'ಡಿಯರ್ ಕಾಮ್ರೇಡ್ ಮಾಡಿದ್ದು ದೇವರಕೊಂಡಗೋಸ್ಕರ ಅಲ್ಲ': ರಶ್ಮಿಕಾ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಬಗ್ಗೆ ಹಲವು ಅಭಿಪ್ರಾಯಗಳಿವೆ. ತೆರೆಮೇಲೆ ಇವರಿಬ್ಬರ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕೌಟ್ ಆಗುತ್ತೆ. ಇವರಿಬ್ಬರ ಪೇರ್ ಅಷ್ಟೇ ಮುದ್ದಾಗಿದೆ ಎಂದು ಮೆಚ್ಚಿಕೊಂಡ ಅಭಿಮಾನಿಗಳಿದ್ದಾರೆ.
ದೇವರಕೊಂಡ ಅವರ ಜೊತೆಗಿನ ಅತಿಯಾದ ಆತ್ಮೀಯತೆಯಿಂದಲೇ ರಶ್ಮಿಕಾ ಅವರು ತಮ್ಮ ಖಾಸಗಿ ಜೀವನದಲ್ಲಿ ಕೆಲವನ್ನ ಮತ್ತು ಕೆಲವರನ್ನ ಕಳೆದುಕೊಳ್ಳಬೇಕಾಯಿತು ಎನ್ನುವವರು ಕೂಡ ಇದ್ದಾರೆ. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಾತ್ರ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕೊಡ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಈ ಹಿಂದೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ದೇವರಕೊಂಡ ಜೊತೆ ನಟಿಸಿದ್ದ ರಶ್ಮಿಕಾ, ಈ ಸಿನಿಮಾ ಮಾಡಿದ್ದೇ ದೇವರಕೊಂಡಗೋಸ್ಕರವಂತೆ.! ಈ ಬಗ್ಗೆ ರಶ್ಮಿಕಾ ಮಾತನಾಡಿದ್ದು ಅಚ್ಚರಿ ಮೂಡಿಸಿದ್ದಾರೆ. ಏನಂದ್ರು? ಮುಂದೆ ಓದಿ....

ಸಿಕ್ಕಾಪಟ್ಟೆ ಪ್ರಚಾರ.!
ಸಾಮಾನ್ಯವಾಗಿ ರಶ್ಮಿಕಾ ಮಂದಣ್ಣ ಅಭಿನಯದ ಬೇರೆ ಸಿನಿಮಾಗಳಿಗೆ ಈ ಮಟ್ಟದ ಪ್ರಚಾರ ಮಾಡಿರಲಿಲ್ಲ. ಬಹುಶಃ ಅದು ನಿರ್ದೇಶಕ, ನಿರ್ಮಾಪಕರ ತಪ್ಪು ಇರಬಹುದು. ಆದ್ರೆ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ರಶ್ಮಿಕಾ ಮಾಡುತ್ತಿರುವ ನಿಜಕ್ಕೂ ಬೆರಗಾಗಿಸಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಎಲ್ಲ ಭಾಷೆಯಲ್ಲೂ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಮಿಂಚಿನ ಪ್ರಚಾರ ಮಾಡಿದೆ.

ದೇವರಕೊಂಡ ಅವರಿಗಾಗಿ ಈ ಸಿನಿಮಾ ಮಾಡಿದ್ರಾ?
'ಗೀತಾ ಗೋವಿಂದಂ' ಅಂತಹ ಹಿಟ್ ಸಿನಿಮಾ ಮಾಡಿದ್ಮೇಲೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಬಗ್ಗೆ ವಿಶೇಷವಾದ ಒಲವು ಮೂಡಿತು. ಇವರಿಬ್ಬರ ಪೇರ್ ಸಖತ್ ಆಗಿದೆ ಎಂದು ಮಾತನಾಡಿಕೊಂಡರು. ಅದೇ ಸಮಯದಲ್ಲಿ ರಶ್ಮಿಕಾ ಎಂಗೇಜ್ ಮೆಂಟ್ ಕೂಡ ಬ್ರೇಕ್ ಅಪ್ ಆಯ್ತು. ದೇವರಕೊಂಡ ಅವರಿಂದಲೇ ಇದು ಆಗಿರಬಹುದು ಎಂಬ ಗುಸುಗುಸು ಸದ್ದು ಮಾಡಿತ್ತು. ಇದೀಗ, ದೇವರಕೊಂಡ ಅವರಿಗೋಸ್ಕರವೇ ರಶ್ಮಿಕಾ 'ಡಿಯರ್ ಕಾಮ್ರೇಡ್' ಸಿನಿಮಾ ಒಪ್ಪಿಕೊಂಡ್ರಾ ಎಂಬ ಚರ್ಚೆಯೂ ಇದೆ.

ವಿಜಯ್ ಗೆ ಅಷ್ಟೊಂದು ಸೀನಿಲ್ಲ.!
ವಿಜಯ್ ದೇವರಕೊಂಡ ಅವರಿಗಾಗಿಯೇ ಈ ಸಿನಿಮಾ ಒಪ್ಪಿಕೊಂಡ್ರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ''ವಿಜಯ್ ದೇವರಕೊಂಡಗೆ ಅಷ್ಟೊಂದು ಸೀನಿಲ್ಲ, ಅವರಿಗಾಗಿ ನಾನು ಈ ಸಿನಿಮಾ ಮಾಡಿಲ್ಲ. ನನಗೆ ಸ್ಕ್ರಿಪ್ಟ್ ಇಷ್ಟ ಆಯ್ತು. ಭರತ್ ಕಮ್ಮು ಅವರು ಕಥೆಯಿಂದ ನಾನು ಒಪ್ಪಿದೆ'' ಎಂದು ತಿಳಿಸಿದ್ದಾರೆ.

ಸಾಯಿ ಪಲ್ಲವಿ ಮಾಡಬೇಕಿತ್ತು
'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ರಶ್ಮಿಕಾ ಮಾಡಿರುವ ಪಾತ್ರವನ್ನ ಈ ಹಿಂದೆ ಸಾಯಿ ಪಲ್ಲವಿ ಮಾಡಬೇಕಿತ್ತು. ಆದ್ರೆ, ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇದ್ದ ಕಾರಣ ಈ ಪ್ರಾಜೆಕ್ಟ್ ನಿರಾಕರಿಸಿದ್ದರಂತೆ ಮೊಡವೆ ಸುಂದರಿ. ಬಳಿಕ ಈ ಚಿತ್ರಕ್ಕೆ ರಶ್ಮಿಕಾ ಅವರ ಆಯ್ಕೆ ಆಗಿದೆ. ರಶ್ಮಿಕಾ ಆಯ್ಕೆ ಹಿಂದೆ ದೇವರಕೊಂಡ ಇದ್ದಾರೆ ಎಂಬ ಮಾತು ಕೂಡ ಇದೆ. ಇದೆಲ್ಲ ಏನೇ ಇದ್ದರೂ ಒಂದೊಳ್ಳೆ ಸಿನಿಮಾ ಆಗಲಿ ಎನ್ನುವುದು ಮಾತ್ರ ಖುಷಿಯ ವಿಚಾರ.


Click it and Unblock the Notifications











