ಸೂಪರ್ ಸ್ಟಾರ್ ನಟನ ಮಗನಿಗೆ ರಶ್ಮಿಕಾ ಮಂದಣ್ಣ ನಾಯಕಿ.!
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಜಮಾನ, ಗೋಲ್ಡನ್ ಸ್ಟಾರ್ ಜೊತೆ ಚಮಕ್ ಈಗ ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.
ಆ ಕಡೆ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ನಾಗಾರ್ಜುನ ಹಾಗೂ ನಾನಿ ಜೊತೆ ದೇವದಾಸ್, ಈಗ ಅಲ್ಲು ಅರ್ಜುನ್ ಜೊತೆ ಒಂದು ಹೊಸ ಸಿನಿಮಾ, ಮತ್ತೊಂದೆಡೆ ತಮಿಳು ಸ್ಟಾರ್ ಕಾರ್ತಿ ಜೊತೆ ಒಂದು ಸಿನಿಮಾ. ಹೀಗೆ, ಸೌತ್ ಇಂಡಸ್ಟ್ರಿಯ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಈಗ ಇನ್ನೊಂದು ಸರ್ಪ್ರೈಸ್ ನೀಡಿದ್ದಾರೆ.
ಸ್ಟಾರ್, ಸೂಪರ್ ಸ್ಟಾರ್ ಈಗ ಸೂಪರ್ ಸ್ಟಾರ್ ನಟನ ಮಗನ ಸಿನಿಮಾಗೆ ನಾಯಕಿಯಾಗಿ ನಟಿಸುವ ಆಫರ್ ಬಂದಿದೆಯಂತೆ. ಅಷ್ಟಕ್ಕೂ ಆ ಸೂಪರ್ ಸ್ಟಾರ್ ಯಾರು? ಅವರ ಮಗನ ಯಾವ ಚಿತ್ರಕ್ಕೆ ಕಿರಿಕ್ ಹುಡುಗಿಗೆ ಆಫರ್ ಬಂದಿದೆ? ಮುಂದೆ ಓದಿ.....

ನಾಗಾರ್ಜುನ ಮಗನ ಚಿತ್ರದಲ್ಲಿ ರಶ್ಮಿಕಾ.!
ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಜೊತೆ ದೇವದಾಸ್ ಸಿನಿಮಾ ಮಾಡಿದ್ದ ರಶ್ಮಿಕಾ ಮಂದಣ್ಣ, ಈಗ ಅವರ ಮಗನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಹೌದು, ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಮುಂದಿನ ಸಿನಿಮಾಗೆ ರಶ್ಮಿಕಾ ಅವರನ್ನ ಕರೆತರುವ ಪ್ರಯತ್ನ ಸಾಗಿದೆಯಂತೆ.

'ಬೊಮ್ಮರಿಲ್ಲು' ಬಾಸ್ಕರ್ ಚಿತ್ರದಲ್ಲಿ ಅಖಿಲ್-ರಶ್ಮಿಕಾ
ಬೊಮ್ಮರಿಲ್ಲು, ಆರೆಂಜ್, ಪರಗು, ಬೆಂಗಳೂರು ನಾಟಕಳ್ ಅಂತಹ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಬಾಸ್ಕರ್ ಅವರ ಮುಂದಿನ ಸಿನಿಮಾದಲ್ಲಿ ಅಖಿಲ್ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ರಶ್ಮಿಕಾ ಅವರನ್ನ ಸಂಪರ್ಕ ಮಾಡಲಾಗಿದೆಯಂತೆ. ಆದ್ರೆ, ಅಧಿಕೃತವಾಗಿ ಅಂತಿಮವಾಗಿಲ್ಲ ಎಂದು ಹೇಳಲಾಗ್ತಿದೆ.

ಪೂಜಾ, ಕೈರಾ, ಆಲಿಯಾ ಬಳಿಕ ರಶ್ಮಿಕಾ
ಅಖಿಲ್ ಮತ್ತು ಬಾಸ್ಕರ್ ಕಾಂಬಿನೇಷನ್ ಚಿತ್ರಕ್ಕೆ ಈ ಹಿಂದೆ ಪೂಜಾ ಹೆಗ್ಡೆ, ಕೈರಾ ಅಡ್ವಾನಿ, ಆಲಿಯಾ ಭಟ್ ಅವರ ಹೆಸರು ಕೇಳಿ ಬಂತು. ಆದ್ರೆ, ಅದ್ಯಾವುದು ವರ್ಕೌಟ್ ಆಗಲಿಲ್ಲ. ಇದೀಗ, ರಶ್ಮಿಕಾ ಅವರ ಹೆಸರು ಸದ್ದು ಮಾಡ್ತಿದೆ. ಇದು ಪಕ್ಕಾ ಆಗುತ್ತೆ ಎನ್ನಲಾಗುತ್ತಿದೆ.

ಮಹೇಶ್ ಬಾಬು ಸಿನಿಮಾದಲ್ಲೂ ಹೆಸರು
ತೆಲುಗಿನ ಸ್ಟಾರ್ ನಟರ ಚಿತ್ರಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ಪ್ರಿನ್ಸ್ ಮಹೇಶ್ ಬಾಬು ಅವರ ಚಿತ್ರದಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ದಿನದಿಂದ ಸೌಂಡ್ ಮಾಡ್ತಿದೆ. ಅಷ್ಟೇ ಅಲ್ಲ, ತಮಿಳು ಸೂಪರ್ ಸ್ಟಾರ್ ವಿಜಯ್ ಸಿನಿಮಾದಲ್ಲೂ ಕಿರಿಕ್ ಹುಡುಗೊಯ ಹೆಸರು ಚಾಲ್ತಿಯಲ್ಲಿದೆಯಂತೆ. ಆದ್ರೆ, ಅಧಿಕೃತವಾಗಿ ಪ್ರಕಟವಾಗುವವರೆಗೂ ಇದೆಲ್ಲಾ ಗಾಸಿಪ್ ಅಷ್ಟೇ.


Click it and Unblock the Notifications











