ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಶ್ರೀಲೀಲಾ ಜೊತೆ ರೊಮ್ಯಾನ್ಸ್ ಮಾಡಲು ಸಾಧ್ಯ ಇಲ್ಲವಂತೆ!

ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಇತ್ತೀಚೆಗೆ ಅಪಹರಣ ಆಗಿದ್ದಾರೆ ಎಂದು ಸುದ್ದಿ ಆಗಿದ್ದರು. ರಿಯಾಲಿಟಿ ಶೋ ಒಂದರ ಪ್ರೋಮೊದಲ್ಲಿ ಅವರನ್ನು ಕಿಡ್ನಾಪ್ ಮಾಡಿ ನಂತರ ಸಿಕ್ಕಿ ಬಿದ್ದಿದ್ದಾರೆ. ಇದು ಕೇವಲ ಪ್ರೋಮೊ ಅಷ್ಟೇ. ಈಗ ರವಿಚಂದ್ರನ್ ಅವರ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕನ್ನಡದ 'ಬೈಟು ಲವ್' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ವೇದಿಕೆ ಮೇಲೆ ನಟಿ ಶ್ರೀಲೀಲಾ ಅವರ ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ಅವರು ಈ ಬೈಟು ಲವ್ ಚಿತ್ರದ ಇವೆಂಟ್ ನಡೆಸಿಕೊಟ್ಟರು. ವೇದಿಕೆ ಮೇಲೆ ಮಾತನಾಡಿದ ನಟ ರವಿಚಂದ್ರನ್ ಅವರು ಸಿನಿಮಾ ತಂಡಕ್ಕೆ ಶುಭ ಕೋರಿದರು. ಜೊತೆಗೆ ನಟ ಧನವೀರ್, ನಟಿ ಶ್ರೀಲೀಲಾ ಬಗ್ಗೆ ಮಾತನಾಡಿ "ನನ್ನ ಮಕ್ಕಳು ಯಾವುದೇ ಕಾರ್ಯಕ್ರಮಕ್ಕೂ ಹೆಚ್ಚಾಗಿ ಬರುವುದಿಲ್ಲ. ಆದರೆ ಇಂದು ನನಗಿಂತ ಮುಂಚೆ ರೆಡಿಯಾಗಿದ್ದ ನನ್ನ ಮಗ. ನಾನು ಕೇಳಿದೆ ಶ್ರೀಲೀಲಾ ಅವಳನ್ನು ನೋಡಲು ಬರುತ್ತಿದೆಯಾ ಎಂದು. ಆಗ ಮೂವರು ಫೋನ್ ಮಾಡಿದ್ದಾರೆ ಎಂದ. ಶ್ರೀಲೀಲಾ ತಾಯಿಯವರು ಫೋನ್ ಮಾಡಿದ್ದರು ಎಂದ. ಹಾಗಾಗಿ ಅವರ ಪಕ್ಕದಲ್ಲಿಯ ಕುಳಿತಿದ್ದಾನೆ ನೋಡಿ" ಎಂದು ನಗೆ ಚಟಾಕಿ ಹಾರಿಸಿದರು.

ನಂತರ ನಿರೂಪಕಿ ಅನುಶ್ರೀ ನೀವು ಶ್ರೀಲೀಲಾ ಜೊತೆ ಈಗ ರೋಮ್ಯಾನ್ಸ್ ಮಾಡಬೇಕು ಎನ್ನುತ್ತಾರೆ. ಆಗ ರವಿಚಂದ್ರನ್ ಅವರು ಶ್ರೀಲೀಲಾ ಜೊತೆಗೆ ರೋಮ್ಯಾನ್ಸ್ ಮಾಡಲು ಸಾಧ್ಯವಿಲ್ಲ ನೀವೇ ಅರ್ಥ ಮಾಡಿಕೊಳ್ಳಿ ಎಂದು ನಗೆ ಬೀರಿದರು. ಯಾಕೆಂದರೆ ಅವರು ತಮ್ಮ ಮಗ ಶ್ರೀಲೀಲಾ ಅವರನ್ನು ನೋಡಲು ಬಂದಿದ್ದಾನೆ ಎಂದು ಪರೋಕ್ಷವಾಗಿ ಹೇಳಿದ್ದರು. ಇದು ರವಿಮಾಮ ತಮಾಷೆಗಾಗಿ ಹೇಳಿದ ಮಾತು. ಅದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ.

Ravichandran Says He Cannot Romance With Actress Sreeleela

ಇದೇ ಶುಕ್ರವಾರ ಬೈಟು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಇದು ರೊಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರವಾಗಿರಲಿದೆ. ಚಿತ್ರದಲ್ಲಿ ಧನ್ವೀರ್ ಗೌಡ ಮತ್ತು ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ. ಚಿತ್ರವನ್ನು ನಿಶಾ ವೆಂಕಟ್ ನಿರ್ಮಿಸಿದ್ದಾರೆ.

More from Filmibeat

English summary
Ravichandran Say's He Cannot Romance With Actress Sreeleela Know The Reason,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X