ಮರಾಠ ಸಾಮ್ರಾಜ್ಯದ ಮಹಾರಾಣಿ ಆಗಿ ರಶ್ಮಿಕಾ? ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ಆಯ್ಕೆ?

ಬಾಲಿವುಡ್‌ನಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಮೊದಲ ಪ್ರಯತ್ನದಲ್ಲೇ ಬಿಗ್‌ಬಿ ಮಗಳ ಪಾತ್ರದಲ್ಲಿ ನಟಿಸಿದ ಚೆಲುವೆ ಇದೀಗ 'ಅನಿಮಲ್‌' ಮತ್ತೊಂದು ದೊಡ್ಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನೋಡ್ತಾ ನೋಡ್ತಾ ರಶ್ಮಿಕಾ ಬಾಲಿವುಡ್ ಹೀರೋಯಿನ್ ಆಗಿಬಿಟ್ಟಿದ್ದಾರೆ. ಹಾಟ್ ಫೋಟೊಶೂಟ್‌ಗಳ ಮೂಲಕ ಬಾಲಿವುಡ್ ಬೆಡಗಿಯರಿಗೆ ಪೈಪೋಟಿ ಕೊಡ್ತಿದ್ದಾರೆ. ಇದೀಗ ಮತ್ತೊಂದು ಅದ್ಧೂರಿ ಚಿತ್ರಕ್ಕೆ ರಶ್ಮಿಕಾ ಹೆಸರು ಕೇಳಿಬರ್ತಿದೆ.

ಮರಾಠ ಸಾಮ್ರಾಜ್ಯದ ರಾಜ ಛತ್ರಪತಿ ಶಿವಾಜಿ ಮಹಾ ಪರಾಕ್ರಮಿ ಆಗಿದ್ದರು. ಅಷ್ಟೇ ಅಲ್ಲ ಅವರ ಮಗ ಸಂಭಾಜಿ ಕೂಡ ಮರಾಠ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. ಶಿವಾಜಿ ಕುರಿತು ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು ಬಂದಿವೆ. ಇದೀಗ ಸಂಭಾಜಿ ಪರಾಕ್ರಮದ ಕುರಿತು ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಪ್ರಯತ್ನಗಳು ನಡೀತಿದೆ. ವಿಕ್ಕಿ ಕೌಶಲ್ ಸಂಭಾಜಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಬಹಳ ಅದ್ಧೂರಿಯಾಗಿ ಈ ಐತಿಹಾಸಿಕ ಸಿನಿಮಾ ಸಿದ್ದತೆ ನಡೀತಿದೆ.

Rashmika Mandanna will play Sambhaji Maharajs wife, Yesubai Bhonsale in film Chhava

'ಚಾವ' ಎನ್ನುವ ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಚರ್ಚೆ ನಡೀತಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಸಂಭಾಜಿ ಪತ್ನಿ ಯೇಸುಬಾಯಿ ಭೋಂಸ್ಲೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಹೆಸರು ಚಾಲ್ತಿಗೆ ಬಂದಿದೆಯಂತೆ. ಈ ಬಗ್ಗೆ ಚರ್ಚೆ ನಡೀತಿದ್ದು ಎಲ್ಲಾ ಅಂದುಕೊಂಡಂತೆ ಆದ್ರೆ ರಾಣಿ ಯೇಸುಬಾಯಿ ಆಗಿ ಕೊಡಗಿನ ಕುವರಿ ನಟಿಸಲಿದ್ದಾರೆ. ಬಹಳ ಪವರ್‌ಫುಲ್ ಪಾತ್ರ ಇದು. ಚಿತ್ರಕ್ಕಾಗಿ ಈಗಾಗಲೇ ರಶ್ಮಿಕಾ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಯೇಸುಬಾಯಿ ಪಾತ್ರಕ್ಕೆ ಹೋಮ್‌ವರ್ಕ್‌ ಶುರು ಮಾಡಿದ್ದಾರಂತೆ.

