twitter
    For Quick Alerts
    ALLOW NOTIFICATIONS  
    For Daily Alerts

    'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!

    |

    Recommended Video

    ಏನ್ ಇದು ಈಪಾಟಿ ಬ್ಯುಸಿ ಆಗೋದ್ರು ರಶ್ಮಿಕಾ..! | FILMIBEAT KANANDA

    'ಅಂಜನಿಪುತ್ರ' ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ಬಿಡುಗಡೆಯಾಗಿಲ್ಲ. ಆ ಕಡೆ 'ಗೀತಾ ಗೋವಿಂದಂ' ಚಿತ್ರ ಮುಗಿದ ಬೆನ್ನಲ್ಲೆ 'ದೇವದಾಸ್' ಎಂಬ ಸಿನಿಮಾ ರಿಲೀಸ್ ಆಗಿತ್ತು.

    ಈಗ 'ದೇವದಾಸ್' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಈ ಮಧ್ಯೆ ರಶ್ಮಿಕಾ ಅಭಿನಯಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಆರಂಭವಾಗಿದೆ.

    'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.? 'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.?

    ಕನ್ನಡದಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಯಜಮಾನ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಕಾಣಲಿದೆ. ಇದಾದ ಬಳಿಕ ಯಾವ ಕನ್ನಡ ಸಿನಿಮಾನೂ ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಒಂದು ತೆಲುಗು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಸಿನಿಮಾ ಮಾಡ್ತಿದ್ದಾರೆ. ಹೌದು, ಈಗ 'ದೇವದಾಸ್' ನಂತರ ಮತ್ತೊಂದು ಸ್ಟಾರ್ ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ. ಯಾವುದು ಆ ಚಿತ್ರ.? ಮುಂದೆ ಓದಿ.....

    ದೇವರಕೊಂಡ ಚಿತ್ರಕ್ಕೆ ನಾಯಕಿ

    ದೇವರಕೊಂಡ ಚಿತ್ರಕ್ಕೆ ನಾಯಕಿ

    ವಿಜಯ ದೇರಕೊಂಡ ಅಭಿನಯದ 'ಗೀತಾ ಗೋವಿಂದಂ' ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮತ್ತೆ ದೇವರಕೊಂಡ ನಾಯಕನಾಗಿರುವ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ನಾಯಕಿಯಾಗುತ್ತಿದ್ದಾರೆ. ಬಹುಶಃ ಈ ಚಿತ್ರಕ್ಕೂ ಮೊದಲೇ ಇನ್ನೊಂದು ತೆಲುಗು ಸಿನಿಮಾ ಮಾಡುತ್ತಿದ್ದಾರೆ ರಶ್ಮಿಕಾ.

    ಗಾಸಿಪ್ ಸುದ್ದಿಯನ್ನ ಖಚಿತ ಪಡಿಸಿದ ನಟಿ ರಶ್ಮಿಕಾ ಮಂದಣ್ಣ.!ಗಾಸಿಪ್ ಸುದ್ದಿಯನ್ನ ಖಚಿತ ಪಡಿಸಿದ ನಟಿ ರಶ್ಮಿಕಾ ಮಂದಣ್ಣ.!

    ನಿತೀನ್ ಚಿತ್ರಕ್ಕೆ ನಾಯಕಿ

    ನಿತೀನ್ ಚಿತ್ರಕ್ಕೆ ನಾಯಕಿ

    ಹೌದು, ತೆಲುಗು ಸ್ಟಾರ್ ನಟ ನಿತೀನ್ ಅಭಿನಯಿಸಲಿರುವ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. 'ದೇವದಾಸ್' ಸಿನಿಮಾದ ನಂತರ ಈ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರಂತೆ. ಈ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಲಿದ್ದಾರಂತೆ.

    ರಶ್ಮಿಕಾರನ್ನ ತೆಲುಗು ಮಂದಿ ಮೆಚ್ಚಿಕೊಳ್ಳಲು ಕಾರಣ ಹೇಳಿದ ನಾಗಾರ್ಜುನರಶ್ಮಿಕಾರನ್ನ ತೆಲುಗು ಮಂದಿ ಮೆಚ್ಚಿಕೊಳ್ಳಲು ಕಾರಣ ಹೇಳಿದ ನಾಗಾರ್ಜುನ

    'ಚಲೋ' ನಿರ್ದೇಶಕನಿಗೆ ಸಾಥ್

    'ಚಲೋ' ನಿರ್ದೇಶಕನಿಗೆ ಸಾಥ್

    ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದು 'ಚಲೋ' ಚಿತ್ರದ ಮೂಲಕ. ಈ ಚಿತ್ರವನ್ನ ನಿರ್ದೇಶನ ಮಾಡಿದ್ದ ವೆಂಕಿ ಕುಡುಮುಲ ಅವರು ಈಗ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ರಶ್ಮಿಕಾ ಅವರೇ ನಾಯಕಿಯನ್ನಾಗಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ನಿತೀನ್ ನಾಯಕ ಎನ್ನಲಾಗಿದೆ.

    ರಶ್ಮಿಕಾ ಬಿಟ್ಟು ಹೋದ ಸಿನಿಮಾಗೆ ಸಿಕ್ಕಳು ಹೊಸ ನಾಯಕಿರಶ್ಮಿಕಾ ಬಿಟ್ಟು ಹೋದ ಸಿನಿಮಾಗೆ ಸಿಕ್ಕಳು ಹೊಸ ನಾಯಕಿ

    'ವೃತ್ರ' ಬಿಟ್ಟು ಹೋದ ರಶ್ಮಿಕಾ

    'ವೃತ್ರ' ಬಿಟ್ಟು ಹೋದ ರಶ್ಮಿಕಾ

    ಈ ಮಧ್ಯೆ ರಶ್ಮಿಕಾ ಮಾಡಬೇಕಿದ್ದ 'ವೃತ್ರ' ಚಿತ್ರದಿಂದ ರಶ್ಮಿಕಾ ಹೊರಹೋಗಿದ್ದರು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಈ ಪ್ರಾಜೆಕ್ಟ್ ಕೈಬಿಟ್ಟಿದ್ದರು. ಅಲ್ಲಿಗೆ ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾ ಮಾಡುತ್ತಿರುವ ಬಗ್ಗೆ ವರದಿಯಾಗಿಲ್ಲ.

    English summary
    The latest buzz surrounding Rashmika is that she is being considered to play the female lead in a film by director Venky Kudumula of Chalo fame. The untitled film features actor Nithiin.
    Sunday, September 30, 2018, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X