»   » ಮತ್ತೊಂದು ಮಲೆಯಾಳಂ ರೀಮೇಕ್ ಚಿತ್ರದಲ್ಲಿ ಕ್ರೇಜಿ ಸ್ಟಾರ್.?

ಮತ್ತೊಂದು ಮಲೆಯಾಳಂ ರೀಮೇಕ್ ಚಿತ್ರದಲ್ಲಿ ಕ್ರೇಜಿ ಸ್ಟಾರ್.?

Posted By:
Subscribe to Filmibeat Kannada

'ಅಪೂರ್ವ' ಚಿತ್ರದ ಮೇಲೆ ಇಟ್ಟುಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆ ಹುಸಿಯಾದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಪೂರ್ಣ ಪ್ರಮಾಣದ ನಾಯಕ ನಟನಾಗಿ ಮಿಂಚಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.! ಅದು ಮಲೆಯಾಳಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಎನ್ನುವುದು ಸದ್ಯಕ್ಕೆ ಗುಲ್ಲೆದಿರುವ ಮಾತು.

ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಹುಟ್ಟುಹಾಕಿದ 'ದೃಶ್ಯ' ಸಿನಿಮಾ ಕೂಡ ಮಲೆಯಾಳಂ ಚಿತ್ರದ ರೀಮೇಕ್. ಅದರಲ್ಲಿ ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿ ನಟಿಸಿದ್ದ ರವಿಚಂದ್ರನ್ ಹೆಂಗಳೆಯರ ಮನ ಗೆದ್ದಿದ್ದರು. ಈ ಬಾರಿ ಕೂಡ ಅಂಥದ್ದೇ ಮಲೆಯಾಳಂ ಕಥೆ ಆಯ್ಕೆ ಮಾಡಿದ್ದಾರೆ ಎನ್ನುತ್ತಿದ್ದಾರೆ ಗಾಸಿಪ್ ಮಾಸ್ಟರ್.! [ಚಿತ್ರ ವಿಮರ್ಶೆ: ರೋಚಕ ರವಿಚಂದ್ರನ್ 'ದೃಶ್ಯ' ವೈಭವ]

ravichandran-to-remake-malayalam-movie-puthiya-niyamam

ಮಲೆಯಾಳಂನಲ್ಲಿ ಮಮ್ಮೂಟಿ, ನಯನತಾರಾ ಅಭಿನಯಿಸಿದ್ದ ಥ್ರಿಲ್ಲರ್ ಸಿನಿಮಾ 'ಪುದಿಯ ನಿಯಮಮ್' ಚಿತ್ರದ ಕನ್ನಡ ರೀಮೇಕ್ ನಲ್ಲಿ ನಟಿಸಲು ರವಿಚಂದ್ರನ್ ಮನಸ್ಸು ಮಾಡಿದ್ದಾರಂತೆ.

ravichandran-to-remake-malayalam-movie-puthiya-niyamam

ಅಂತರ್ ಜಾತಿ ವಿವಾಹವಾಗಿರುವ ಡಿವೋರ್ಸ್ ಲಾಯರ್ ಹಾಗೂ ನೃತ್ಯ ಕಲಾವಿದೆ ನಡುವೆ ನಡೆಯುವ ಕಥೆ 'ಪುದಿಯ ನಿಯಮಮ್'. ಅತ್ಯಾಚಾರ, ಮಾನಸಿಕ ಖಿನ್ನತೆ ಸುತ್ತುವ ಈ ಸಿನಿಮಾ ರವಿಚಂದ್ರನ್ ರವರಿಗೆ ಇಷ್ಟವಾಗಿದ್ಯಂತೆ. [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]

ಇಷ್ಟು ಬಿಟ್ಟರೆ, 'ಪುದಿಯ ನಿಯಮಮ್' ಚಿತ್ರವನ್ನ ಕನ್ನಡಕ್ಕೆ ತರುತ್ತಿರುವವರು ಯಾರು? ಡೈರೆಕ್ಟರ್ ಯಾರಾಗ್ತಾರೆ? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕಂತೂ, ರವಿಚಂದ್ರನ್ 'ಡ್ಯಾನ್ಸಿಂಗ್ ಸ್ಟಾರ್-3' ನಲ್ಲಿ ಬಿಜಿಯಾಗಿದ್ದಾರೆ.

English summary
According to the Grapevine, Kannada Actor, Crazy Star V.Ravichandran to star in the remake of Malayalam movie 'Puthiya Niyamam'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada