'ಕೆಜಿಎಫ್ ಚಾಪ್ಟರ್-2' ಚಿತ್ರಕ್ಕೆ ಬರ್ತಾರಂತೆ ಬಾಲಿವುಡ್ ಖ್ಯಾತ ನಟಿ.?

Recommended Video

KGF 2 Movie : KGF ಗೆ ಕಾಲಿಟ್ಟ ಉಪೇಂದ್ರ ಬೆಡಗಿ..?| FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಬಹುದೊಡ್ಡ ಹಿಟ್ ಆಗಿದೆ. ಈಗ ಕೆಜಿಎಫ್ ಚಾಪ್ಟರ್ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸ ಮಾಡ್ತಿರುವ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಇನ್ನು ನಿಗೂಢತೆ ಕಾಯ್ದುಕೊಂಡಿದೆ.

ಚಾಪ್ಟರ್ 2 ನಲ್ಲಿ ಬರಲಿರುವ ಎರಡ್ಮೂರು ಪ್ರಮುಖ ಪಾತ್ರಗಳಿಗೆ ತಕ್ಕ ಕಲಾವಿದರನ್ನ ಸೇರಿಸಿಕೊಳ್ಳಲು ತಲಾಶ್ ನಡೆಸುತ್ತಿದೆ. ಸದ್ಯಕ್ಕೆ ಸಂಜಯ್ ದತ್, ರಮ್ಯಾಕೃಷ್ಣ ಹೆಸರು ಈ ಪಟ್ಟಿಯಲ್ಲಿ ಹರಿದಾಡುತ್ತಿದೆ. ಹೀಗಿರುವಾಗ, ಇನ್ನೊಬ್ಬ ಖ್ಯಾತ ನಟಿಯರ ಹೆಸರು ಚರ್ಚೆಗೆ ಬಂದಿದೆ.

ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸ್ಟಾರ್ ನಟಿಯೊಬ್ಬರ ಆಗಮನವಾಗಲಿದೆಯಂತೆ. ಅದಕ್ಕಾಗಿ ಚಿತ್ರತಂಡ ಗಂಭೀರವಾಗಿ ಹುಡುಕಾಟ ನಡೆಸಿದ್ದು, ಪ್ರಮುಖ ಪಾತ್ರಕ್ಕೆ ನಟಿಯೊಬ್ಬರನ್ನ ಕರೆತರುತ್ತಿದ್ದಾರಂತೆ. ಅಷ್ಟಕ್ಕೂ ಯಾರದು? ಮುಂದೆ ಓದಿ....

ರವೀನಾ ಟಂಡನ್ ಬರ್ತಾರಾ?

ರವೀನಾ ಟಂಡನ್ ಬರ್ತಾರಾ?

'ಕೆಜಿಎಫ್ ಚಾಪ್ಟರ್-2' ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನ ಕರೆತರುವ ಬಗ್ಗೆ ಚರ್ಚೆಯಾಗಿದೆಯಂತೆ. ಆದ್ರೆ, ಪಾತ್ರ ಯಾವುದು ಎಂಬುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ.

ಉಪೇಂದ್ರ ನಂತರ ಕನ್ನಡಕ್ಕೆ?

ಉಪೇಂದ್ರ ನಂತರ ಕನ್ನಡಕ್ಕೆ?

1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಇದೇ ರವೀನಾ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ. ಅದಾದ ಬಳಿಕ ಈಗ ಕೆಜಿಎಫ್ ಚಿತ್ರಕ್ಕಾಗಿ ಮತ್ತೆ ಸ್ಯಾಂಡಲ್ ವುಡ್ ಕಡೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ನಟಿಸುವ ಸಾಧ್ಯತೆ ಹೆಚ್ಚಿದೆ.!

ನಟಿಸುವ ಸಾಧ್ಯತೆ ಹೆಚ್ಚಿದೆ.!

ಹಾಗ್ನೋಡಿದ್ರೆ ರವೀನಾ ಟಂಡನ್ ಕೆಜಿಎಫ್ ಚಿತ್ರದಲ್ಲಿ ನಟಿಸುವ ಆಸಕ್ತಿ ತೋರಬಹುದು. ಯಾಕಂದ್ರೆ, ಕೆಜಿಎಫ್ ಚಾಪ್ಟರ್ 1 ಚಿತ್ರವನ್ನ ಬಾಲಿವುಡ್ ನಲ್ಲಿ ವಿತರಣೆ ಮಾಡಿದ್ದು, ರವೀನಾ ಪತಿ ಅನಿಲ್ ತಡಾನಿ. ಜೊತೆಗೆ ತಾವು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎರಡನೇ ಭಾಗವನ್ನ ತಮ್ಮದೇ ಪ್ರೊಡಕ್ಷನ್ ವಿತರಣೆ ಮಾಡ್ತಿರುವ ಕಾರಣ ಒಪ್ಪಿಕೊಂಡರು ಅಚ್ಚರಿ ಇಲ್ಲ.

ಪ್ರಧಾನಮಂತ್ರಿ ಪಾತ್ರ ಇರಬಹುದಾ?

ಪ್ರಧಾನಮಂತ್ರಿ ಪಾತ್ರ ಇರಬಹುದಾ?

ಸದ್ಯಕ್ಕೆ ಕೆಜಿಎಫ್ ಚಿತ್ರದಲ್ಲಿ ರವೀನಾಗೆ ಸೂಕ್ತವಾಗಿರುವ ಪಾತ್ರ ಇದೆ ಎಂದು ಗಮನಿಸುವುದಾರೇ ಅದು ಅಂದಿನ ಪ್ರಧಾನಮಂತ್ರಿ ಪಾತ್ರ. ಈ ಪಾತ್ರದ ಪರಿಚಯವನ್ನ ಮೊದಲ ಭಾಗದಲ್ಲಿ ಮಾಡಲಾಗಿತ್ತಾದರೂ, ಎರಡನೇ ಭಾಗದಲ್ಲಿ ಹೆಚ್ಚಿದೆಯಂತೆ. ಇಷ್ಟು ದಿನ ರಮ್ಯಾಕೃಷ್ಣ ಅವರು ಈ ಪಾತ್ರಕ್ಕಾಗಿ ಬರಬಹುದು ಎನ್ನಲಾಗಿತ್ತು. ಈಗ ರವೀನಾ ಟಂಡನ್ ಹೆಸರು ಸುದ್ದಿಯಲ್ಲಿದೆ. ಆದ್ರೆ, ಯಾರು ಅಂತಿಮವಾಗ್ತಾರೆ ಕಾದುನೋಡಬೇಕಿದೆ.

ಸಂಜಯ್ ದತ್ ಅಧಿಕೃತವಾಗಿಲ್ಲ

ಸಂಜಯ್ ದತ್ ಅಧಿಕೃತವಾಗಿಲ್ಲ

ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುವುದು ಪಕ್ಕಾ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಈ ಮಾಹಿತಿ ಹೊರಬಿದ್ದಿಲ್ಲ. ಪ್ರಮುಖ ವಿಲನ್ ಗಳ ಪೈಕಿ ದತ್ ಕೂಡ ಒಬ್ಬರಾಗಲಿದ್ದಾರಂತೆ.

More from Filmibeat

English summary
After the monster success of KGF: Chapter 1, makers are leaving no stones unturned to make KGF: Chapter 2 a bigger film. After reportedly roping in Sanjay Dutt, makers have now approached Raveena Tandon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X