Rashmika Mandanna: ಸಿನಿಮಾ ಸಂಭಾವನೆ ಬಿಟ್ಟು ಲಿಪ್‌ಲಾಕ್‌ ಸೀನ್‌ಗಳಿಗೆ ಎಕ್ಸ್ಟ್ರಾ ಚಾರ್ಜ್ ಮಾಡ್ತಾರಾ ರಶ್ಮಿಕಾ?

ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗಿ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಮೊದಲ ಹಾಡಿನಲ್ಲಿ ರಣ್‌ಬೀರ್ ತುಟಿಗೆ ರಶ್ಮಿಕಾ ತುಟಿ ಸೇರಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ರಶ್ಮಿಕಾ ಬಳಿಕ ಟಾಲಿವುಡ್ ಪ್ರವೇಶಿಸಿ ಗೆದ್ದರು. ಅಲ್ಲಿಂದ ಮುಂದೆ ಬಾಲಿವುಡ್‌ಗೂ ಅಡಿಯಿಟ್ಟರು. ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡುತ್ತಿದ್ದಾರೆ. ಇನ್ನು 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಲಿಪ್‌ಲಾಕ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹಾಡಿನುದ್ದಕ್ಕೂ ಮೂರ್ನಾಲ್ಕು ಬಾರಿ ಇಬ್ಬರು ಮುತ್ತಿನ ಮಳೆ ಸುರಿಸಿದ್ದಾರೆ.

Rashmika Mandanna Team Gives Clarification on rumors about extra pay for liplock scenes

ಸಿನಿಮಾಗಳಲ್ಲಿ ನಟಿಸೋಕೆ ಸಂಭಾವನೆ ಪಡೆಯುವುದು ಮಾತ್ರವಲ್ಲದೇ ಲಿಪ್‌ಲಾಪ್ ಸೀನ್‌ಗಳಿಗೆ ರಶ್ಮಿಕಾ ಹೆಚ್ಚು ಸಂಭಾವನೆ ಕೇಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಕಳೆದೆರಡು ದಿನಗಳಿಂದ ಬಾಲಿವುಡ್, ಟಾಲಿವುಡ್‌ನಲ್ಲೇ ಇದೇ ಹಾಟ್ ಟಾಪಿಕ್ ಆಗಿದೆ. ಸಾಮಾನ್ಯವಾಗಿ ನಟಿಯರು ಲಿಪ್‌ಲಾಕ್ ಸೀನ್‌ಗಳಿಗೆ ಒಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಕತೆ ಬಯಸುತ್ತದೆ ಎಂದು ಹೇಳಿ ನಾಯಕನ ತುಟಿಗೆ ತುಟಿ ಸೇರಿಸಲು ಸೈ ಎನ್ನುತ್ತಾರೆ.

ರಶ್ಮಿಕಾ ಮಂದಣ್ಣ ಇದನ್ನು ಮುನ್ನ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ ಲಾಕ್ ಮಾಡಿದ್ದರು. 'ಗೀತಾಗೋವಿಂದಂ' ಜೋಡಿಯ ಚುಂಬನ ದೃಶ್ಯ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಬಳಿಕ ಡಿಯರ್ ಕಾಮ್ರೆಡ್ ಚಿತ್ರದಲ್ಲೂ ಇಬ್ಬರು ಲಿಪ್‌ಲಾಕ್ ಮಾಡಿದ್ದರು. ಆ ಬಳಿಕ ಇದೀಗ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಮತ್ತೆ ಅಂತಹ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಒಂದು ಹಾಡಿನಲ್ಲೇ ಇಷ್ಟು ಲಿಪ್‌ಲಾಕ್ ಇದ್ದರೆ ಸಂಪೂರ್ಣ ಸಿನಿಮಾದಲ್ಲಿ ಇನ್ನೆಷ್ಟು ಬಾರಿ ತುಟಿತುಟಿಗೆ ಸೇರಿಸಿದ್ದಾರೋ ಎಂದು ಕೆಲವರು ಹುಬ್ಬೇರಿಸಿದ್ದಾರೆ.

ಇಷ್ಟೊಂದು ಬೋಲ್ಡ್ ಆಗಿ ನಟಿಸಿರುವ ರಶ್ಮಿಕಾ ಅದಕ್ಕಾಗಿ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ ಎನ್ನುವ ಊಹಾಪೋಹ ಈಗ ಶುರುವಾಗಿದೆ. ಆದರೆ ಈ ಬಗ್ಗೆ ಸ್ವತಃ ರಶ್ಮಿಕಾ ಟೀಂ ಸ್ಪಷ್ಟನೆ ನೀಡಿದೆ ಎನ್ನಲಾಗ್ತಿದೆ. "ಆ ರೀತಿ ಆಕೆ ಹೆಚ್ಚಿನ ಸಂಭಾವನೆ ಕೇಳಲ್ಲ. ಒಮ್ಮೆ ಚಿತ್ರಕ್ಕೆ ಸಹಿ ಹಾಕಿದರೆ ಮುಗೀತು. ಆ ಚಿತ್ರಕ್ಕೆ ಅಗತ್ಯ ಇರುವಷ್ಟು ಆಕೆ ಕೆಲಸ ಮಾಡುತ್ತಾರೆ, ಯಾವುದೇ ಹೆಚ್ಚುವರಿ ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಸುದ್ದಿಯಾಗುತ್ತಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಸದ್ಯ ರಿಲೀಸ್ ಆಗಿರುವ 'ಹುವಾ ಮೈನ್' ಹಾಡಿನ ಕನ್ನಡ ವರ್ಷನ್ ಕೂಡ ಕೇಳುಗರ ಗಮನ ಸೆಳೆದಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್, ಶಕ್ತಿ ಕಪೂರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

ಸದ್ಯ ರಶ್ಮಿಕಾ ತೆಲುಗಿನ 'ಪುಷ್ಪ'-2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಮ್ಮೆ ಶ್ರೀವಲ್ಲಿಯಾಗಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಮುಂದಿನ ವರ್ಷ ಆಗಸ್ಟ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಇನ್ನು 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ತಮಿಳು, ತೆಲುಗಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಧನುಷ್ ಜೋಡಿಯಾಗಿ ತಮಿಳು ಚಿತ್ರವೊಂದಕ್ಕೆ ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಜೊತೆ ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆಗಳು ನಡೀತಿದೆ. ಇದೆಲ್ಲದರ ಮಧ್ಯೆ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಲಿಪ್‌ಲಾಕ್ ಮಾಡಿದ್ದಕ್ಕೆ ವಿಜಯ್‌ ದೇವರಕೊಂಡನ ಕೆಲವರು ಟ್ರೋಲ್ ಮಾಡಿದ್ದರು.

More from Filmibeat

English summary
is Rashmika Mandanna charge extra for liplock scenes?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X