ತಮಿಳಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ: ಕಾರ್ತಿ ಜೊತೆಯಲ್ಲಿ ನಟನೆ
Recommended Video

ತಮಿಳಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ: ಕಾರ್ತಿ ಜೊತೆಯಲ್ಲಿ ನಟನೆ..! | FILMIBEAT KANNADA
ಕನ್ನಡ ಹಾಗೂ ತೆಲುಗಿನಲ್ಲಿ ಮಿಂಚುತ್ತಿರುವ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಈಗ ತಮಿಳಿನತ್ತ ಹೆಜ್ಜೆಯಿಟ್ಟಿದ್ದಾರೆ. ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಲೋ, ಗೀತಾ ಗೋವಿಂದಂ ಅಂತಹ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿರುವ ರಶ್ಮಿಕಾ ತಮಿಳು ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕಾಲಿವುಡ್ ಸ್ಟಾರ್ ಕಾರ್ತಿ ನಟಿಸಲಿರುವ ಇನ್ನು ಹೆಸರಿಡದ ಚಿತ್ರಕ್ಕೆ ರಶ್ಮಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಆಕ್ಷನ್ ಕಾಮಿಡಿ ಚಿತ್ರವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವಂತಹ ಚಿತ್ರವಾಗಲಿದೆಯಂತೆ.
ಬಾಗ್ಯರಾಜ್ ಕಣ್ಣನ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಚೆನ್ನೈ, ಹೈದ್ರಾಬಾದ್ ನ ಸುತ್ತಾಮುತ್ತ ಚಿತ್ರೀಕರಣ ಮಾಡುವ ನಿರ್ಧಾರ ಮಾಡಿದ್ದಾರೆ.

ಈ ಕಡೆ ರಶ್ಮಿಕಾ ಮಂದಣ್ಣ ಯಜಮಾನ ಚಿತ್ರದ ಬಿಡುಗಡೆಗೆ ಕಾಯ್ತಿದ್ದಾರೆ. ಆ ಕಡೆ ಡಿಯರ್ ಕಾಮ್ರೆಡ್ ಚಿತ್ರೀಕರಣ ಮಾಡ್ತಿದ್ದಾರೆ. ಜೊತೆಗೆ ನಾನಿ ಜೊತೆಯಲ್ಲೂ ಸಿನಿಮಾವೊಂದು ಮಾಡಲಿದ್ದಾರೆ ಎಂಬ ಸುದ್ದಿ ಇದೆ.
English summary
Rashmika Mandanna, who has been a part of Telugu films such as Kirik Party, and Anjani Putra, is set to make her Tamil debut with Karthi in Bakkiyaraj Kannan's yet-untitled film.


Click it and Unblock the Notifications