ಸಾಂಭಾಜಿ ಬೇರೆ ರಾಜ್ಯಗಳ ಮೇಲೆ ದಂಡೆತ್ತು ಹೋದಾಗ ಮರಾಠ ಸಾಮ್ರಾಜ್ಯದಲ್ಲಿ ಯೇಸುಬಾಯಿ ಅಧಿಕಾರ ಚಲಾಯಿಸುತ್ತಿದ್ದರು. ಆಡಳಿತದಲ್ಲಿ ಎಂತಹ ನಿರ್ಧಾರಗಳನ್ನು ತೆಗೆದುಕೊಂಡ್ರು? ಎಂತಹ ರಾಜಕೀಯ ವ್ಯೂಹಗಳನ್ನು ರಚಿಸಿ ಆಳ್ವಿಕೆ ನಟಿಸಿದರು? ಎನ್ನುವ ಕೋನದಲ್ಲೂ ಸಿನಿಮಾ ಕಥೆ ಸಾಗಲಿದೆ. ಹಾಗಾಗಿ ರಶ್ಮಿಕಾ ಪಾತ್ರಕ್ಕೆ ಭಾರೀ ಮಹತ್ವ ಇರಲಿದೆ. ದಿನೇಶ್ ವಿಜನ್ 'ಚಾವ' ಚಿತ್ರಕ್ಕೆ ಬಂಡವಾಳ ಹೂಡಲಿದ್ದು ಲಕ್ಷ್ಮಣ್ ಉಟೆಕರ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

ಬಹಳ ರೂಪವತಿಯಾಗಿದ್ದ ಯೇಸುಬಾಯಿ ಬಹಳ ಬುದ್ಧಿವಂತೆ ಕೂಡ ಆಗಿದ್ದರು. ಇಂತಾದೊಂದು ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿರುವುದು ವಿಶೇಷ. ಈಗಾಗಲೇ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಂಭಾಜಿ ಹಾಗೂ ಯೇಸುಬಾಯಿ ಪಾತ್ರಗಳಲ್ಲಿ ನಟಿಸುವ ವಿಚಾರ ಅಭಿಮಾನಿಗಳಿಗೆ ಖುಷಿತಂದಿದೆ. 'ಚಾವ' ಚಿತ್ರದಲ್ಲಿ ಸಾಂಭಾಜಿಯ ಶೌರ್ಯ, ಪರಾಕ್ರಮ ಕಥೆಯನ್ನು ಹೇಳಲಾಗುತ್ತಿದೆ. ಆ ಕಥೆಯಲ್ಲಿ ರಶ್ಮಿಕಾ ಪಾತ್ರಕ್ಕೂ ಬಹಳ ಮಹತ್ವ ಇರಲಿದೆ.

ಇನ್ನು ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ 4 ಸಿನಿಮಾಗಳು ಆಕೆಯ ಕೈಯಲ್ಲಿವೆ. 'ಪುಷ್ಪ'- 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಇನ್ನು 'ಭೀಷ್ಮ' ನಂತರ ನಿತಿನ್ ಜೊತೆ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ಜೊತೆಗೆ 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿತ್ತು. ಸಮಂತಾ ಮಾಡಬೇಕಿದ್ದ ಸಿನಿಮಾ ರಶ್ಮಿಕಾ ಪಾಲಾಗಿತ್ತು.

ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಶ್ಮಿಕಾ ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಬೆಡಗಿ ಹಾಟ್ ಹಾಟ್ ಫೋಟೊಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಟಾಲಿವುಡ್ ಜೊತೆಗೆ ಬಾಲಿವುಡ್‌ನಿಂದಲೂ ಒಳ್ಳೆ ಅವಕಾಶಗಳು ಈ ಚೆಲುವೆಯನ್ನು ಅರಸಿ ಬರ್ತಿದೆ. 'ಚಾವ' ಚಿತ್ರದಲ್ಲಿ ನಟಿಸುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.

More from Filmibeat

English summary
Rashmika will play Sambhaji Maharaj's wife, Yesubai Bhonsale in film Chhava. Rashmika Mandanna to romance with Vicky Kaushal in Laxman Utekar's period drama. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X