'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!
Recommended Video

'ಅಂಜನಿಪುತ್ರ' ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ಬಿಡುಗಡೆಯಾಗಿಲ್ಲ. ಆ ಕಡೆ 'ಗೀತಾ ಗೋವಿಂದಂ' ಚಿತ್ರ ಮುಗಿದ ಬೆನ್ನಲ್ಲೆ 'ದೇವದಾಸ್' ಎಂಬ ಸಿನಿಮಾ ರಿಲೀಸ್ ಆಗಿತ್ತು.
ಈಗ 'ದೇವದಾಸ್' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಈ ಮಧ್ಯೆ ರಶ್ಮಿಕಾ ಅಭಿನಯಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಆರಂಭವಾಗಿದೆ.
ಕನ್ನಡದಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಯಜಮಾನ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಕಾಣಲಿದೆ. ಇದಾದ ಬಳಿಕ ಯಾವ ಕನ್ನಡ ಸಿನಿಮಾನೂ ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಒಂದು ತೆಲುಗು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಸಿನಿಮಾ ಮಾಡ್ತಿದ್ದಾರೆ. ಹೌದು, ಈಗ 'ದೇವದಾಸ್' ನಂತರ ಮತ್ತೊಂದು ಸ್ಟಾರ್ ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ. ಯಾವುದು ಆ ಚಿತ್ರ.? ಮುಂದೆ ಓದಿ.....

ದೇವರಕೊಂಡ ಚಿತ್ರಕ್ಕೆ ನಾಯಕಿ
ವಿಜಯ ದೇರಕೊಂಡ ಅಭಿನಯದ 'ಗೀತಾ ಗೋವಿಂದಂ' ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮತ್ತೆ ದೇವರಕೊಂಡ ನಾಯಕನಾಗಿರುವ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ನಾಯಕಿಯಾಗುತ್ತಿದ್ದಾರೆ. ಬಹುಶಃ ಈ ಚಿತ್ರಕ್ಕೂ ಮೊದಲೇ ಇನ್ನೊಂದು ತೆಲುಗು ಸಿನಿಮಾ ಮಾಡುತ್ತಿದ್ದಾರೆ ರಶ್ಮಿಕಾ.

ನಿತೀನ್ ಚಿತ್ರಕ್ಕೆ ನಾಯಕಿ
ಹೌದು, ತೆಲುಗು ಸ್ಟಾರ್ ನಟ ನಿತೀನ್ ಅಭಿನಯಿಸಲಿರುವ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. 'ದೇವದಾಸ್' ಸಿನಿಮಾದ ನಂತರ ಈ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರಂತೆ. ಈ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಲಿದ್ದಾರಂತೆ.

'ಚಲೋ' ನಿರ್ದೇಶಕನಿಗೆ ಸಾಥ್
ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದು 'ಚಲೋ' ಚಿತ್ರದ ಮೂಲಕ. ಈ ಚಿತ್ರವನ್ನ ನಿರ್ದೇಶನ ಮಾಡಿದ್ದ ವೆಂಕಿ ಕುಡುಮುಲ ಅವರು ಈಗ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ರಶ್ಮಿಕಾ ಅವರೇ ನಾಯಕಿಯನ್ನಾಗಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ನಿತೀನ್ ನಾಯಕ ಎನ್ನಲಾಗಿದೆ.

'ವೃತ್ರ' ಬಿಟ್ಟು ಹೋದ ರಶ್ಮಿಕಾ
ಈ ಮಧ್ಯೆ ರಶ್ಮಿಕಾ ಮಾಡಬೇಕಿದ್ದ 'ವೃತ್ರ' ಚಿತ್ರದಿಂದ ರಶ್ಮಿಕಾ ಹೊರಹೋಗಿದ್ದರು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಈ ಪ್ರಾಜೆಕ್ಟ್ ಕೈಬಿಟ್ಟಿದ್ದರು. ಅಲ್ಲಿಗೆ ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾ ಮಾಡುತ್ತಿರುವ ಬಗ್ಗೆ ವರದಿಯಾಗಿಲ್ಲ.


Click it and Unblock the Notifications











