೊಂಡುಕೊಳ್ಳಬಹುದಾಗಿದೆ.

ಚಿನ್ನದ ಎಳೆಯಿಂದಾದ ರಶ್ಮಿಕಾ ಲೆಹೆಂಗಾ!
ರಶ್ಮಿಕಾ ಮಂದಣ್ಣ ಈ ಲೆಹೆಂಗಾವನ್ನು ಕೊಚ್ಚಿಯಲ್ಲಿ ನಡೆದ 'ಪುಷ್ಪ' ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಧರಿಸಿದ್ದರು. ನಂತರ ಫೊಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಈ ಲೆಹೆಂಗಾವನ್ನು ಬಾಲಿವುಡ್‌ನ ಖ್ಯಾತವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ್ದಾರೆ. ಇದು ರಶ್ಮಿಕಾಗೆ ಹೇಳಿ ಮಾಡಿಸಿದ ಹಾಗೆ ಇತ್ತು. ವಿಶೇಷ ಎಂದರೆ ಈ ಲೆಹೆಂಗಾದ ಮೇಲೆ ಚಿನ್ನದ ಕಸೂತಿ ಮಾಡಲಾಗಿದೆ. ಇದರೊಂದಿಗೆ 'ಆರ್ಗನ್ಜಾ' ದುಪಟ್ಟಾವನ್ನು ಮ್ಯಾಚ್ ಮಾಡಲಾಗಿದೆ.
3 ಲಕ್ಷಕ್ಕೆ ಮಾರಾಟಕ್ಕೆ ಲಭ್ಯವಿದೆ ರಶ್ಮಿಕಾ ಲೆಹೆಂಗಾ!
ರಶ್ಮಿಕಾ ಮಂದಣ್ಣ ತೊಟ್ಟಿದ್ದ ಈ ಲೆಹೆಂಗಾ ಬೆಲೆ ಲಕ್ಷಗಳಲ್ಲಿ ಇದೆ. ಈ ಲೆಹೆಂಗಾದ ಮೊತ್ತ 3.85 ಲಕ್ಷ ರೂಪಾಯಿ. ಬಟ್ಟೆಯ ಮೇಲೆ ಚಿನ್ನದ ಸಣ್ಣ ಎಳೆಯ ಕಸೂತಿ ಇದೆ. ಹಾಗಾಗಿ ಇದಕ್ಕೆ ಅಷ್ಟೊಂದು ಬೆಲೆ. ಈ ಲೆಹೆಂಗಾದ ಟಾಪ್‌ಗೆ ಡೀಪ್ ನೆಕ್ ಇರುವ ಕಾರಣಕ್ಕೆ, ರಶ್ಮಿಕಾಳನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಈ ಡ್ರೆಸ್ ನಿಮಗೂ ಲಭ್ಯವಿದೆ. ಈಗ ಇದರ ಬೆಲೆ 3 ಲಕ್ಷಕ್ಕೆ ನಿಗದಿ ಮಾಡಲಾಗಿದೆ. 3 ಲಕ್ಷ ಇದ್ದರೇ ನೀವೂ ಕೂಡ ಈ ಬಟ್ಟೆ ತೊಟ್ಟು ರಶ್ಮಿಕಾಳಂತೆ ಮಿಂಚಬಹುದು. ಮದುವೆ, ಪಾರ್ಟಿಗಳಿಗೆ ಈ ಡ್ರೆಸ್ ಸೂಟ್ ಆಗುತ್ತದೆ.
ದುಬಾರಿ ಸೀರೆ ತೊಟ್ಟು ಸುದ್ದಿ ಆಗಿದ್ದ ರಶ್ಮಿಕಾ!
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಸೀರೆ ಉಟ್ಟಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿ ರಶ್ಮಿಮಕಾಗಿಂತಲೂ ಆ ಸೀರೆ ಬಗ್ಗೆಯೇ ಹೆಚ್ಚು ಚರ್ಚೆ ಆಯ್ತು. ಸೀರೆಯಲ್ಲಿ ರಶ್ಮಿಕಾ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಸೀರೆಯ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ದುಬಾರಿ ಸೀರೆಯ ವಿಚಾರವಾಗಿ ರಶ್ಮಿಕಾ ಸುದ್ದಿ ಆಗಿದ್ದರು. ಈಗ ಪ್ರೆಸ್‌ಮೀಟ್‌ಗಾಗಿ 3 ಲಕ್ಷಕ್ಕೂ ಅಧಿಕ ಬೆಲೆಯ ಲೆಹೆಂಗಾ ತೊಟ್ಟು ಸುದ್ದಿ ಆಗಿದ್ದಾರೆ.

'ಪುಷ್ಪ' ಯಶಸ್ಸಿನ ಬಳಿಕ ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!
ಪುಷ್ಪ ಚಿತ್ರದ ಬಳಿಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೇ ಬ್ಯುಸಿ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಾಗಿ ನಟಿಸಿರುವ 'ಮಿಷನ್ ಮಜ್ನು' ಮತ್ತು 'ಗುಡ್ ಬೈ' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











