ಎರಡು ಸಿನಿಮಾ ಹಿಟ್ ಆಗ್ತಿದ್ದಂತೆ ರಶ್ಮಿಕಾ ಸಂಭಾವನೆ ಗಗನಕ್ಕೇರಿದೆ.!
'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಚಿತ್ರರಂಗದ ಹಾಟ್ ಟಾಪಿಕ್. ಮಾಡಿದ ಕೆಲವೇ ಸಿನಿಮಾಗಳ ಮೂಲಕ 'ಕರ್ನಾಟಕದ ಕ್ರಶ್' ಎನಿಸಿಕೊಂಡ ರಶ್ಮಿಕಾ, ಪುನೀತ್ ರಾಜ್ ಕುಮಾರ್, ಗಣೇಶ್, ದರ್ಶನ್ ಅಂತಹ ಸೂಪರ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡರು.
ಅಷ್ಟರ ಮಧ್ಯೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನ ಕುವರಿ, ಅಲ್ಲಿ ಸೂಪರ್ ಸಕ್ಸಸ್ ಕಂಡರು. 'ಚಲೋ' ಎಂಬ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ರಶ್ಮಿಕಾ, ಈಗ 'ಗೀತಾ ಗೋವಿಂದಂ' ಮೂಲಕ ಸ್ಟಾರ್ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ.
ಹೌದು, ರಶ್ಮಿಕಾಗೆ ಈಗ ತೆಲುಗಿನ ದೊಡ್ಡ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಬರುತ್ತಿದೆ. ಅಲ್ಲು ಅರ್ಜುನ್, ಎನ್.ಟಿ.ಆರ್ ಅಂತವರ ಪ್ರಾಜೆಕ್ಟ್ ಗಳಲ್ಲಿ ನಾಯಕಿಯಾಗಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಮಧ್ಯೆ ರಶ್ಮಿಕಾ ಸಂಭಾವನೆ ಮೂರು ಪಟ್ಟು ಹೆಚ್ಚಾಗಿದೆಯಂತೆ. ಅಷ್ಟಕ್ಕೂ, ರಶ್ಮಿಕಾ ತೆಲುಗು ಸಿನಿಮಾದ ಸಂಭಾವನೆ ಎಷ್ಟು.? ಮುಂದೆ ಓದಿ.....

ತೆಲುಗಿನಲ್ಲಿ ಹೆಚ್ಚಿದ ಬೇಡಿಕೆ
'ಚಲೋ' ಮತ್ತು 'ಗೀತಾಗೋವಿಂದಂ' ಚಿತ್ರದ ನಂತರ ರಶ್ಮಿಕಾ ಮಂದಣ್ಣಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಿದೆ. ನಾಗಾರ್ಜುನ ಮತ್ತು ನಾನಿ ಅಭಿನಯಿಸುತ್ತಿರುವ 'ದೇವದಾಸ್' ಹಾಗೂ 'ಡಿಯರ್ ಕಾಮ್ರೆಡ್' ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯುಸುತ್ತಿದ್ದಾರೆ. ಇದರ ಜೊತೆಗೆ ದೊಡ್ಡ ಸ್ಟಾರ್ ಗಳ ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ.

'ಗೀತಾ ಗೋವಿಂದಂ' ಚಿತ್ರಕ್ಕೆ ಸಂಭಾವನೆ ಎಷ್ಟು.?
ಟಾಲಿವುಡ್ ಮಾಧ್ಯಮಗಳ ವರದಿಯ ಪ್ರಕಾರ 'ಗೀತಾ ಗೋವಿಂದಂ' ಚಿತ್ರಕ್ಕೆ ರಶ್ಮಿಕಾ ಅವರು 25 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ, ಇದು ಎಷ್ಟು ನಿಜವೋ ಗೊತ್ತಿಲ್ಲ. ಆದ್ರೀಗ, ರಶ್ಮಿಕಾ ಸಂಭಾವನೆ ಇದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆಯಂತೆ.

ಮೂರು ಪಟ್ಟು ಸಂಭಾವನೆ ಹೆಚ್ಚು
ಗೀತಾಗೋವಿಂದಂ ನಂತರ ಅಭಿನಯಿಸುತ್ತಿರುವ ಚಿತ್ರಗಳಿಗೆ ರಶ್ಮಿಕಾ ಅವರು, ತಮ್ಮ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಅಂದ್ರೆ, 25 ಲಕ್ಷದಿಂದ 75 ಲಕ್ಷಕ್ಕೆ ತಮ್ಮ ಸಂಭಾವನೆ ಹೆಚ್ಚಾಗಿದೆ ಎನ್ನಲಾಗಿದೆ.

ಕನ್ನಡದಲ್ಲಿ ರಶ್ಮಿಕಾ ಸಂಭಾವನೆ ಎಷ್ಟು.?
ಹೀಗೆ, ತೆಲುಗಿನಲ್ಲಿ ರಾತ್ರೋರಾತ್ರಿ ಸ್ಟಾರ್ ನಟಿಯಾದ ರಶ್ಮಿಕಾ ಮಂದಣ್ಣ ಅವರು, ಕನ್ನಡದಲ್ಲೂ ದೊಡ್ಡ ದೊಡ್ಡ ಸಿನಿಮಾ ಮಾಡ್ತಿದ್ದಾರೆ. ಸದ್ಯ, ದರ್ಶನ್ ಜೊತೆ ಅಭಿನಯದ 'ಯಜಮಾನ' ಸಿನಿಮಾ ಬಿಡುಗಡೆಯಾಗಬೇಕಿದೆ. ಅದರ ಜೊತೆ ಮತ್ತೊಂದು ಹೊಸಬರ ಜೊತೆ ಸಿನಿಮಾ ಮಾಡ್ತಿದ್ದಾರೆ. ಆದ್ರೆ, ಕನ್ನಡದಲ್ಲಿ ರಶ್ಮಿಕಾ ಸಂಭಾವನೆ ಎಷ್ಟಿದೆ ಎಂಬುದು ಗೊತ್ತಿಲ್ಲ.

ಯಾವುದು ಆ ಸಿನಿಮಾ.?
ಗೌತಮ್ ಐಯರ್ ನಿರ್ದೇಶನ ಮಾಡುತ್ತಿರುವ 'ವೃತ್ರ' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದು ಗೌತಮ್ ಅವರ ಮೊದಲ ಸಿನಿಮಾ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.


Click it and Unblock the Notifications











