ಕ್ರೇಜಿಸ್ಟಾರ್ ಪುತ್ರಿಯ ನಿಶ್ಚಿತಾರ್ಥ: ಹುಡುಗ ಯಾರು ಗೊತ್ತಾ?
Recommended Video

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದಾರೆ. ಮನೋರಂಜನ್ ರವಿಚಂದ್ರನ್ ನಾಯಕನಾಗಿ ಮಿಂಚುತ್ತಿದ್ದರೇ, ವಿಕ್ರಂ ರವಿಚಂದ್ರನ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೊಬ್ಬರು ಸಹೋದರಿ ಕೂಡ ಇದ್ದಾರೆ. ಅವರ ಹೆಸರು ಗೀತಾಂಜಲಿ.
ಬೆಳೆದ ಮಕ್ಕಳು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ, ತಂದೆಯಾಗಿ ರವಿಚಂದ್ರನ್ ಅವರ ಮಕ್ಕಳ ಮದುವೆ ಮಾಡಲು ತಯಾರಿ ನಡೆಸಿದ್ದಾರೆ.
ಹೌದು, ಕ್ರೇಜಿಸ್ಟಾರ್ ನಿವಾಸದಲ್ಲಿ ಈಗ ಮದ್ವೆ ಸಂಭ್ರಮ ಮನೆ ಮಾಡಿದೆ. ಕ್ರೇಜಿಸ್ಟಾರ್ ಪುತ್ರಿ ಗೀತಾಂಜಲಿ ವೈವಾಹಿಕ ಜೀವನಕ್ಕೆ ಅಣಿಯಾಗಿದ್ದು, ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿಯಾಗಿದೆಯಂತೆ. ಹಾಗಿದ್ರೆ, ಎಂಗೇಜ್ ಮೆಂಟ್ ಯಾವಾಗ? ಕ್ರೇಜಿಸ್ಟಾರ್ ಅಳಿಯ ಯಾರು? ಮುಂದೆ ಓದಿ...

ಇಂದು ಎಂಗೇಜ್ ಮೆಂಟ್
ರವಿಚಂದ್ರನ್ ಮಗಳು ಗೀತಾಂಜಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು (ಫೆಬ್ರವರಿ 22) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

ಕ್ರೇಜಿಸ್ಟಾರ್ ಅಳಿಯ ಯಾರು?
ರವಿಚಂದ್ರನ್ ಅವರ ಪುತ್ರಿಯನ್ನ ವರಿಸಲಿರುವ ವರ ಯಾರು ಎಂಬ ಕುತೂಹಲಕ್ಕೆ ಒಂದು ಹಂತದ ಉತ್ತರ ಸಿಕ್ಕಿದೆ. ಅಂದ್ರೆ, ಅವರ ಹೆಸರು ಮಾತ್ರ ಬಹಿರಂಗವಾಗಿದ್ದು, ಫೋಟೋ ಸದ್ಯಕ್ಕೆ ಸಿಕ್ಕಿಲ್ಲ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅಜಯ್ ಜೊತೆ ಗೀತಾಂಜಲಿ ನಿಶ್ಚಿತಾರ್ಥ ನಡೆಯಲಿದೆಯಂತೆ.

ತೀರಾ ಖಾಸಗಿ ಕಾರ್ಯಕ್ರಮ
ಅಂದ್ಹಾಗೆ, ರವಿಚಂದ್ರನ್ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ತೀರಾ ಖಾಸಗಿಯಾಗಿದ್ದು, ಅಧಿಕೃತವಾಗಿ ಯಾವುದೇ ಮಾಹಿತಿಯೂ ಕೂಡ ಹೊರಹಾಕಿಲ್ಲ. ರವಿಚಂದ್ರನ್ ಅವರು ಸಹ ತಮ್ಮ ಕೌಟುಂಬಿಕ ಕಾರ್ಯಕ್ರಮಗಳಿಗೆ ಸೀಮಿತ ಮಂದಿಗೆ ಮಾತ್ರ ಆಹ್ವಾನ ನೀಡಿರುತ್ತಾರೆ. ಈ ಸಂತಸದ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರು ಬರ್ತಾರಾ ಸದ್ಯಕ್ಕೆ ಗೌಪ್ಯವಾಗಿದೆ.

'ದಶರಥ' ರವಿಚಂದ್ರನ್
ಸದ್ಯ ರವಿಚಂದ್ರನ್ ಅಭಿನಯದ ದಶರಥ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಇದರ ಜೊತೆಗೆ ರವಿಚಂದ್ರನ್ ನಟಿಸಿ, ನಿರ್ದೇಶಿಸುತ್ತಿರುವ ರಾಜೇಂದ್ರ ಪೊನ್ನಪ್ಪ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ತಕಧಿಮತ ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನಾಗಿ ನಟಿಸಿದ್ದಾರೆ.


Click it and Unblock the Notifications











