ಕ್ರೇಜಿ ಪ್ರಾಜೆಕ್ಟ್‌ನಿಂದ ರಶ್ಮಿಕಾ ಮಂದಣ್ಣ ಔಟ್: ಮತ್ತೆ ಶ್ರೀಲೀಲಾ ಪಾಲಾಯ್ತು ಲಕ್ಕಿ ಛಾನ್ಸ್!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ನ್ಯಾಷನಲ್ ಕ್ರಶ್ ಹವಾ ನಡೀತಿದೆ. ಮತ್ತೊಂದು ಕಡೆ ರಶ್ಮಿಕಾಗೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲಾ ಪೈಪೋಟಿ ಕೊಡುತ್ತಿದ್ದಾರೆ. ಏಳೆಂಟು ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಸದ್ಯ ಕಿಸ್ ಬೆಡಗಿ ನಟಿಸ್ತಿದ್ದಾರೆ. ಸದ್ಯ ರೋಶ್ ಕೈಯಲ್ಲಿದ್ದ ಮತ್ತೊಂದು ಅವಕಾಶ ಶ್ರೀಲೀಲಾ ಪಾಲಾಗುತ್ತಿದೆ.
ಬಾಲಿವುಡ್‌ನ 'ಅನಿಮಲ್', ತೆಲುಗಿನ 'ಪುಷ್ಪ'-2, ದ್ವಿಭಾಷೆಯ 'ರೈನ್‌ಬೋ' ಸಿನಿಮಾ ರಶ್ಮಿಕಾ ಮಂದಣ್ಣ ಕೈಯಲ್ಲಿದೆ. ಇನ್ನು ತೆಲುಗು ನಟ ನಿತಿನ್ ಜೋಡಿಯಾಗಿ ಮತ್ತೊಂದು ಸಿನಿಮಾದಲ್ಲಿ ಶ್ರೀವಲ್ಲಿ ನಟಿಸಬೇಕಿತ್ತು. ಇದೇ ಕಾಂಬಿನೇಷನ್‌ನಲ್ಲಿ ಕೆಲ ದಿನಗಳ ಹಿಂಧೆ 'ಭೀಷ್ಮ' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಪ್ರಾಜೆಕ್ಟ್ ಅನೌನ್ಸ್ ಆಗಿತ್ತು. ನಿತಿನ್, ರಶ್ಮಿಕಾ ಹಾಗೂ ನಿರ್ದೇಶಕ ವೆಂಕಿ ಕುಡುಮಲ ಸ್ಪೆಷಲ್ ವಿಡಿಯೋ ಮೂಲಕ ಈ ವಿಚಾರ ಹಂಚಿಕೊಂಡಿದ್ದರು. ಆದರೆ ಈಗ ಸಿನಿಮಾದಿಂದ ರೋಶ್ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಭೀಷ್ಮ' ಒಂದು ಮಟ್ಟಿಗೆ ಸಕ್ಸಸ್ ಕಂಡಿತ್ತು. ನಿತಿನ್- ರಶ್ಮಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೇ ಕಾರಣಕ್ಕೆ ತಂಡ ಮತ್ತೊಂದು ಸಿನಿಮಾ ಪ್ಲ್ಯಾನ್ ಮಾಡಿತ್ತು. ರಶ್ಮಿಕಾ ಕಥೆ ಕೇಳಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸಿನಿಮಾ ಮೂಹೂರ್ತದಲ್ಲೂ ಭಾಗಿ ಆಗಿದ್ದರು. ಆದರೆ ಈಗ ಡೇಟ್ಸ್ ಸಮಸ್ಯೆಯಿಂದಾಗಿ ಆಕೆ ಚಿತ್ರದಿಂದ ಹೊರ ಬಂದಿರುವುದಾಗಿ ಹೇಳಲಾಗ್ತಿದೆ. ಇದೀಗ ಚಿತ್ರತಂಡ ಹೊಸ ನಟಿಯ ಹುಡುಕಾಟ ನಡೆಸುತ್ತಿದೆ.
ಸದ್ಯ ಸೌತ್ ಸಿನಿದುನಿಯಾದಲ್ಲಿ ರಶ್ಮಿಕಾ, ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ಹವಾ ನಡೀತಿದೆ. ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಇವರು ಮೂವರು ನಟಿಸುತ್ತಿದ್ದಾರೆ. ಒಬ್ಬೊಬ್ಬರ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಆದರೆ ಶ್ರೀಲೀಲಾ ಹೆಚ್ಚು ಕಮ್ಮಿ 10 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್‌ರಂತಹ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ರಶ್ಮಿಕಾ ಅವಕಾಶಗಳೆಲ್ಲಾ 'ಕಿಸ್' ಬೆಡಗಿ ಪಾಲಾಗುತ್ತಿದೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಹರಿದಾಡ್ತಿದೆ.

ನಿತಿನ್ ಚಿತ್ರದಿಂದ ಹೊರಬಂದ ರಶ್ಮಿಕಾ!
ನಟಿ ರಶ್ಮಿಕಾ ಈಗ ಟಾಲಿವುಡ್‌ಗಿಂತ ಬಾಲಿವುಡ್ ಕಡೆ ಹೆಚ್ಚು ಮುಖ ಮಾಡಿದ್ದಾರೆ. ಬಿಟೌನ್ ಬೆಡಗಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಂಡು ಬಾಲಿವುಡ್ ಮಂದಿ ಗಮನ ಸೆಳೆಯುತ್ತಿದ್ದಾರೆ. ಆ ಮೂಲಕ ಬಾಲಿವುಡ್‌ನ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಸಹಿ ಹಾಕುವ ಲೆಕ್ಕಾಚಾರದಲ್ಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ರಶ್ಮಿಕಾ ನಟಿಸ್ತಾರೆ ಎನ್ನುವ ಗುಸುಗುಸು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಹೀಗೆ ಬಾಲಿವುಡ್ ಕಡೆ ಹೆಚ್ಚು ಒಲವು ಇರುವುದರಿಂದ ತೆಲುಗಿನಲ್ಲಿ ಚಿಕ್ಕ ಸಿನಿಮಾಗಳನ್ನು ರಿಜೆಕ್ಟ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ತೆಲುಗಿಗೆ ಸೀಮಿತವಾದ ಶ್ರೀಲೀಲಾ
ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಶ್ರೀಲೀಲಾ ಏಕಾಏಕಿ ಟಾಲಿವುಡ್ ಪ್ರವೇಶಿಸಿ ಗೆದ್ದರು. ಆಕೆಯ ಕ್ರೇಜ್ ಅಲ್ಲಿ ಜೋರಾಗಿತ್ತು ಸದ್ಯ ಬಾಲಕೃಷ್ಣ, ಮಹೇಶ್ ಬಾಬು, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಶ್ರೀ ನಟಿಸುತ್ತಿದ್ದಾರೆ. ರಶ್ಮಿಕಾ- ಶ್ರೀಲೀಲಾ ಇಬ್ಬರು ಕನ್ನಡ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡ್ತಿಲ್ಲ ಅನ್ನೋದು ಗೊತ್ತಾಗುತ್ತಿದೆ. ಆದರೆ ಶ್ರೀ ಸದ್ಯಕ್ಕೆ ತೆಲುಗು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ತಮಿಳು ಅವಕಾಶಗಳನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ನಿತಿನ್ ನಟನೆಯ 32ನೇ ಸಿನಿಮಾ
ಸೂಪರ್ ಹಿಟ್ 'ಭೀಷ್ಮ' ಕಾಂಬಿನೇಷನ್‌ನಲ್ಲೇ ನಿತಿನ್ ತಮ್ಮ 32ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೆಂಕಿ ಕುಡುಮುಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ 'ಮಾಚೆರ್ಲ ನಿಯೋಜಿಕ ವರ್ಗಂ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಿತಿನ್ ಸೋಲುಂಡಿದ್ದರು. ಇದೀಗ ಹೊಸ ಸಿನಿಮಾ ಮೂಲಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಈ ಚಿತ್ರದಲ್ಲಿ ಮಡದಿಗೆ ಡಿವೋರ್ಸ್ ನೀಡಿ ಒಂಟಿಯಾಗಿ ಇರುವ ಯುವಕನ ಪಾತ್ರದಲ್ಲಿ ನಿತಿನ್ ನಟಿಸಲಿದ್ದಾರಂತೆ. ಡಿವೋರ್ಸ್ ಕೊಟ್ಟ ಮೇಲೆ ಆತ ಏನೆಲ್ಲಾ ಪರಿಪಾಟಲು ಪಡುತ್ತಾನೆ? ಅನ್ನೋದೇ ಸಿನಿಮಾ ಕಥೆ ಎಂದು ಹೇಳಲಾಗ್ತಿದೆ.


Click it and Unblock the Notifications











